Homeಚಳವಳಿಮೋದಿ ಮೋದಿ ಎಂದು ಕೂಗುತ್ತಾ ಗೂಂಡಾಗಳಿಂದ ರಾಕೇಶ್ ಟಿಕಾಯತ್, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿ ಮೇಲೆ ಹಲ್ಲೆ

ಮೋದಿ ಮೋದಿ ಎಂದು ಕೂಗುತ್ತಾ ಗೂಂಡಾಗಳಿಂದ ರಾಕೇಶ್ ಟಿಕಾಯತ್, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿ ಮೇಲೆ ಹಲ್ಲೆ

- Advertisement -
- Advertisement -

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತ ಸಂಘದ ಸಮಾಲೋಚನಾ ಸಭೆಗೆ ನುಗ್ಗಿದ ಕೆಲ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ, ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಮಸಿ ಬಳಿದಿರುವ ಘಟನೆ ಜರುಗಿದೆ.

ಮೋದಿಗೆ ಜೈಕಾರ ಹಾಕುತ್ತ ಏಕಾಏಕಿ ನುಗ್ಗಿದ ಹಿಂದುತ್ವ ಗೂಂಡಾಗಳು ಸಿಕ್ಕ ಸಿಕ್ಕವರ ಮೇಲೆ ಮಸಿ ಎರಚಿದರು. ವೇದಿಕೆಯ ಮೇಲಿದ್ದ ಮುಖಂಡರಿಗೆ ಹಲ್ಲೆ ನಡೆಸಿದರು. ಕುರ್ಚಿ ಎಸೆದು ದಾಂಧಲೆ ನಡೆಸಿದರು ಎಂದು ಸಭೆಯಲ್ಲಿ ಭಾಗಹಿಸಿದ್ದವರು ಮಾಹಿತಿ ನೀಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರವು ಸ್ಥಳದಲ್ಲಿ ಭದ್ರತೆಯನ್ನು ಒದಗಿಸಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. “ಇಲ್ಲಿ ಸ್ಥಳೀಯ ಪೊಲೀಸರು ಯಾವುದೇ ಭದ್ರತೆಯನ್ನು ಒದಗಿಸಿಲ್ಲ. ಗೂಂಡಾಗಳು ಸರ್ಕಾರದ ಜೊತೆ ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಅಲ್ಲಿ ಇದ್ದ ಪೊಲೀಸರು ಇದನ್ನು ತಡೆಯದೆ ಮೂಕ ಪ್ರೇಕ್ಷಕರಾಗಿದ್ದರು. ತದನಂತರ ಕೆಲ ಗೂಂಡಾಗಳನ್ನು ಬಂಧಿಸಲಾಗಿದೆ. ಈಗ ಮತ್ತೆ ಸಭೆ ಮುಂದುವರಿಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ರೈತರ ಹೆಸರೇಳಿ ಲೂಟಿ ದಂದೆ ಮಾಡ್ತಿರೋ ಕೋಡಿಹಳ್ಳಿ ,ಠೀಕಾಯತ್ ರವರ ಬಗ್ಗೆ ತನಿಖೆ ಆಗಬೇಕಿದೆ,ಈ ದಿನ ನಡೆದ ಘಟನೆ ನಕಲಿ ರೈತ ಮುಖಂಡರಿಗೆ ಎಚ್ಚರಿಕೆ ಆಗಲಿ

  2. In farmers associations deal leaders sd be avoided and be chased until proper enquires against Kodihalli followers.

    Kindly support real farmers leaders.

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...