Homeಮುಖಪುಟತಮಿಳುನಾಡು ಮಾದರಿ ಅನುಸರಿಸಿದ ಜಾರ್ಖಂಡ್‌ : ಅಲ್ಲೂ ಗೋ ಬ್ಯಾಕ್‌ ಮೋದಿ ಟ್ವಿಟ್ಟರ್‌ ಟ್ರೆಂಡಿಂಗ್‌

ತಮಿಳುನಾಡು ಮಾದರಿ ಅನುಸರಿಸಿದ ಜಾರ್ಖಂಡ್‌ : ಅಲ್ಲೂ ಗೋ ಬ್ಯಾಕ್‌ ಮೋದಿ ಟ್ವಿಟ್ಟರ್‌ ಟ್ರೆಂಡಿಂಗ್‌

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಇಂದು ಜಾರ್ಖಂಡ್‌ಗೆ ಪ್ರವಾಸ ಬೆಳೆಸಿದ್ದಾರೆ. ಆದರೆ ಜಾರ್ಖಂಡ್‌ ಜನರು ಕೂಡ ತಮಿಳುನಾಡು ಹಾದಿಯನ್ನು ತುಳಿದಿದ್ದು ಅಲ್ಲೂ ಗೋ ಬ್ಯಾಕ್‌ ಮೋದಿ ಎನ್ನುವ ಮೂಲಕ ಟ್ವಿಟ್ಟರ್‌ ಟ್ರೆಂಡಿಂಗ್‌ ಮಾಡಿದ್ದಾರೆ.

ಇಂದು ಟ್ವಿಟ್ಟರ್‌ನಲ್ಲಿ Go Back Modi ಎಂದು ಬರೋಬ್ಬರಿ 50 ಸಾವಿರ ಟ್ವೀಟ್‌ಗಳು ದಾಖಲಾಗಿವೆ. ಚುನಾವಣಾ ಬಾಂಡ್‌ಗಳ ದುರ್ಬಳಕೆ, ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆಯಲ್ಲಿನ ಗೊಂದಲಗಳು, ಜಾರ್ಖಂಡ್‌ನಲ್ಲಿನ ಹಸಿವು ಇತ್ಯಾದಿಗಳ ವಿಚಾರ ಇಟ್ಟುಕೊಂಡು ನರೇಂದ್ರ ಮೋದಿಯವರನ್ನು ಟೀಕಿಸಲಾಗಿದೆ.

ಇದನ್ನೂ ಓದಿ: ಟ್ರಿಲಿಯನ್‌ಗೆ ಎಷ್ಟು ಸೊನ್ನೆ ಎಂದು ಕೇಳಿ ಗಮನಸೆಳೆದಿದ್ದ ಗೌರವ್‌ ವಲ್ಲಭ್‌ ಈಗ ಜಾರ್ಖಂಡ್‌ ಸಿಎಂ ಎದುರು ಕಣಕ್ಕೆ…

ಈ ರೀತಿ ಟ್ರೆಂಡಿಂಗ್‌ ಆಗಿರುವುದನ್ನು ನೋಡಿ ಬಹಳಷ್ಟು ಜನ ನರೇಂದ್ರ ಮೋದಿಯವರು ತಮಿಳುನಾಡಿಗೆ ಹೋಗುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆನಂತರ ಓಹ್ ಜಾರ್ಖಂಡ್‌ ಕೂಡ ತಮಿಳುನಾಡು, ಕೇರಳದ ದಾರಿ ಹಿಡಿಯತೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತ ಟ್ವಿಟ್ಟರ್‌ನಲ್ಲಿ ಬಹಳಷ್ಟು ಮೀಮ್ಸ್‌ಗಳು ಹರಿದಾಡುತ್ತಿವೆ. ಗೋ ಬ್ಯಾಕ್ ಮೋದಿ ಎನ್ನುವುದು ಭಾರತ ಮತ್ತು ಪ್ರಪಂಚ ಎರಡೂ ವಿಭಾಗದಲ್ಲಿ ಟ್ರೆಂಡಿಂಗ್‌ ಆಗಿದೆ.

ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ: 81 ಕ್ಷೇತ್ರಗಳಿಗೆ 5 ಹಂತಗಳಲ್ಲಿ ಚುನಾವಣೆ..

ಇದೇ ನವೆಂಬರ್‌ 30ರಿಂದ ಆರಂಭವಾಗಲಿರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಯು ಒಟ್ಟು 81 ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೂಡ ಗೋ ಬ್ಯಾಕ್ ಮೋದಿ ಅಭಿಯಾನ
    ಮೂಡುವಂಥ ದಾದರೆ ರಾಜ್ಯದ ಅಭಿವೃದ್ಧಿ ಏಳಿಗೆಗೆ ಪಾತ್ರವಾಗುತ್ತದೆ ಎಂಬ ನ ಸುತ್ತದೆ ಜೈ ಭೀಮ್ ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...