Homeಅಂಕಣಗಳುಅನುಭಾವಿಗಳ ಕ್ರಾಂತಿ ತಿಳಿಯಲು 600 ಕೋಟಿ ರೂಗಳ ಕಟ್ಟಡವಷ್ಟೇ ಸಾಕೆ?

ಅನುಭಾವಿಗಳ ಕ್ರಾಂತಿ ತಿಳಿಯಲು 600 ಕೋಟಿ ರೂಗಳ ಕಟ್ಟಡವಷ್ಟೇ ಸಾಕೆ?

- Advertisement -
- Advertisement -

ಹೈದ್ರಾಬಾದು-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಸ್ತಾಪುರ ಬಂಗಲಾ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದರೆ ಸಿಗುವುದು ತ್ರಿಪುರಾಂತ. ಮೊದಲಿಗೆ ಸಣ್ಣ ಹಳ್ಳಿ ಆಗಿದ್ದ ಇದು ಈಗ ಬಸವಕಲ್ಯಾಣ ನಗರದ ಬಡಾವಣೆ ಆಗೇದ.

ತ್ರಿಪುರಾಂತದೊಳಗ ಇರೋ ನೀರಿನ ಮೂಲ ಎರಡು. ಒಂದು ಬಂದವರ ಓಣಿ, ಇನ್ನೊಂದು ತ್ರಿಪುರಾಂತ ಕೆರೆ. ಪವಿತ್ರ ಸ್ಥಳದಾಗ ಇರೋ ಕೆರೆ, ಬಾವಿ ಅಥವಾ ನೀರಿನ ಮೂಲಕ್ಕ ಕಲ್ಯಾಣಿ ಅಂತ ಹೆಸರು. ಈ ತ್ರಿಪುರಾಂತದ ಕಲ್ಯಾಣಿಯಿಂದಲೇ ಈ ಊರಿಗೆ ಹೆಸರು ಬಂತು. ಇಂದಿಗೂ ಹಳ್ಳಿ ಮಂದಿ ‘ಎಲ್ಲಿಂದ ಬಂದೀಯೋ?’ ಅಂದ್ರ ‘ನಾ ಕಲ್ಯಾಣಿಯಿಂದ ಬಂದೆ’ ಅಂತಾರ. ಗೈರು ಕನ್ನಡದವರು-ಅಂದ್ರ ತೆಲುಗು, ಮರಾಠಿ, ಉರ್ದು- ಹಿಂದಿ ಮಾತಾಡುವರು ಈ ಊರಿಗೆ ಕಲ್ಯಾಣಿ ಅಂತಲೇ ಕರೀತಾರ.

ಮೊದಲೆಲ್ಲಾ ಸರ್ಕಾರಿ ದಾಖಲೆಯೊಳಗ ಕಲ್ಯಾಣಿ ಅಂತಲೇ ಇತ್ತು. ಅದು ಅರವತ್ತರ ದಶಕದೊಳಗ ಬಸವಕಲ್ಯಾಣ ಅಂತ ಮರುನಾಮಕರಣ ಆತು. ಶರಣರ ವಚನದೊಳಗ ಸಹಿತ ‘ಕಲ್ಯಾಣವೆಂಬೋ’ ಪಟ್ಟಣ ಅಂತ ಈ ಊರಿನ ಹೆಸರು ಹೇಳತಾರ.

ಕಲ್ಯಾಣ ಕ್ರಾಂತಿಯ ಕಾಲದಾಗ 770 ಶರಣರು ಇದ್ದರೂ ಅವರ ಎಲ್ಲರ ವಚನ ಲಭ್ಯ ಇಲ್ಲ. ಈಗ ಲಭ್ಯವಿರುವ 250 ಶರಣರ 21,000 ವಚನಗಳಲ್ಲಿ ಸುಮಾರು 120 ಕಡೆ ಕಲ್ಯಾಣ ಅನ್ನುವ ಪದ ಬರ್ತದ. ಅದರಾಗ ಅನೇಕ ಜನ ಆ ಊರಿನ ಹೆಸರು ಹಾಗೂ ಜನ ಕಲ್ಯಾಣ ಅನ್ನುವ ಅರ್ಥದೊಳಗ ಅದನ್ನ ಬಳಸಿಕೊಂಡಾರ.

