Homeಚಳವಳಿರೈತ ಹೋರಾಟದ ಆಧಾರ ಸ್ತಂಭಗಳಾಗಿವೆ ಈ ಆಸ್ಪತ್ರೆಗಳು ಮತ್ತು ವೈದ್ಯರು..!

ರೈತ ಹೋರಾಟದ ಆಧಾರ ಸ್ತಂಭಗಳಾಗಿವೆ ಈ ಆಸ್ಪತ್ರೆಗಳು ಮತ್ತು ವೈದ್ಯರು..!

ದೆಹಲಿಯ ಗಡಿಗಳಲ್ಲಿ ಲೈಫ್ ಕೇರ್ ಫೌಂಡೇಷನ್‌ನಂತಹ ಸಂಸ್ಥೆಗಳು 6, 7 ಬೆಡ್‌ಗಳಿರುವ ಸಣ್ಣ ಪ್ರಮಾಣದ 24 ಗಂಟೆಗಳು ಕಾರ್ಯ ನಿರ್ವಹಿಸುವ ಆಸ್ಪತ್ರೆಗಳನ್ನು ನಡೆಸುತ್ತಿವೆ.

- Advertisement -
- Advertisement -

ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ರೈತ ಹೋರಾಟದಲ್ಲಿ ಹಸಿವು ನೀಗಿಸುವ ಲಂಗರ್‌ಗಳಂತೆ ಇನ್ನಷ್ಟು ಆಧಾರ ಸ್ತಂಭಗಳಾಗಿರುವುದು ವೈದ್ಯರು, ಆಸ್ಪತ್ರೆಗಳು, ಪುಟ್ಟ ಕ್ಲಿನಿಕ್‌ಗಳು, ಆಂಬ್ಯುಲೆನ್ಸ್ ಮತ್ತು ಔಷಧಾಲಯಗಳು.

ಹೌದು, ಹೊಲಗಳಲ್ಲಿ ದುಡಿಯುವ ರೈತರಿಗೆ ಚಳಿ ಹೊಸದಲ್ಲದೆ ಇರಬಹುದು. ಆದರೆ ಈಗ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರಿಗೆ ಇಲ್ಲಿನ ವಾತಾವರಣ, ತೀವ್ರಚಳಿ, ಮಂಜು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಈಗಾಗಲೇ ತೀವ್ರ ಚಳಿಗೆ ಹಲವಾರು ರೈತರು ಬಲಿಯಾಗಿದ್ದಾರೆ.

ಹೀಗಾಗಿ ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿಯೂ ಆಸ್ಪತ್ರೆಗಳು, ವೈದ್ಯರು ದಂಡು, ನೂರಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನೀವು ಕಾಣಬಹುದು. ಆಂಬ್ಯುಲೆನ್ಸ್‌ಗಳೆ ಇಲ್ಲಿ ಆಸ್ಪತ್ರೆಗಳಾಗಿ, ಕ್ಲಿನಿಕ್‌ಗಳಾಗಿ ಹೆಚ್ಚು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಡುವೆ ಲೈಫ್ ಕೇರ್ ಫೌಂಡೇಷನ್‌ನಂತಹ ಸಂಸ್ಥೆಗಳು 6, 7 ಬೆಡ್‌ಗಳಿರುವ ಸಣ್ಣ ಪ್ರಮಾಣದ 24 ಗಂಟೆಗಳು ಕಾರ್ಯ ನಿರ್ವಹಿಸುವ ಆಸ್ಪತ್ರೆಗಳನ್ನು ನಡೆಸುತ್ತಿವೆ.

ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!

ಸಿಂಘು ಗಡಿಯಲ್ಲಿರುವ ಲೈಫ್ ಕೇರ್ ಫೌಂಡೇಷನ್‌ನ ಕಿಸಾನ್ ಆಸ್ಪತ್ರೆ

ಸಿಂಘು ಗಡಿಯಲ್ಲಿರುವ ಲೈಫ್ ಕೇರ್ ಫೌಂಡೇಷನ್‌ನ ಕಿಸಾನ್ ಆಸ್ಪತ್ರೆಯಲ್ಲಿ ಸುಮಾರು 20 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಮತ್ತು ಪಕ್ಕದಲ್ಲೇ ಮೆಡಿಕಲ್ ಎರಡನ್ನು ಹೊಂದಿರುವ ಈ ಸಂಸ್ಥೆ ಸಾವಿರಾರು ಜನರಿಗೆ ಉಚಿತವಾಗಿ ಸೇವೆ ನೀಡುತ್ತಿದೆ.

