Homeಮುಖಪುಟಮಹಾರಾಷ್ಟ್ರದ ನಡೆ ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಕಪ್ಪು ಬ್ಯಾನರ್ ಪ್ರದರ್ಶನ

ಮಹಾರಾಷ್ಟ್ರದ ನಡೆ ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಕಪ್ಪು ಬ್ಯಾನರ್ ಪ್ರದರ್ಶನ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಅಪ್ರಜಾತಾಂತ್ರಿಕವಾಗಿ ಸರ್ಕಾರ ರಚಿಸಿರುವುದನ್ನು ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕೋಲಾಹಲ ಎಬ್ಬಿಸಿದರು. ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಬಿಜೆಪಿ ಬಿರುದ್ಧ ಘೋಷಣೆ ಕೂಗಿದರು.

ಲೋಕಸಭೆಯಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಮಹಾರಾಷ್ಟ್ರದಲ್ಲಿ ವಾಮಮಾರ್ಗದಲ್ಲಿ ಸರ್ಕಾರ ರಚನೆಯಾಗಿದೆ ಎಂದು ಆರೋಪಿಸಿ ಕಪ್ಪು ಬ್ಯಾನರ್ ಹಿಡಿದು ಸಭಾಧ್ಯಕ್ಷ ಮುಂದಿನ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

ಇದರಿಂದ ಸಿಟ್ಟಾದ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಕೂಡಲೇ ಕಪ್ಪು ಬ್ಯಾನರ್ ಕಿತ್ತುಕೊಂಡು ಬ್ಯಾನರ್ ಹಿಡಿದ ಇಬ್ಬರು ಸದಸ್ಯರನ್ನು ಹೊರಹಾಕುವಂತೆ ಮಾರ್ಷಲ್ ಗಳಿಗೆ ಆದೇಶಿಸಿದರು.

ಸಭಾಧ್ಯಕ್ಷರ ಮುಂದಿನ ಬಾವಿಗೆ ಬಂದ ಮಾರ್ಷಲ್ ಗಳು ಬ್ಯಾನರ್ ಹಿಡಿದಿದ್ದ ಹಬಿ ಎಡೆನ್ ಮತ್ತು ಟಿ.ಎನ್.ಪ್ರಾತಾಪನ್ ಅವರನ್ನು ದೈಹಿಕವಾಗಿ ಹಿಡಿದು ಹೊರಹಾಕಲು ಮುಂದಾದರು. ಆಗ ಎಲ್ಲ ಕಾಂಗ್ರೆಸ್ ಸದಸ್ಯರು ಅವರ ಬೆಂಬಲಕ್ಕೆ ಬಂದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಹೀಗಾಗಿ ಸಭಾಧ್ಯಕ್ಷರು ಸದನವನ್ನು ಕೆಲ ಕಾಲ ಮುಂದೂಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಪುರುಷ ಮಾರ್ಷಲ್ ಗಳು ಮಹಿಳಾ ಸಂಸದರನ್ನು ದೈಹಿಕವಾಗಿ ಹಿಡಿದು ಹೊರಹಾಕಲು ಮುಂದಾಗಿರುವುದು ಸರಿಯಲ್ಲ. ಮಹಾರಾಷ್ಟ್ರ ರಾಷ್ಟ್ರದಲ್ಲಿ ಅನೈತಿಕವಾಗಿ ಸರ್ಕಾರ ರಚಿಸಿರುವುದನ್ನು ವಿರೋಧಿಸಿ ಮಹಿಳಾ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಮಾರ್ಷೆಲ್ ಗಳು ಹಿಡಿದೆಳೆದಿರುವುದು ಆಕ್ಷೇಪಾರ್ಹ ಎಂದರು.

ಲೋಸಭೆಯ ಇತಿಹಾಸದಲ್ಲಿ ನಾವು ಎಂದಿಗೂ ಇಂಥದ್ದನ್ನು ಅನುಭವಿಸಿರಲಿಲ್ಲ. ಈ ಘಟನೆ ಬಗ್ಗೆ ಜವಾಬ್ದಾರಿ ಯುತ ವ್ಯಕ್ತಿಗಳು ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೋ ಕಾದು ನೋಡುತ್ತಿದ್ದೇವೆ ಎಂದು ಚೌದರಿ ತಿಳಿಸಿದರು.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಂಸತ್ ಭವನದ ಆವರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಸಂಸದರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಾಹುಲ್ ಗಾಂಧಿ ಮಾನತಾಡಿ ಮಹಾರಾಷ್ಟ್ರದಲ್ಲಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಟೀಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...