ಆ ಕೆರೆ ಈಗ ಅರ್ಧ ಒಣಗಿ ಹೋಗೇತಿ. ಅದು ಅಷ್ಟೇ ಅಲ್ಲ, ಅಲ್ಲಿನ ಸುಮಾರು 25 ಶರಣರ ಸಮಾಧಿ-ಸ್ಮಾರಕ-ಗವಿಗಳ ಹತ್ತಿರ ಇರುವ ಕೆರೆ-ಬಾವಿಗಳು ಸಹಿತ ‘ನಳನಳಿಸುವ ಸ್ಥಿತಿ’ಯೊಳಗ ಇಲ್ಲ. ಕಲ್ಯಾಣದ ಇತಿಹಾಸ ಸಂಶೋಧಕರ ಪ್ರಕಾರ ಅಲ್ಲಿ 100ಕ್ಕೂ ಹೆಚ್ಚು ಸ್ಮಾರಕ ಇರಬೇಕಾಗಿತ್ತು. ಆದರ ಅಲ್ಲೆ ಸದ್ಯಕ್ಕ 27 ಸ್ಮಾರಕ ಪತ್ತೆ ಹಚ್ಚಿ ಅಭಿವೃದ್ಧಿ ಮಾಡೋ ಕೆಲಸ ಶುರು ಆಗೇದ.

PC : Praveen Hanchinal

ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿದ ಅಥವಾ ಪುನರ್ ನಿರ್ಮಾಣ ಮಾಡಿದ ಈ ಸ್ಮಾರಕಗಳು ಭಾಳ ಛಂದ ಅದಾವು. ಆದರ ಅಲ್ಲೆ ಇದು ಹಿಂಗ, ಇದರ ಇತಿಹಾಸ ಹಿಂಗ ಅಂತ ಹೇಳಿಕೊಡುವ ಗೈಡುಗಳು ಇಲ್ಲ. ನೀವು ಬಸವಕಲ್ಯಾಣ ಬಸ್ ನಿಲ್ದಾಣದೊಳಗ ಇಳದು ಇಲ್ಲೆ ನಾವು ಏನು ಏನು ನೋಡಬಹುದು ಅಂತ ಕೇಳಿದರ ಹೇಳೋ ಪ್ರವಾಸೋದ್ಯಮ ಇಲಾಖೆ ಕಚೇರಿ ಇಲ್ಲ. ಸಿಟಿ ರೌಂಡ್ ಹೊಡೆಸಿಕೊಂಡು ಬರುವ ಟ್ಯಾಕ್ಸಿ ಸೇವೆ ಇಲ್ಲ.

ತಾಲೂಕು ಕೇಂದ್ರ ಆಗಿರುವ ಈ ಪಟ್ಟಣದಿಂದ ಬೇರೆ ಬೇರೆ ಪಕ್ಷದ ಶಾಸಕರು ಆರಿಸಿಹೋಗಿದ್ದರೂ ಸಹಿತ, ಅದು ಹಿಂದುಳಿದ ಹೈದರಾಬಾದ್ ಕರ್ನಾಟಕದ ಛಾಪು ಉಳಿಸಿಕೊಂಡದ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅದು ಶತಮಾನಗಳಷ್ಟು ಹಿಂದೆ ಉಳಿದದ. ಅಲ್ಲಿ ಒಂದು ಉನ್ನತ ಗುಣಮಟ್ಟದ ಆಸ್ಪತ್ರೆ ಇಲ್ಲ. ಇಲ್ಲಿ ಮಹಿಳಾ ವೈದ್ಯರು, ಹೃದಯತಜ್ಞರು, ಕಿಡ್ನಿ ತಜ್ಞರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ತಾಲೂಕ ಆಸ್ಪತ್ರೆ ಇದೆ. ಅದು ಸುಸಜ್ಜಿತವಾಗಿಲ್ಲ. ಇತರ ನಗರದೊಳಗ ಇರುವಂತ ಆರೋಗ್ಯ ಕೇಂದ್ರ ಇಲ್ಲಿಲ್ಲ.

