ಕೊರೊನಾ ವಿರುದ್ಧ ಎಲ್ಲಾ ನಾಗರಿಕರೀಕರು ಈ ಬಾರಿಯಾದರು ಉಚಿತವಾಗಿ ಲಸಿಕೆ ಪಡೆಯುವಂತಾಗಲಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪ್ರತಿಪಾದಿಸಿದ್ದಾರೆ.
“ಭಾರತವು ಉಚಿತ ಕೊರೊನಾ ಲಸಿಕೆ ಪಡೆಯಬೇಕು. ಎಲ್ಲಾ ನಾಗರಿಕರು ಇನಾಕ್ಯುಲೇಷನ್ ಅನ್ನು ಉಚಿತವಾಗಿ ಸ್ವೀಕರಿಸಲೇ ಬೇಕು. ಈ ಸಮಯದಲ್ಲಾದರೂ ಉಚಿತ ಲಸಿಕೆ ಪಡೆಯಬಹುದು ಎಂದು ಆಶಿಸೋಣ” ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
free /friː/
adjective, adverbcosting nothing, or not needing to be paid for. e.g.-
• India must get free COVID vaccine.
• All citizens must receive the inoculation free of charge.Let’s hope they get it this time. #vaccine
— Rahul Gandhi (@RahulGandhi) April 29, 2021
ಇದನ್ನೂ ಓದಿ: ಎಚ್ಚರ: ದೈಹಿಕ ಅಂತರ ಕಾಪಾಡದ ಸೋಂಕಿತ ವ್ಯಕ್ತಿ 406 ಜನರಿಗೆ ಕೊರೊನಾ ಹರಡಬಲ್ಲ!
ಕೊರೊನಾ ವೈರಸ್ ಲಸಿಕೆ ತಯಾರಿಸುವ ಕಂಪನಿಗಳಿಗೆ ಹೆಚ್ಚಿನ ಪ್ರಮಾಣದ ಸಾರ್ವಜನಿಕ ಹಣವನ್ನು ಖರ್ಚು ಮಾಡಲಾಗಿದ್ದು, ಈಗ ಅದೇ ಲಸಿಕೆಯನ್ನು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದರು.
ಏಪ್ರಿಲ್ 19 ರಂದು ಕೇಂದ್ರ ಸರ್ಕಾರವು ಲಸಿಕೆ ಪ್ರಕ್ರಿಯೆ ನೀತಿಯನ್ನು ಬದಲಾವಣೆ ಮಾಡಿ ಮೇ 1 ರಿಂದ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ಜೊತೆಗೆ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಉತ್ಪಾದಕರಿಂದಲೆ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತ್ತು.
ಹೊಸ ಲಸಿಕೆ ಪ್ರಕ್ರಿಯೆಗೆ ಅರ್ಹ ಜನಸಂಖ್ಯೆ ಗುಂಪುಗಳ ನೋಂದಣಿ ಬುಧವಾರ ಪ್ರಾರಂಭವಾಗಿದ್ದು. ಸಂಭಾವ್ಯ ಫಲಾನುಭವಿಗಳು ನೇರವಾಗಿ ಕೋವಿನ್ ಪೋರ್ಟಲ್ (cowin.gov.in) ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಟ್ವಿಟರ್‌ನಲ್ಲಿ ಆಕ್ಸಿಜನ್ ಕೇಳಿದ ಯುವಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ ಯುಪಿ ಪೊಲೀಸ್!