Homeಕರ್ನಾಟಕಬಜರಂಗದಳ, ಪಿಎಫ್‌ಐ ನಿಷೇಧ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಬಜರಂಗದಳ, ಪಿಎಫ್‌ಐ ನಿಷೇಧ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷ ಇಂದು (ಮಂಗಳವಾರ) ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೆವಾಲಾ, ಡಾ ಜಿ ಪರಮೇಶ್ವರ್ ಮೊದಲಾದ ನಾಯಕರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆಯಾಯಿತು.

ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಹಲವಾರು ಜನಪ್ರಿಯ ಯೋಜನೆಗಳೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗಿತ್ತು ಅದರಂತೆ ಇಂದು ‘ಸರ್ವ ಜನಾಂಗದ ಶಾಂತಿಯ ತೋಟ, ಇದುವೆ ಕಾಂಗ್ರೆಸ್‌ ಬದ್ದತೆ’ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ”ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ’ ಎಂಬ ಘೋಷ ವಾಕ್ಯವನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಘೋಷಿಸಿರುವ ಪ್ರಮುಖ ಯೋಜನೆಗಳು: ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ ಉಚಿತ ವಿದ್ಯುತ್​, ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ, ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ, ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪ್ರಣಾಳಿಗೆ ಹೊಂದಿದೆ.

ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ ಮಾಡುವುದಾಗಿಯೂ ಹೇಳಿದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ,  ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ, ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ, ರಾತ್ರಿ ಪಾಳಿಯ ಪೊಲೀಸ್​ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ, ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ, ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ, ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ, ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆಗಳ ನಿರ್ಮಾಣ, ಕನಕಪುರದಲ್ಲಿ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

ಕಾಂಗ್ರೆಸ್ ಪಕ್ಷದ ಘೋಷಣೆಗಳ ಸಂಕ್ಷಿಪ್ತ ಚಿತ್ರಣ:

  • ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋಧಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
  • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ.ಗಳಿಂದ 15,000 ರೂಪಾಯಿಗೆ ಹೆಚ್ಚಳ
  • ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರೂ.ಗಳಿಂದ 10,000 ರೂಪಾಯಿಗೆ ಏರಿಕೆ
  • ಆಶಾ ಕಾರ್ಯಕರ್ತೆಯರ ನಿಶ್ಚಿತ ಗೌರವ ಧನ 5000 ರೂ.ಗಳಿಂದ 8,000 ರೂ.ಗೆ ಹೆಚ್ಚಳ
  • ಬಿಸಿಯೂಟದ ಅಡಿಗೆಯವರ ಗೌರವ ಧನ 3,600 ರೂ.ಗಳಿಂದ 6,000 ರೂಪಾಯಿಗೆ ಹೆಚ್ಚಳ
  • ಪೊಲೀಸ್ ವ್ಯವಸ್ಥೆಯಲ್ಲಿ ಶೇ.33ರಷ್ಟು ಮಹಿಳೆ ಇರುವಂತೆ ನೇಮಕಾತಿ. ಕನಿಷ್ಠ ಶೇ.1ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿ
  • ಭಜರಂಗದಳ ನಿಷೇಧ
  • ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷದವರೆಗೆ ವಿಸ್ತರಣೆ
  • ಗ್ರಾಮೀಣ ಕೃಷಿಕ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
  • ಪಶುಭಾಗ್ಯ- ಹಸು/ ಎಮ್ಮೆ ಖರೀದಿಗೆ ಬಡ್ಡಿರಹಿತ 3 ಲಕ್ಷ ಸಾಲ
  • ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ
  • ಪ್ರತಿ ಕ್ಷೇತ್ರದಲ್ಲಿ ಶಿತಲೀಕರಣ ಘಟಕ ಸ್ಥಾಪನೆ
  • ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
  • ಎಪಿಎಂಸಿ ಕಾಯ್ದೆ ರದ್ಧು ಪಡಿಸುತ್ತೇವೆ
  • ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
  • ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
  • ಸಾವಯವ ಕೃಷಿ ಯೋಜನೆಗೆ 2500ಕೋಟಿ ಹೂಡಿಕೆ
  • ನೇಗಿಲ ತುಡಿತ ಹೆಸರಿನಲ್ಲಿ ಮಂಡಳಿ ಸ್ಥಾಪನೆ
  • ಹನಿ,ತುಂತುರು ನೀರಾವರಿಗೆ ೧೦೦ ರಷ್ಟು ಸಬ್ಸಿಡಿ
  • ಸೌರ ಪಂಪ್ ಸೆಟ್ ಯೋಜನೆಗೆ ಸಬ್ಸಿಡಿ
  • ಬೀದರ್,ಕಲಬುರಗಿಯಲ್ಲಿ ಕೃಷಿ ಉತ್ಪನ್ನ ಸಂಶೋಧನಾ ಸಂಸ್ಥೆ
  • ಚಾಮರಾಜನಗರದಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ
  • ಗ್ರಾ.ಪಂ ವ್ಯಾಪ್ತಿಯಲ್ಲಿ ಯಾಂತ್ರೀಕರಣ ಸೌಲಭ್ಯ
  • ಪತ್ರಕರ್ತರ ಕ್ಷೇಮಾಭಿವೃದ್ಧಿ ಸ್ಥಾಪನೆ- 500 ಕೋಟಿ
  • ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ
  • ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ
  • ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ
  • ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ
  • ಬೆಳಗಾವಿ, ಬಾಗಲಕೋಟೆ, ಮಂಡ್ಯದಲ್ಲಿ ಎಥೆನಾಲ್ ಘಟಕ
  • ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣೆ
  • ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
  • ಜೇನು ಸಾಕಾಣಿಕೆಗೆ 50 ಕೋಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...