Homeಕರ್ನಾಟಕತುಮಕೂರು: ಗಣರಾಜ್ಯೋತ್ಸವದಂದು ಸ್ವಾತಂತ್ರ್ಯ ವೃತ್ತದಲ್ಲಿ ಹಾರಾಡಿದ ಭಗವಧ್ವಜ!

ತುಮಕೂರು: ಗಣರಾಜ್ಯೋತ್ಸವದಂದು ಸ್ವಾತಂತ್ರ್ಯ ವೃತ್ತದಲ್ಲಿ ಹಾರಾಡಿದ ಭಗವಧ್ವಜ!

- Advertisement -
- Advertisement -

ಇಂದು ದೇಶದೆಲ್ಲೆಡೆ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಸಂವಿಧಾನ ಜಾರಿಗೆ ಬಂದ ನೆನಪಿಗಾಗಿ ಅಂಬೇಡ್ಕರ್, ಗಾಂಧಿ ಫೋಟೊ ಇಟ್ಟು ಸ್ಮರಿಸಲಾಗಿದೆ. ತ್ರಿವರ್ಣ ಧ್ವಜ ಹಾರಿಸಿ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲಾಗಿದೆ. ಆದರೆ ತುಮಕೂರಿನ ಐತಿಹಾಸಿಕ ಹಿನ್ನಲೆಯ ಸ್ವಾತಂತ್ರ್ಯ ಚೌಕದಲ್ಲಿ ಮಾತ್ರ ಇಂದೂ ಕೂಡ ಭಗವಧ್ವಜ ಹಾರಿಸಲಾಗಿದೆ. ಸುತ್ತಲೂ ಕೇಸರಿ ಬಂಟಿಗ್ಸ್‌ಗಳನ್ನು ಕಟ್ಟಲಾಗಿದೆ. ಈ ಸ್ಥಿತಿಗೆ ಹಲವು ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮೈಸೂರು ಚಲೋ ಚಳವಳಿ ಉತ್ತುಂಗದಲ್ಲಿತ್ತು. ಜವಾಬ್ದಾರಿ ಸರ್ಕಾರದ ರಚನೆಗೆ ಆಗ್ರಹಿಸಿ ಮೈಸೂರು ಅರಸರ ವಿರುದ್ಧ ಹೋರಾಟ ನಡೆಯುತ್ತಿತ್ತು. ಎಲ್ಲೆಡೆ ತ್ರಿವರ್ಣ ಧ್ವಜ ಹಾರಿಸಲು ನಿಷೇಧ ಹೇರಲಾಗಿತ್ತು. ಅಂತಹ ಸಂದರ್ಭದಲ್ಲಿ 147ರ ಸೆಪ್ಟಂಬರ್ 14ರಂದು ತುಮಕೂರಿನಲ್ಲಿ ಬೃಹತ್ ಚಳವಳಿ ನಡೆದಿತ್ತು. ಪೊಲೀಸರು ಹೋರಾಟ ಹತ್ತಿಕ್ಕಲು ಲಾಠೀಚಾರ್ಜ್ ಮಾಡಿದರು. ಆನಂತರ ಗೋಲಿಬಾರ್ ಮಾಡಿದರು. ಆಗ ಖ್ಯಾತ ಸಾಹಿತಿ ಗೋರುರು ರಾಮಸ್ವಾಮಿ ಅಯ್ಯಂಗಾರ್‌ರವರ ಪುತ್ರ ರಾಮಚಂದ್ರ ಸೇರಿದಂತೆ ನಂಜುಂಡಪ್ಪ, ಗಂಗಪ್ಪ ಎಂಬ ಸತ್ಯಾಗ್ರಹಿಗಳು ಹುತಾತ್ಮರಾದರು. ಅವರ ನೆನಪಿನಲ್ಲಿ ಅಲ್ಲಿ ಸ್ಮಾರಕವೊಂದನ್ನು ನಿರ್ಮಿಸಿ ಅವರ ಹೆಸರುಗಳನ್ನು ಕೆತ್ತಲಾಗಿದೆ. ಆ ಚೌಕಕ್ಕೆ ಸ್ವಾತಂತ್ರ್ಯ ವೃತ್ತ ಎಂದು ಹೆಸರಿಡಲಾಗಿದೆ. ಇಂದಿನ ಗಣರಾಜ್ಯೋತ್ಸವದ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಆ ವೃತ್ತದ ಬಗ್ಗೆ ಕಾಳಜಿ ವಹಿಸದಿರುವುದು ದುರಂತವಾಗಿದೆ.

