Homeಮುಖಪುಟಮೋದಿ ಚಿತ್ರವುಳ್ಳ ಚೀಲಗಳ ಖರೀದಿಗೆ ₹15 ಕೋಟಿ ವ್ಯಯಿಸಿದ ಕೇಂದ್ರ: ವರದಿ

ಮೋದಿ ಚಿತ್ರವುಳ್ಳ ಚೀಲಗಳ ಖರೀದಿಗೆ ₹15 ಕೋಟಿ ವ್ಯಯಿಸಿದ ಕೇಂದ್ರ: ವರದಿ

- Advertisement -
- Advertisement -

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ನೀಡಲಾಗುವ ಆಹಾರ ಧಾನ್ಯಗಳ ಚೀಲದಲ್ಲಿ ಪ್ರಧಾನಿ ಮೋದಿಯ ಚಿತ್ರ ಹಾಕಲು ಕೇಂದ್ರ ಸರ್ಕಾರ 15 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅದು ಕೂಡಾ ಬರೀ ಐದು ರಾಜ್ಯಗಳಿಗಾಗಿ ಇಷ್ಟು ದೊಡ್ಡ ಮೊತ್ತ ವ್ಯಯಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಅಜಯ್ ಬೋಸ್ ಸಲ್ಲಿಸಿದ್ದ ಅರ್ಜಿಗೆ ನೀಡಲಾಗಿರುವ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆರ್‌ಟಿಐ ಮಾಹಿತಿ ಪ್ರಕಾರ, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ರಾಜಸ್ಥಾನ, ಮಿಜೋರಾಂ, ಸಿಕ್ಕಿಂ, ತ್ರಿಪುರಾ, ಮೇಘಾಲಯದಲ್ಲಿ ಆಹಾರ ಧಾನ್ಯವನ್ನು ವಿತರಿಸಲು ‘ಪ್ರಧಾನಿ ಮೋದಿ ಚಿತ್ರ ಒಳಗೊಂಡಿರುವ ಲೋಗೋ ಇರುವ ನೇಯ್ದ ಚೀಲಗಳನ್ನು ಖರೀದಿ ಮಾಡಲು ಟೆಂಡರ್ ಅಂತಿಮಗೊಳಿಸಿದೆ. ಪಶ್ಚಿಮ ಬಂಗಾಳ ರಾಜ್ಯಕ್ಕೆ ಟೆಂಡರ್ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.

ರಾಜ್ಯಸ್ಥಾನ ಎಫ್‌ಸಿಐ ಕಚೇರಿ ಮೋದಿ ಚಿತ್ರವಿರುವ 1.07 ಕೋಟಿ ಸಿಂಥೆಟಿಕ್ ಬ್ಯಾಗ್‌ಗಳಿಗೆ 13.29 ಕೋಟಿ ರೂಪಾಯಿ ವೆಚ್ಚ ಮಾಡಿದರೆ, ತ್ರಿಪುರಾ 5.98 ಲಕ್ಷ ಕೋಟಿ ಬ್ಯಾಗ್‌ಗಳಿಗೆ 85.51 ಲಕ್ಷ ರೂಪಾಯಿ ವ್ಯಯಿಸುತ್ತಿದೆ. ಇನ್ನು ಮೇಘಾಲಯದ ಎಫ್‌ಸಿಐ ಸ್ಥಳೀಯ ಕಚೇರಿ 4.22 ಲಕ್ಷ ಬ್ಯಾಗ್‌ಗಳಿಗೆ 52.75 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. 1.75 ಲಕ್ಷ ಬ್ಯಾಗ್‌ಗಳಿಗೆ ಮಿಜೋರಾಂ 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

ಸಿಕ್ಕಿಂನಲ್ಲಿ ವಿತರಣೆಗೆ ಖಾಸಗಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದ್ದು ಈ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ. ದಿ ಹಿಂದೂ ವರದಿಯ ಪ್ರಕಾರ ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು 98,000 ಬ್ಯಾಗ್‌ಗಳನ್ನು ತಲಾ 14.65 ರೂಪಾಯಿಯಂತೆ ಉತ್ಪಾದಿಸುವ ಮಾತುಕತೆ ನಡೆಸುತ್ತಿದೆ.

ಪ್ರತಿ ರಾಜ್ಯದಲ್ಲಿ ಈ ಲೋಗೋ ಕೊಂಚ ಬದಲಾವಣೆ ಹೊಂದಿದೆ. ಮಿಜೋರಾಂನಲ್ಲಿ ಪ್ರತಿ ಬ್ಯಾಗ್‌ 14.65 ರೂಪಾಯಿ, ತ್ರಿಪುರಾದಲ್ಲಿ 14.30 ರೂಪಾಯಿ, ಮೇಘಾಲಯದಲ್ಲಿ 12.5 ರೂಪಾಯಿ, ರಾಜಸ್ಥಾನದಲ್ಲಿ 12.375 ರೂ. ಗೆ ಟೆಂಡರ್ ನೀಡಲಾಗಿದೆ.

ಇದನ್ನೂ ಓದಿ : ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...