“ಪ್ರತಿಭಟನೆ ಆರಂಭವಾದಾಗ ನಾವು ಒಂದು ಆಂಬ್ಯುಲೆನ್ಸ್‌ನಲ್ಲಿ ಇಲ್ಲಿ ಕ್ಲಿನಿಕ್ ಆರಂಭ ಮಾಡಿದ್ದೆವು. ಕಡಿಮೆ ಸಿಬ್ಬಂದಿ ಇದ್ದರು. ಆದರೆ ದಿನ ಕಳೆದಂತೆ ಪ್ರತಿಭಟನೆ ತೀವ್ರಗೊಳ್ಳತೊಡಗಿತು. ಕೆಲವು ರೈತರು ಸಾವನ್ನಪ್ಪಿದರು. ಹಾಗಾಗಿ ನಮ್ಮ ಸಂಸ್ಥೆ ಇಲ್ಲಿ ಸಣ್ಣ ಆಸ್ಪತ್ರೆ ನಿರ್ಮಿಸಲು ಯೋಚಿಸಿ, ಕಾರ್ಯರೂಪಕ್ಕೆ ತಂದಿತು. ಈಗ ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಸೇರಿ 20 ಮಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪಕ್ಕದಲ್ಲಿ ಮೆಡಿಕಲ್ ಇದೆ. ಅಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ” ಎಂದು 12 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಪೂಜಾ ನಾನುಗೌರಿ.ಕಾಂಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: NIAಯಿಂದ ಸಮನ್ಸ್‌ ಪಡೆದಿದ್ದ ‘ಖಾಲ್ಸಾ ಏಡ್‌’ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ!

ಪಂಜಾಬ್‌ನ ಅಮೃತ್‌ಸರದ ಕ್ಲಿನಿಕಲ್ ಲ್ಯಾಬೊರೇಟರಿ ಅಸೋಸಿಯೆಷನ್‌ ಸದಸ್ಯರು, 15 ದಿನಕ್ಕೆ ಒಂದರಂತೆ 25 ಜನರ ತಂಡ ಸಿಂಘು ಬಾರ್ಡರ್‌, ಟಿಕ್ರಿ ಬಾರ್ಡ್‌ರ್‌ಗಳಲ್ಲಿ ಉಳಿದುಕೊಂಡು ರೈತರ ಸೇವೆ ಮಾಡುತ್ತಿದೆ. ರಕ್ತದ ಪರೀಕ್ಷೆ, ಮಧುಮೇಹ ಪರೀಕ್ಷೆ ಮಾಡುವ ಇವರ ತಂಡ ವರದಿ ಆಧಾರದಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡುವ ಕೆಲಸ ಮಾಡುತ್ತಿದೆ.

ತಮ್ಮ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಸೇವೆ ಬಗ್ಗೆ ಮಾತನಾಡಿದ ಮಂಜಿಂದರ್‌ ಸಿಂಗ್, ರಂದೀಪ್ ಸಿಂಗ್ ಮತ್ತು ಗುರು ವಿಶ್ವಾಸ್‌ ಸಿಂಗ್, “ನಾವು ಕಳೆದ ವಾರದಿಂದ ಇಲ್ಲಿ ಉಳಿದುಕೊಂಡಿದ್ದೇವೆ. ಈ ಮೊದಲು ಟಿಕ್ರಿ ಗಡಿಯಲ್ಲಿ ಇದ್ದೆವು. ರಕ್ತ ಮತ್ತು ಮಧುಮೇಹ ಪರೀಕ್ಷೆ ನಡೆಸುತ್ತೆವೆ. ದೇಶದ ರೈತರು ಇಂದು ಕಷ್ಟದಲ್ಲಿದ್ದಾರೆ. ನಮ್ಮಿಂದಾಗುವ ಎಲ್ಲಾ ಸೇವೆ ಮಾಡಲು ನಾವು ತಯಾರಿದ್ದೇವೆ. ಪ್ರತಿಭಟನೆ ಮುಗಿಯುವವರೆಗೂ ನಾವು ಇಲ್ಲಿಯೇ ಇರಲು ತೀರ್ಮಾನಿಸಿದ್ದೇವೆ” ಎಂದಿದ್ದಾರೆ.

