ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ’ಕನ್ನಡವಿವಿಉಳಿಸಿ’ ಅಭಿಯಾನ ತಾರ್ಕಿಕ ಅಂತ್ಯ ಕಾಣುವ ಭರವಸೆ ಮೂಡಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಹೇಳಿದ್ದಾರೆ. ಕೆಲವು ಔಪಚಾರಿಕ ಕ್ರಿಯೆಗಳು ಮಾತ್ರವೇ ಉಳಿದಿದ್ದು, ಸದ್ಯದಲ್ಲೇ ಅಗತ್ಯ ಹಣ ಬಿಡುಗಡೆಯಾಗಲಿದೆಯೆಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ಹಣಕಾಸು ಇಲಾಖೆ ಹಣ ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಅನುದಾನ ಬಿಡುಗಡೆಗೆ ಇದ್ದ ಎಲ್ಲ ತೊಡಕುಗಳೂ ನಿವಾರಣೆಯಾಗಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಲ್ಲಿ ಹಣಕಾಸಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ. ಕನ್ನಡ ವಿಶ್ವವಿದ್ಯಾಲಯ ಎಂದಿನಂತೆ ಕಾರ್ಯನಿರ್ವಹಿಸಲು ಅನುವಾಗುವಂತೆ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: #ಕನ್ನಡವಿವಿಉಳಿಸಿ ಟ್ವಿಟ್ಟರ್ ಅಭಿಯಾನ; ಸಿದ್ದರಾಮಯ್ಯ ಸೇರಿದಂತೆ ಹಲವರ ಬೆಂಬಲ
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡಕ್ಕಾಗಿಯೇ ಇರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ. ಇದರಿಂದ ಸರ್ಕಾರ ಆದಾಯ ನಿರೀಕ್ಷೆ ಮಾಡಬಾರದು. ಇದನ್ನು ಅಫಿಲಿಯೇಟೆಡ್ ವಿಶ್ವವಿದ್ಯಾಲಯವಾಗಿ ಬದಲಿಸುವ ಯಾವುದೇ ದುಸ್ಸಾಹಸಕ್ಕೂ ಸರ್ಕಾರ ಕೈಹಾಕಬಾರದು ಎಂದು ನಾರಾಯಣ ಗೌಡ ಅವರು ಸಚಿವರಿಗೆ ಮನವಿ ಮಾಡಿಕೊಂಡಿದ್ದಾಗಿ ಹೇಳಿದ್ದು, “ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡಕ್ಕಾಗಿಯೇ ಇರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ. ಇದರಿಂದ ಸರ್ಕಾರ ಆದಾಯ ನಿರೀಕ್ಷೆ ಮಾಡಬಾರದು. ಇದನ್ನು ಅಫಿಲಿಯೇಟೆಡ್ ವಿಶ್ವವಿದ್ಯಾಲಯವಾಗಿ ಬದಲಿಸುವ ಯಾವುದೇ ದುಸ್ಸಾಹಸಕ್ಕೂ ಸರ್ಕಾರ ಕೈಹಾಕಬಾರದು ಎಂದು ಸಚಿವರಿಗೆ ನಾನು ಮನವಿ ಮಾಡಿಕೊಂಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. (3/4)
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) January 13, 2021
ಕರವೇ ನಡೆಸುತ್ತಿರುವ ಹಂಪಿ #ಕನ್ನಡವಿವಿಉಳಿಸಿ ಅಭಿಯಾನದ ಸಂಪೂರ್ಣ ಮಾಹಿತಿ ಹೊಂದಿದ್ದು, ಕನ್ನಡದ ಸಾರಸ್ವತ ಲೋಕದ ದಿಗ್ಗಜರು, ಸಾಮಾಜಿಕ ಹೋರಾಟಗಾರರ ಅಭಿಮತವನ್ನು ಗಮನಿಸಿದ್ದು, ಕನ್ನಡ ವಿಶ್ವವಿದ್ಯಾಲಯದ ಅಸ್ಮಿತೆಗೆ, ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದ್ದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದ್ದಾರೆ.
ಡಿಸೆಂಬರ್ 18 ರಂದು ಕರವೇ #ಕನ್ನಡವಿವಿಉಳಿಸಿ ಟ್ವಿಟ್ಟರ್ ಅಭಿಯಾನ ಪ್ರಾರಂಭಿಸಿತ್ತು. ಇದರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಅದರ ನಂತರ ಕರವೇ ತನ್ನ ಅಭಿಯಾನದ ಹಕ್ಕೊತ್ತಾಯಗಳನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿಯು ಆಗಿರುವ ಅಶ್ವತ್ಥ್ ನಾರಾಯಣ್ ಅವರಿಗೆ ಸಲ್ಲಿಸಿತ್ತು.
ಇದನ್ನೂ ಓದಿ: ಯುವಜನೋತ್ಸವ: ಕನ್ನಡ ಬೇಡ -ಇಂಗ್ಲಿಷ್, ಹಿಂದಿಗೆ ಅವಕಾಶ ಎಂದ ಸರ್ಕಾರ!
