HomeಚಳವಳಿNIAಯಿಂದ ಸಮನ್ಸ್‌ ಪಡೆದಿದ್ದ 'ಖಾಲ್ಸಾ ಏಡ್‌' ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ!

NIAಯಿಂದ ಸಮನ್ಸ್‌ ಪಡೆದಿದ್ದ ‘ಖಾಲ್ಸಾ ಏಡ್‌’ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ!

ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಮುಂದೂಡಿದೆ.

- Advertisement -
- Advertisement -

ಕಳೆದ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆನ್ನೆಲುಬಿನಂತಿರುವ ಖಾಲ್ಸಾ ಏಡ್‌ ಎಂಬ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ 2021ರ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ. ಈ ಸಂಸ್ಥೆಗೆ ದೇಣಿಗೆ ಹರಿದು ಬರುತ್ತಿರುವ ಹಿನ್ನೆಲೆಯನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳ(NIA)ವು ಜನವರಿ 16 ರಂದು ಸಮನ್ಸ್‌ ನೀಡಿತ್ತು.

ಕೆನಡಾದ ಸಂಸದರಾದ ಉಪಲ್‌ ಅವರು ಖಾಲ್ಸಾ ಸಂಸ್ಥೆಯನ್ನು ನಾಮನಿರ್ದೇಶನಕ್ಕೆ ಮನವಿ ಮಾಡಿ ಜನವರಿ 14 ರಂದು ಪತ್ರ ಬರೆದಿದ್ದರು.

ಇದನ್ನೂ ಓದಿ: ’ರೈತ ಹೋರಾಟಕ್ಕೆ ಹೆಗಲು ಕೊಟ್ಟು ನಿಂತಿದೆ ಖಾಲ್ಸಾ ಏಡ್‌ ಸೇವಾ ಸಂಸ್ಥೆ’

ಇಂಗ್ಲೆಂಡಿನ ಮೂಲದ ಖಾಲ್ಸಾ ಏಡ್‌ ಸಂಸ್ಥೆ 1999 ರಲ್ಲಿ ರವೀಂದರ್‌ ಸಿಂಗ್‌ ಅವರಿಂದ ಸ್ಥಾಪನೆಯಾಯಿತು. ಸಿಖ್‌ ಸಮುದಾಯದ ಈ ಸಂಸ್ಥೆಯು ನಿಧಾನವಾಗಿ ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿದೆ. “ಮನುಕುಲವನ್ನು ಒಂದೆಂದು ಭಾವಿಸಿ, ಮಾನವೀಯತೆಯ ಸೇವೆ” ಮಾಡುವುದು ಈ ಸಂಸ್ಥೆಯ ಧ್ಯೇಯ.

ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಖಾಲ್ಸಾ ಏಡ್‌, ಪ್ರವಾಹ ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಎಲ್ಲ ರೀತಿಯ ನೆರವನ್ನು ಒದಗಿಸಿದೆ.

ಇಲ್ಲಿ ಉಲ್ಲೇಖಿಸಬಹುದಾದ ಕೆಲವು ನೆರವಿನ ಚಟುವಟಿಕೆಗಳು ಇಂತಿವೆ

  • 1999ರ ಟರ್ಕಿ ಭೂಕಂಪದ ವೇಳೆ ಸಂತ್ರಸ್ತರಿಗೆ ಮೂಲ ಸೌಕರ್ಯ.
  • 2000 ದಲ್ಲಿ ಒರಿಸಾದಲ್ಲಿ ಚಂಡಮಾರುತದಿಂದ ಉಂಟಾದ ಅನಾಹುತದ ರಕ್ಷಣಾ ಕಾರ್ಯಕ್ಕೆ ಸ್ವಯಂ ಸೇವಕರ ರವಾನೆ
  • ಆಫ್‌ಘಾನಿಸ್ತಾನದಲ್ಲಿ 2003 ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಉಪಕರಣ ಹಾಗೂ ಆರ್ಥಿಕ ನೆರವು.
  • 2016 ರಲ್ಲಿ ಲಂಡನ್‌ನಲ್ಲಿ ಉಂಟಾದ ಪ್ರವಾಹದಿಂದಾಗಿ ಸಂತ್ರಸ್ತರಿಗೆ ಶಿಬಿರಗಳ ಸ್ಥಾಪನೆ ಮತ್ತು ನೆರವು.
  • ಬಾಂಗ್ಲಾ-ಮಯನ್ಮಾರ್‌ ಗಡಿಯಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರಿಗೆ ಸೇವೆ.
  • 2018 ರಲ್ಲಿ ಇಡೀ ಕೇರಳವನ್ನು ನಡುಗಿಸಿದ ಪ್ರವಾಹದ ವೇಳೆ ಅತಿ ದೊಡ್ಡ ನೆರವಿನ ಕಾರ್ಯವನ್ನು ನಡೆಸಿದ ಹೆಗ್ಗಳಿಕೆ ಖಾಲ್ಸಾ ಸಂಸ್ಥೆಯದ್ದು.

ಈಗ ಪಂಜಾಬಿನಿಂದ ಆರಂಭವಾಗಿ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ಭಾರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ್ದು, ಬಟ್ಟೆ, ಊಟ, ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲಕ್ಕೆ ನಿಂತಿದ್ದೆ. ಸರ್ಕಾರ ವಿರುದ್ಧದ ಹೋರಾಟಕ್ಕೆ ಈ ರೀತಿಯಲ್ಲಿ ಬೆನ್ನಿಗೆ ನಿಂತ ಕಾರಣಕ್ಕೆ ಭಯೋತ್ಪಾದಕ ಸಂಸ್ಥೆ ಎಂದು ದೂಷಿಸಿದ್ದು ಅಲ್ಲದೆ, ವಿಚಾರಣೆಗೆ ಕರೆದಿತ್ತು.

ಇದನ್ನೂ ಓದಿ: ಭಯೋತ್ಪಾದಕ ಸಂಘಟನೆಗಳ ನಂಟಿನ ಆರೋಪ: ರೈತ ಹೋರಾಟಗಾರರಿಗೆ NIA ನೋಟಿಸ್

ಆದರೆ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಮುಂದೂಡಿದೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ


ಇದನ್ನೂ ಓದಿ: ರೈತ ಹೊಸ ಬೆಳೆಯನ್ನು ಬೆಳೆಯಬಲ್ಲ…. ಹೊಸ ನಗರವನ್ನು ಸೃಷ್ಟಿಸಬಲ್ಲ…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...