ಬಸವಕಲ್ಯಾಣದೊಳಗ ಒಂದು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲ. ಇಡೀ ತಾಲೂಕಿನಲ್ಲಿ ಕೇವಲ ಒಂದು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ ಎರಡು ಸರ್ಕಾರಿ ಪಿಯುಸಿ ಕಾಲೇಜು ಇವೆ.

ಇದಕ್ಕೆ ಹೋಲಿಸಿದರೆ ಹಾಸನ ತಾಲೂಕಿನಲ್ಲಿ ಆರು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ 12 ಸರ್ಕಾರಿ ಪಿಯುಸಿ ಕಾಲೇಜು ಇವೆ.

ಅದರ ಪಕ್ಕದ ಹೊಳೆನರಸೀಪುರ ಕ್ಷೇತ್ರದೊಳಗ ಅರ್ಧ ಡಜನ್ ಸರ್ಕಾರಿ ಡಿಗ್ರಿ ಕಾಲೇಜು ಅದಾವು.

ಇಲ್ಲಿ ಒಂದು ರಿಂಗ್ ರೋಡ್ ಇಲ್ಲ. ಬೈಪಾಸ್ ರಸ್ತೆ ಇಲ್ಲ. ಹೊಸ ಮಾದರಿಯ ಬಸ್ ನಿಲ್ದಾಣ ಇಲ್ಲ. ಅತ್ಯಂತ ಹತ್ತಿರದ ರೈಲ್ವೆ ಹಳಿ 35 ಕಿಲೋಮೀಟರ್ ದೂರ ಐತಿ. ಅಲ್ಲಿಗೆ ಒಂದೇ ರೈಲು ಬರಬೇಕಾಗಿತ್ತು. ಅದೂ ಬಂದಿಲ್ಲ. ಅತಿ ಹತ್ತಿರದ ರೈಲು ಬರೋ ನಿಲ್ದಾಣ 100 ಕಿಲೋಮೀಟರ್ ದೂರ ಬೀದರ್‌ದಾಗ ಐತಿ.

ಕುಡಿಯುವ ನೀರು, ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಒಳಚರಂಡಿ ಇಲ್ಲ. ಜಿಲ್ಲಾ ಕೇಂದ್ರ ಬೀದರ್‌ಗಿಂತ ಕಲ್ಯಾಣ ದೊಡ್ಡದಾದರೂ ಇಲ್ಲಿ ನಗರ ಬಸ್ ಸಂಚಾರ ಇಲ್ಲ. ಪ್ರವಾಸಿಗರಿಗಾಗಿ ವಿಶೇಷ ಬಸ್ ವ್ಯವಸ್ಥೆ ಇಲ್ಲ. ಮೂರು ಯಾತ್ರಿ ನಿವಾಸ ಅದಾವು. ಆದರ ಅದರ ಮಾಹಿತಿ ಅಂತರಜಾಲದಾಗ ಇಲ್ಲ.

