Homeಮುಖಪುಟಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಪತ್ರಿಕೆ ಬಳಕೆ ನಿಲ್ಲಿಸುವಂತೆ FSSAI ಸೂಚನೆ

ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಪತ್ರಿಕೆ ಬಳಕೆ ನಿಲ್ಲಿಸುವಂತೆ FSSAI ಸೂಚನೆ

- Advertisement -
- Advertisement -

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇತ್ತೀಚೆಗೆ ಮಹತ್ವದ ಸೂಚನೆಯೊಂದನ್ನು ಹೊರಡಿಸಿದ್ದು, ಜನರು ಆಹಾರ ಪದಾರ್ಥಗಳನ್ನು ಸುತ್ತಲು, ಶೇಖರಿಸಲು ಅಥವಾ ಪ್ಯಾಕ್ ಮಾಡಲು ಅಥವಾ ಬಡಿಸಲು ಪತ್ರಿಕೆಗಳನ್ನು ಬಳಸಬಾರದು ಎಂದು ಹೇಳಿದೆ.

ಪತ್ರಿಕೆಗಳಲ್ಲಿ ಬಳಸುವ  ಶಾಯಿಯು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡುವ ರಾಸಾಯನಿಕಗಳನ್ನು ಒಳಗೊಂಡಿದೆ. ಪಿಟಿಐ ವರದಿಯ ಪ್ರಕಾರ, ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ವರ್ಧನ ರಾವ್ ಅವರು ತಕ್ಷಣ ಆಹಾರ ಪದಾರ್ಥಗಳನ್ನು ಶೇಖರಿಸಲು ಅಥವಾ ಪ್ಯಾಕ್ ಮಾಡಲು ಪೇಪರ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಕಮಲಾ ವರ್ಧನ ರಾವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸುದ್ದಿ ಪತ್ರಿಕೆಗಳಲ್ಲಿ ಬಳಸುವ ಶಾಯಿಯು ಆಹಾರವನ್ನು ಕಲುಷಿತಗೊಳಿಸುವ ಅನೇಕ ಜೈವಿಕ ಸಕ್ರಿಯ ವಸ್ತುಗಳನ್ನು ಒಳಗೊಂಡಿದೆ. ಇಂತಹ ಕಲುಷಿತ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.

ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ, ಭಾರ ಲೋಹಗಳು ಸೇರಿದಂತೆ ಹಾನಿಕಾರಕ ರಾಸಾಯನಿಕಗಳಿದ್ದು, ಇವುಗಳನ್ನು ಆಹಾರದೊಂದಿಗೆ ಬೆರೆಸಿದರೆ ಕಾಲಕ್ರಮೇಣ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಸುದ್ದಿಪತ್ರಗಳ ವಿತರಣೆಯು ವಿವಿಧ ಪರಿಸರ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ. ಪರಿಣಾಮವಾಗಿ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ರೋಗಕಾರಕಗಳು ಕಾಗದಕ್ಕೆ ಅಂಟಿಕೊಳ್ಳುತ್ತವೆ. ಇಂತಹ ಪೇಪರ್​​ಗಳಲ್ಲಿ ಆಹಾರ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

ಆಹಾರ ಪದಾರ್ಥಗಳ ಪ್ಯಾಕಿಂಗ್ ಮತ್ತು ಶೇಖರಣೆಗಾಗಿ ಸುದ್ದಿ ಪತ್ರಿಕೆಗಳ ಬಳಕೆಯನ್ನು ನಿಷೇಧಿಸುವ ನಿಯಮಗಳನ್ನು ಎಫ್‌ಎಸ್‌ಎಸ್‌ಎಐ 2018 ರಲ್ಲಿ ಪ್ರಕಟಿಸಿತ್ತು. ಈ ನಿಯಮಗಳ ಪ್ರಕಾರ ದಿನಪತ್ರಿಕೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಬಾರದು, ಬಡಿಸಬಾರದು, ಅದರಲ್ಲಿ ಕರಿದ ಪದಾರ್ಥಗಳನ್ನು ಹಾಕಿ ತಿನ್ನಬಾರದು, ಎಣ್ಣೆ ಹೆಚ್ಚಾದಾಗ ಪತ್ರಿಕೆಗಳ ಸಹಾಯದಿಂದ ಎಣ್ಣೆ ತೆಗೆಯಬಾರದು. ಯಾವುದೇ ಆಹಾರ ಮಾರಾಟಗಾರರು ಇದನ್ನು ಮಾಡುವುದು ಅಪರಾಧವಾಗುತ್ತದೆ.

ಇದನ್ನು ಓದಿ: ವಾಚತಿ ಬುಡಕಟ್ಟು ಗ್ರಾಮದಲ್ಲಿ ದೌರ್ಜನ್ಯ ಪ್ರಕರಣ: ಪೊಲೀಸರು ಸೇರಿ 215 ಅಧಿಕಾರಿಗಳಿಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...