Homeಮುಖಪುಟ124 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ನಿಧನ

124 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ನಿಧನ

ವೇದ ವಿದ್ವಾಂಸ ಮತ್ತು ಪತ್ರಕರ್ತ ಕೂಡಾ ಆಗಿದ್ದ ಇವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು.

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಹಿರಿಯ ಪುರುಷರಲ್ಲಿ ಒಬ್ಬರಾದ ಸುಧಾಕರ್ ಚತುರ್ವೇದಿಯವರಯ ಗುರುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಇವರು ವೇದ ವಿದ್ವಾಂಸ ಮತ್ತು ಪತ್ರಕರ್ತ ಕೂಡಾ ಆಗಿದ್ದ ಇವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ನಾಲ್ಕು ವೇದಗಳನ್ನು ಚೆನ್ನಾಗಿ ತಿಳಿದಿದ್ದರಿಂದ ಪಂಡಿತ್ ಸುಧಾಕರ್ “ಚತುರ್ವೇದಿ” ಎಂದು ಕರೆಯಲ್ಪಡುವ ಇವರು ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಸುಧಾಕರ್ ಚತುರ್ವೇದಿ 1897 ರಲ್ಲಿ ತುಮಕುರು ಕ್ಯಾತಸಂದ್ರದಲ್ಲಿ ಜನಿಸಿದರು. ಹಾಗೇ ನೊಡಿದರೆ ಇವರಿಗೆ 124 ವರ್ಷವಾಗಿದ್ದು, ಧೀರ್ಘ ಕಾಲ ಬದುಕಿದ ಭಾರತದ ಅತಿ ಹಿರಿಯ ಪುರುಷ ಎನಿಸಿಕೊಂಡಿದ್ದರು.

ಇವರನ್ನು “ಗಾಂಧಿಜಿಯ ಪೋಸ್ಟ್ ಮ್ಯಾನ್” ಎಂದು ಕರೆಯಲಾಗುತ್ತಿತ್ತು. ಅಲ್ಲದೆ ಗಾಂಧೀಜಿ ಇವರನ್ನು “ಕರ್ನಾಟಕಿ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಹೇಳಲಾಗುತ್ತದೆ.

ಸುಧಾಕರ್ ಚತುರ್ವೇದಿ 1919ರ ಏಪ್ರಿಲ್ 13 ರಂದು 379 ಭಾರತೀಯರನ್ನು ಕೊಂದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಅಮೃತಸರದಲ್ಲಿ ವರದಿ ಮಾಡಲು ನಿಯೋಜಿಸಲ್ಪಟ್ಟಿದ್ದರು.

ಇವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ “ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ವೇದ ವಿದ್ವಾಂಸ ಸುಧಾಕರ ಚತುರ್ವೇದಿಯವರ ನಿಧನಕ್ಕೆ ತೀವ್ರ ಸಂತಾಪಗಳು. ತುಮಕೂರಿನ ಕ್ಯಾತಸಂದ್ರದಲ್ಲಿ ಜನಿಸಿದ ಚತುರ್ವೇದಿಯವರು, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳು. ಮಹಾತ್ಮ ಗಾಂಧಿಯವರ ಒಡನಾಟದಲ್ಲಿದ್ದು, ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಜೊತೆಗೆ ವೇದ ಪ್ರಚಾರಕ್ಕಾಗಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡ ನಿಧನನಕ್ಕೆ ಸಂತಾಪ ಸೂಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...