Homeಮುಖಪುಟಡೆಂಘೀ ವಿರುದ್ಧದ ಅಭಿಯಾನಕ್ಕೆ ವೀರೇಂದ್ರ ಸೆಹ್ವಾಗ್ ಬೆಂಬಲಕ್ಕೆ ಕೇಜ್ರಿವಾಲ್ ಹರ್ಷ..

ಡೆಂಘೀ ವಿರುದ್ಧದ ಅಭಿಯಾನಕ್ಕೆ ವೀರೇಂದ್ರ ಸೆಹ್ವಾಗ್ ಬೆಂಬಲಕ್ಕೆ ಕೇಜ್ರಿವಾಲ್ ಹರ್ಷ..

- Advertisement -
- Advertisement -

ದೇಶದಾದ್ಯಂತ ಮಹಾಮಾರಿ ಡೆಂಘೀ ಕಾಯಿಲೆ ಜನತೆಯನ್ನು ಹೈರಾಣಾಗಿಸುತ್ತಿದೆ. ದೆಹಲಿ, ಕೇರಳ, ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಡೆಂಘೀ ಕಾಯಿಲೆ ಜನತೆಯ ಜೀವ ಹಿಂಡುತ್ತಿದೆ. ಸೊಳ್ಳೆ ಕಡಿತದಿಂದ ಬರುವ ಡೆಂಘೀ, ಜೀವಕ್ಕೂ ಅಪಾಯ ತಂದೊಡ್ಡುತ್ತಿದೆ. ಡೆಂಘೀಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸಾಂಕ್ರಾಮಿಕ ರೋಗ ಡೆಂಘೀ ತಡೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಷ್ಟೇ ಸಾಕಾಗುವುದಿಲ್ಲ, ಜನತೆ ಕೂಡ ಮುಂಜಾಗ್ರತಾ ಕ್ರಮ ಹಾಗೂ ಸ್ವಚ್ಛತೆ ಕಾಪಾಡಬೇಕಿದೆ. ಈಗ ದೆಹಲಿಯಲ್ಲಿ ಡೆಂಘೀ ಕಾಯಿಲೆ ತಡೆಗೆ ಅಭಿಯಾನವೊಂದು ನಡೆಯುತ್ತಿದೆ. ಇದಕ್ಕೆ ಜೊತೆಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ಗೆ ಅರವಿಂದ ಕೇಜ್ರಿವಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಡೆಂಘೀ ಕಾಯಿಲೆ ವಿರುದ್ಧ ಗಟ್ಟಿ ಧ್ವನಿಯೆತ್ತಿರುವ ವೀರೇಂದ್ರ ಸೆಹ್ವಾಗ್ ಅವರಿಗೆ ಧನ್ಯವಾದಗಳು. ನನಗೆ ದೆಹಲಿಯ ಯುವ ಜನತೆಯ ಮೇಲೆ ವಿಶ್ವಾಸವಿದೆ. ನಿಮ್ಮ ಸಂದೇಶ ಹಾಗೂ ಅಭಿಯಾನಕ್ಕೆ ಸಾಥ್ ನೀಡುವ ಮೂಲಕ ಹೆಚ್ಚು ಉತ್ಸಾಹದಿಂದ ಹೆಜ್ಜೆಯಿಡಲಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಜತೆಗೆ ಸೆಹ್ವಾಗ್ ಅವರ ಡೆಂಘೀ ವಿರುದ್ಧ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ದೆಹಲಿಯಲ್ಲಿ ಡೆಂಘೀ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು ಈ ರೋಗಕ್ಕೆ ಈ ವರ್ಷ ಒಬ್ಬರೂ ಸಹ ಬಲಿಯಾಗಿಲ್ಲ ಎಂದು ಕೆಲವು ದಿನಗಳ ಹಿಂದೆ ದೆಹಲಿ ಸಿಎಂ ಕೇಜ್ರಿವಾಲ್‌ ಹೇಳಿದ್ದರು.

#10Hafte10Baje10Minute ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ವಿರೇಂದ್ರ ಸೆಹ್ವಾಗ್, ಹೆಲೋ ದಿಲ್ಲಿವಾಲೋ, ಹರ್ ರವಿವಾರ, ಡೆಂಘೀ ಪೇ ವಾರ್, (ದಿಲ್ಲಿ ಜನರೆ, ಈ ಭಾನುವಾರ ಡೇಂಘೀ ವಿರುದ್ಧ ಯುದ್ದ ಮಾಡೋಣ) ನೀವೂ ಸಹ ಈ ಅಭಿಯಾನಕ್ಕೆ ಕೈ ಜೋಡಿಸಿ ಎಂಬ ಆಕರ್ಷಕ ವಿಡಿಯೋ ಮಾಡಿದ್ದಾರೆ. ಅಲ್ಲದೇ ಡೆಂಘೀ ಕಾಯಿಲೆಯನ್ನು ಬೌಂಡರಿ ಆಚೆಗೆ ತಳ್ಳಿ ಎಂಬ ಸಾಲುಗಳೊಂದಿಗೆ ವಿಡಿಯೋ ಶೇರ್ ಮಾಡಲಾಗಿದ್ದು, ಸೆಹ್ವಾಗ್ ಅವರ ಅಭಿಯಾನಕ್ಕೆ ಯುವಕರು ಮತ್ತು ಜನತೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಸಾಥ್ ನೀಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...