Homeಮುಖಪುಟತಿಹಾರ್ ಜೈಲಿನಲ್ಲಿ ಗ್ಯಾಂಗ್ ಸ್ಟರ್ ತಿಲ್ಲು ತಾಜ್‌ಪುರಿ ಹತ್ಯೆ

ತಿಹಾರ್ ಜೈಲಿನಲ್ಲಿ ಗ್ಯಾಂಗ್ ಸ್ಟರ್ ತಿಲ್ಲು ತಾಜ್‌ಪುರಿ ಹತ್ಯೆ

- Advertisement -
- Advertisement -

ದೆಹಲಿಯ ತಿಹಾರ್ ಜೈಲಿನಲ್ಲಿ ಎದುರಾಳಿ ಗ್ಯಾಂಗ್ ಸದಸ್ಯರು ನಡೆಸಿದ ದಾಳಿಯಿಂದಾಗಿ ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್ ತಿಲ್ಲು ತಾಜ್‌ಪುರಿ ಕೊಲೆಯಾಗಿದ್ದಾನೆ.

ಹೆಚ್ಚಿನ ಬಿಗಿಭದ್ರತೆ ಇರುವ ಜೈಲಿನಲ್ಲಿ ಗ್ಯಾಂಗ್ ಸ್ಟರ್ ಯೋಗೇಶ್ ತುಂಡಾ ಮತ್ತು ಆತನ ಸಹಚರರು ಕಬ್ಬಿಣದ ರಾಡ್‌ಗಳಿಂದ ತಿಲ್ಲು ತಾಜ್‌ಪುರಿಯಾ, ಅಲಿಯಾಸ್ ಸುನಿಲ್ ಮಾನ್ ಅವರನ್ನು ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿದ್ದ ತಿಲ್ಲುನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೋರ್ವ ಖೈದಿ ರೋಹಿತ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಸದ್ಯ ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಯೋಗೇಶ್ ತುಂಡಾ, ದೀಪಕ್ ತೀತಾರ್, ರಿಯಾಜ್ ಖಾನ್ ಮತ್ತು ರಾಜೇಶ್- ಜೈಲಿನ ಮೊದಲ ಮಹಡಿಯಲ್ಲಿರುವ ವಾರ್ಡ್‌ನ ಕಬ್ಬಿಣದ ಗ್ರಿಲ್‌ಗಳನ್ನು ಒಡೆದಿದ್ದಾರೆ. ನೆಲ ಅಂತಸ್ತಿನ ವಾರ್ಡ್‌ನಲ್ಲಿ ಇದ್ದ ತಿಲ್ಲು ಮೇಲೆ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎದುರಾಳಿ ಗೋಗಿ ಗ್ಯಾಂಗ್‌ನ ನಾಲ್ವರು ಸದಸ್ಯರು ನೆಲ ಮಹಡಿಗೆ ಇಳಿಯಲು ಬೆಡ್‌ಶೀಟ್‌ಗಳನ್ನು ಬಳಸಿದ್ದಾರೆ.

2021 ರ ರೋಹಿಣಿ ಕೋರ್ಟ್ ಶೂಟೌಟ್‌ನಲ್ಲಿ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಕೊಲ್ಲಲ್ಪಟ್ಟಾಗ ತಿಲ್ಲು ಅದರಲ್ಲಿ ಪ್ರಧಾನ ಸಂಚುಕೋರನಾಗಿದ್ದನು.

2021 ರ ಸೆಪ್ಟೆಂಬರ್ 24 ರಂದು ರೋಹಿಣಿ ನ್ಯಾಯಾಲಯದ ಒಳಗೆ ವಕೀಲರಂತೆ ವೇಷಧರಿಸಿದ ತಿಲ್ಲು ಗ್ಯಾಂಗ್‌ನ ಇಬ್ಬರು ಸದಸ್ಯರು ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಂದರು. ನಂತರ ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಇಬ್ಬರೂ ಕೊಲ್ಲಲ್ಪಟ್ಟರು.

“ನ್ಯಾಯಾಲಯದ ಒಳಗೆ ಜಿತೇಂದರ್ ಗೋಗಿಯ ಮೇಲೆ ಇಬ್ಬರು ವಕೀಲರ ವೇಷದಲ್ಲಿ ಗುಂಡು ಹಾರಿಸಿದರು. ಆಗ ಪೊಲೀಸರು ಪ್ರತಿದಾಳಿ ನಡೆಸಿ ಆ ಇಬ್ಬರು ದಾಳಿಕೋರರನ್ನು ಕೊಂದರು. ಇದು ಗ್ಯಾಂಗ್ ವಾರ್ ಅಲ್ಲ” ಎಂದು ಪೊಲೀಸರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಜಿತೇಂದರ್ ಗೋಗಿ ಗ್ಯಾಂಗ್ ಮತ್ತು ತಿಲ್ಲು ಗ್ಯಾಂಗ್ ನಡುವೆ ಇದ್ದ ವರ್ಷ ಕಾಲದ ಪೈಪೋಟಿಯ ಪರಿಣಾಮವೇ ಈ ದಾಳಿಯಾಗಿತ್ತು.

ಜಿತೇಂದರ್ ಗೋಗಿಯನ್ನು ಕೊಲ್ಲುವ ಸೂಚನೆಯನ್ನು ತಿಲ್ಲು ತಾಜ್‌ಪುರಿ ಫೋನ್‌ ಕರೆಯ ಮೂಲಕ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ತಿಲ್ಲು ತಾಜ್‌ಪುರಿಯ ಹತ್ಯೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಿಹಾರ್ ಜೈಲಿನಲ್ಲಿ ಒಂದು ತಿಂಗಳೊಳಗೆ ನಡೆದ ಹಿಂಸಾಚಾರ ಮತ್ತು ಎರಡು ಗ್ರೂಪಿನ ನಡುವಿನ ಪೈಪೋಟಿಗೆ ಸಂಬಂಧಿಸಿದ ಎರಡನೇ ಪ್ರಕರಣ ಇದಾಗಿದೆ. ಕಳೆದ ತಿಂಗಳು, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಪ್ರಿನ್ಸ್ ತೆವಾಟಿಯಾ ಅವರನ್ನು ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ತಿಹಾರ್ ಜೈಲಿನಲ್ಲಿ ಕೊಂದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...