ಬಸವಕಲ್ಯಾಣವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳ ಮಾಡಬೇಕು ಅಂತ ಹೇಳಿದವರು ಹಲವರು. ಅದನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುತ್ತೇವೆ ಅಂತ ಹೇಳಿದವರು ಇಲ್ಲ. ಇಲ್ಲಿ ಬಸವಣ್ಣನ ಬಗ್ಗೆ, ಇತರ ಶರಣರ ಬಗ್ಗೆ, ಒಂದು ದೊಡ್ಡ ಮ್ಯೂಜಿಯಂ ಅಥವಾ ಲೈಬ್ರರಿ ಇಲ್ಲ. ಮಲ್ಟಿಮೀಡಿಯಾದಂತಹ ಆಧುನಿಕ ತಂತ್ರಜ್ಞಾನ ಬಳಸಿ ಹನ್ನೆರಡನೇ ಶತಮಾನದ ಕ್ರಾಂತಿಯ ಕತೆ ಹೇಳುವ ಕೇಂದ್ರ ಇಲ್ಲ. ಹಾಡು-ನೃತ್ಯ, ನಾಟಕ-ಜನಪದ ಕಲೆ ತೋರುವ, ಬೆಳೆಸುವ ಕೇಂದ್ರ ಇಲ್ಲ. ಆಧುನಿಕ ತಾಂತ್ರಿಕತೆಯ ರಂಗಮಂದಿರ ಇನ್ನೂ ಆಗಬೇಕು.

ಒಂದು ಉನ್ನತ ಗುಣಮಟ್ಟದ ವಚನ ಸಂಶೋಧನಾ ಕೇಂದ್ರ ಇಲ್ಲ. ಪಕ್ಕದ ಮಹಾರಾಷ್ಟ್ರದ ಸಂತರ, ತೆಲಂಗಾಣದ ಭಕ್ತಿ ಕವಿಗಳ ಕೃತಿ ಚರ್ಚಿಸುವ, ಪರಿಚಯಿಸುವ, ಸ್ಥಳೀಯ ಸೂಫಿ ಸಂತರ ಬಗ್ಗೆ ತಿಳಿಸಿಕೊಡುವ ಸಂಸ್ಥೆ ಇಲ್ಲ.

ಕಲ್ಯಾಣವನ್ನು ಶತಮಾನಗಳಗಟ್ಟಲೆ ಆಳಿದ, ಕಲ್ಯಾಣಿ ಚಾಲುಕ್ಯರ ಆಡಳಿತ ಕುರಿತು ಅಧ್ಯಯನ ನಡೆಸುವ, ಪ್ರಚಾರ ಮಾಡುವ ಪ್ರಯತ್ನ ಆಗಿಲ್ಲ. ದೇಶದ ತುಂಬ ವಿಶಿಷ್ಟ ವಾಸ್ತುಶಿಲ್ಪಗಳ ದೇವಾಲಯ ಕಟ್ಟಿದ, ಮಾನಸೋಲ್ಲಾಸದಂತಹ ಎನ್‌ಸೈಕಲೋಪೀಡಿಯ ಬರೆದ, ಪ್ರಾಣಿ ವಿಜ್ಞಾನದ ಬಗ್ಗೆ ಪುಸ್ತಕ ಬರೆದ ಚಾಲುಕ್ಯ ಅರಸು-ಪಂಡಿತರ ಬಗ್ಗೆ ಒಂದು ಸ್ಮಾರಕವೂ ಇಲ್ಲ. ಅವರು ಕಟ್ಟಿದ, ಮೂರು ಅಂತಸ್ತಿನ ಕೋಟೆ ಸುಸ್ಥಿತಿಯಲ್ಲಿ ಇಲ್ಲ.

ಕನ್ನಡಿಗರನ್ನು ಬಿಟ್ಟು ಹೊರಗಿನವರು ಬಂದರೆ, ವಿದೇಶೀಯರು ಬಂದರೆ ಅವರ ಕೈ ಹಿಡಿದು ಊರು ತೋರಿಸುವ ಸಂಸ್ಥೆಗಳು ಇಲ್ಲ. ಸಂಪನ್ಮೂಲ ವ್ಯಕ್ತಿಗಳು ಕಮ್ಮಿ. ವಿಶ್ವಕ್ಕೇ ದಾರಿ ತೋರಬಹುದಾದ ಕನ್ನಡ ನಾಡಿನ ಸಾಂಸ್ಕೃತಿಕ ಕ್ರಾಂತಿಯ ಪರಿಚಯ ಇತರರಿಗೆ ಮಾಡುವ ಪ್ರಯತ್ನಗಳನ್ನು ಸರಕಾರ ಮಾಡಿಲ್ಲ.