ಅಮೃತ್‌ಸರದ ಕ್ಲಿನಿಕಲ್ ಲ್ಯಾಬೊರೇಟರಿ ಅಸೋಸಿಯೆಷನ್ ಸದಸ್ಯರು

ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

ಇನ್ನೂ ಪಂಜಾಬಿನಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಆರಂಭವಾದಾಗಿನಿಂದಲೂ ರೈತರ ಜೊತೆಗೆ ನಿಂತು ಸೇವೆ ನೀಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ಯುನೈಟೆಡ್ ಸಿಖ್ಸ್, ಗಡಿಗಳಲ್ಲೂ ಪ್ರತಿಭಟನಾ ನಿರತ ರೈತರ ಸೇವೆಗೆ ಆಧಾರ ಸ್ತಂಭವಾಗಿ ನಿಂತಿದೆ.

ನೈಸರ್ಗಿಕ ವಿಕೋಪಗಳು, ಆರೋಗ್ಯ, ಶಿಕ್ಷಣ ಮತ್ತು ಹೋರಾಟಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಳ್ಳುವ ಈ ಸಂಸ್ಥೆ ಸಿಂಘು ಗಡಿಯಲ್ಲಿ ದೆಹಲಿ ಚಲೋ ಆರಂಭವಾದಾಗಿನಿಂದಲೂ ಇದೆ. ಅದು ಮೂರು ಬೆಡ್‌ಗಳ ಪುಟ್ಟ ಆಸ್ಪತ್ರೆ ಜೊತೆಗೆ ಮೆಡಿಕಲ್ ಶಾಪ್ ಹೊಂದಿದೆ.

ಬರೀ ಆರೋಗ್ಯ ಸೇವೆಗೆ ಮಾತ್ರ ತನ್ನ ಸೇವೆ ಮೀಸಲಿರಿಸದ ಈ ಸಂಸ್ಥೆ ಪ್ರತಿಭಟನಾ ನಿರತ ರೈತರಿಗೆ ದಿನ ಬಳಕೆಯ ಮೂಲ ವಸ್ತುಗಳಿಂದ ಹಿಡಿದು ರೈತರಿಗೆ ಚಳಿಯಿಂದ ತಪ್ಪಿಸಿಕೊಳ್ಳಲು, ಮಲಗಲು ಸ್ಲೀಪಿಂಗ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದೆ.

ದೆಹಲಿ ಚಲೋ ಆರಂಭವಾದ ತಕ್ಷಣ ಪಂಜಾಬ್‌ನಲ್ಲಿಯೇ ಇದ್ದ ನಾವು 2 ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯರೊಂದಿಗೆ ಇಲ್ಲಿಗೆ ಬಂದೆವು. ತಕ್ಷಣ ಊಟ, ನೀರಿನ ವ್ಯವಸ್ಥೆ ಮಾಡಿದೆವು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಬರುತ್ತಿದ್ದ ಕಾರಣ ಮೂರು ಬೆಡ್‌ಗಳ ಸಣ್ಣ ಆಸ್ಪತ್ರೆ ಮಾಡಿಕೊಂಡೆವು. ಹರಿಯಾಣದ ಆರೋಗ್ಯ ಆಸ್ಪತ್ರೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿ‌ರುವವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೆವೆ ಎಂದು ಯುನೈಟೆಡ್ ಸಿಖ್ಸ್‌ ಸಂಸ್ಥೆಯ ಅಧಿಕಾರಿ ರಾಜೇಂಧರ್ ಸಿಂಗ್ ತಿಳಿಸಿದ್ದಾರೆ.

ಗಡಿಗಳಲ್ಲಿ ವಿಪರೀತ ಎನಿಸುವಷ್ಟು ಚಳಿ ಇದೆ. ಇದರಿಂದ ದೇಹದ ಭಾಗಗಳು ಹೆಚ್ಚಾಗಿ ನೋವಿಗೆ ಒಳಗಾಗುತ್ತಿದ್ದು, ಇಂತವರಿಗೆ ಆಸ್ಪತ್ರೆಗಳು ನೆರವು ನೀಡುತ್ತಿದೆ. ರೈತ ಹೋರಾಟದಲ್ಲಿ ಹೆಚ್ಚಾಗಿರುವ ವೃದ್ಧರು ಬೇಗನೆ ಕಾಯಿಲೆಗೆ ಒಳಗಾಗುತ್ತಿದ್ದು, ಆಸ್ಪತ್ರೆಗಳು, ವೈದ್ಯರು ಇಲ್ಲದಿದ್ದರೇ ಈ ಐತಿಹಾಸಿಕ ಹೋರಾಟದ ಗತಿ ಬೇರೆ ರೀತಿಯಲ್ಲಿರುತ್ತಿತ್ತು ಎನಿಸುತ್ತದೆ.


ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...