ತುಮಕೂರು ನಗರದ ಈ ವೃತ್ತದ ಹೆಸರು ಸ್ವತಂತ್ರ ಚೌಕ, ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಗುಂಡಿಗೆ ಗುಂಡಿಗೆಯೊಡ್ಡಿ ಹುತಾತ್ಮರಾದ ಸ್ಥಳ, ಅವರ ಸ್ಮಾರಕವೂ ಈ ವೃತ್ತದಲ್ಲಿದೆ, ಗಣರಾಜ್ಯೋತ್ಸವದ ದಿನವಾದರೂ ಈ ವೃತ್ತದಲ್ಲಿ ಭಾರತದ ಅಧಿಕೃತ ತ್ರಿವರ್ಣ ಧ್ವಜ ಹಾರಬೇಕಿತ್ತು, ಈ ಚೆಡ್ಡಿಗಳ ಉದ್ಧಟತನ ನೋಡಿ, ಅತ್ಯಂತ ಎತ್ತರದಲ್ಲಿ ಕೇಸರಿ ಪತಾಕೆಯನ್ನು ಹಾರಿಬಿಟ್ಟಿದ್ದಾರೆ. ತುಮಕೂರಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ ಎಂಬುದಕ್ಕೆ ಈ ವೃತ್ತವೇ ಸಾಕ್ಷಿ ಎಂದು ಕುಚ್ಚಂಗಿ ಪ್ರಸನ್ನರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ನೆನಪಿಸುವ ಸ್ಥಳಗಳಲ್ಲಿ ಒಂದಾದ ಸ್ವಾತಂತ್ರ್ಯ ಚೌಕವು ಕಸ ಕಡ್ಡಿಗಳಿಂದ ತುಂಬಿಕೊಂದಿಡೆ. ಸರ್ಕಾರಿ ಜಾಹೀರಾತು ಸೇರಿದಂತೆ ಹಲವು ಜಾಹೀರಾತುಗಳನ್ನು ಹಾಕುವ ಸ್ಥಳವಾಗಿ ಬದಲಾಗಿದೆ. ಅದರ ಹೆಸರನ್ನು ಚರ್ಚ್ ಸರ್ಕಲ್ ಎಂದು ಕರೆಯುವ ಪರಿಪಾಠ ಆರಂಭವಾಗಿದೆ. ಅದರ ಮುಂದುವರಿದ ಭಾಗವಾಗಿ ಅಲ್ಲಿ ಇಂದು ಕೇಸರಿ ಬಾವುಟ ಬಂಟಿಂಗ್‌ಗಳು ರಾರಾಜಿಸಿವೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅ ಸ್ಥಳದ ಗೌರವವನ್ನು ಕಾಪಾಡಬೇಕಿದೆ.

ಇದನ್ನೂ ಓದಿ; ಸರ್ಕಾರ v/s ರಾಜ್ಯಪಾಲ | ಚೆನ್ನೈ ಗಣರಾಜ್ಯೋತ್ಸವ ಪರೇಡ್‌ ಮುಂಚೂಣಿಯಲ್ಲಿ ‘ತಮಿಳುನಾಡು ಚಿರಾಯುವಾಗಲಿ’ ಟ್ಯಾಬ್ಲೋ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಳ್ಳಾರಿಯ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವುದು ಬಾಂಬ್ ಸ್ಪೋಟವಲ್ಲ

0
ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಮಳಿಗೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗಿದೆ. "ಮತ್ತೊಂದು ದಿನ, ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ. ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶೋ ರೂಮ್‌ನಲ್ಲಿ ಸ್ಪೋಟ ಸಂಭವಿಸಿದ್ದು,...