PC : Prajavani

ಅಂದಂಗ ನಮ್ಮ ಘನ ಸರಕಾರ ಆರು ನೂರು ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಕಟ್ಟಡ ಕಟ್ಟುವ ಘೋಷಣೆ ಮಾಡಿದ್ದು ನಿಮಗ ಗೊತ್ತು ಇರಬೇಕು. ಮುಖ್ಯಮಂತ್ರಿಯವರು ಹೋಗಿ ಕಲ್ಲು ಹಾಕಿರುವ ಈ ಕಟ್ಟಡದ ಹೆಸರು ಅನುಭವ ಮಂಟಪ. ಈಗಾಗಲೇ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಅನುಭವ ಮಂಟಪ ಮಾದರಿಯ ಒಂದು ದೊಡ್ಡ ಕಟ್ಟಡ ಐತಿ.ಆ ಕಟ್ಟಡದ ವಿನ್ಯಾಸ ತಯಾರು ಆಗಿಲ್ಲ. ಅದರ ಹಣಕಾಸು ಯೋಜನೆ ಸರ್ಕಾರದ ಮುಂದೆ ಬಂದಿಲ್ಲ. ಟೆಂಡರ್ ಆಗಿಲ್ಲ. ಜಮೀನು ಗುರುತು ಆಗಿಲ್ಲ. ಆದರ ಮುಂದ ಬರೋ ಉಪ ಚುನಾವಣೆ ತಯಾರಿಗಾಗಿ ಸರಕಾರ ಅನುಭವ ಮಂಟಪದ ಘೋಷಣೆ ಮಾಡೆದ.

ಅಂದ ಹಂಗ ಪ್ರಮಥರಲ್ಲಿ ಒಬ್ಬರಾದ ಗುರು ಸಿದ್ದೇಶ್ವರ ಅವರು ತಮ್ಮ ವಚನಗಳಲ್ಲಿ ಅನುಭವ ಮಂಟಪ ಅನ್ನುವ ಪದ ಬಳಸೋದಿಲ್ಲ. ಅನುಭಾವ ಮಂಟಪ ಅನ್ನುವ ಪದ ಬಳಕೆ ಮಾಡತಾರ. ಒಂದು ಆಕಾರದೊಳಗ ನಾವು ನೋಡೋ ರೀತಿನ ಬದಲು ಆಗತದ ಅಂತ ತೋರಿಸಿಕೊಡತಾರ.

ಗುರುಸಿದ್ಧ ದೇವರ ವಚನಗಳಲ್ಲಿ ಅನುಭಾವ ಮಂಟಪ ಒಂದು ಉದಾಹರಣೆ.

ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ!
ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ
ಬಸವ ಮೊದಲಾದ ಪ್ರಮಥರೆಲ್ಲ
ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ,
ಮಹಾಲಿಂಗೈಕ್ಯಾನುಭಾವವ ಬೆಸಗೊಳಲು
ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ,
ಸಂಗನಬಸವೇಶ್ವರ.

ನಾವೆಲ್ಲಾ ಅನುಭಾವದ ಬಗ್ಗೆ ತಿಳಿದುಕೊಳ್ಳಲಿಕ್ಕೆ ಇನ್ನೂ ತಡ ಆಗಿಲ್ಲ, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕನ್ನಡ ವಿವಿ ಉಳಿಸಿ ಅಭಿಯಾನ: ಕರವೇ ಹೋರಾಟಕ್ಕೆ ಭಾಗಶಃ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...