Homeಎಕಾನಮಿಜಿಎಸ್‌ಟಿ: ಲಾಕ್‌ಡೌನ್‌ ನಂತರ ಮೊದಲ ಬಾರಿಗೆ 1.05 ಲಕ್ಷ ಕೋಟಿ ಸಂಗ್ರಹ!

ಜಿಎಸ್‌ಟಿ: ಲಾಕ್‌ಡೌನ್‌ ನಂತರ ಮೊದಲ ಬಾರಿಗೆ 1.05 ಲಕ್ಷ ಕೋಟಿ ಸಂಗ್ರಹ!

ಅಕ್ಟೋಬರ್‌ ತಿಂಗಳಿನಲ್ಲಿ ಜಿಎಸ್‌ಟಿ ದೊಡ್ಡಮೊತ್ತದಲ್ಲಿ ಸಂಗ್ರಹವಾಗಿದೆ. ಈಗಲಾದರೂ ರಾಜ್ಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಜಿಎಸ್‌ಟಿ ಪಾಲು ಸಿಗಲಿದೆಯೇ ಎಂದು ಕಾದುನೋಡಬೇಕಿದೆ.

- Advertisement -
- Advertisement -

ಅಕ್ಟೋಬರ್‌ ತಿಂಗಳಿನಲ್ಲಿ 1.05 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿದ್ದು, ಈ ವರ್ಷದ ಫೆಬ್ರವರಿಯ ನಂತರ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ಇಂದು ತಿಳಿಸಿದೆ.

ಇದನ್ನೂ ಓದಿ: ಜಿಎಸ್‌ಟಿ ಬಿಕ್ಕಟ್ಟು: 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಕೇಂದ್ರ!

2020 ರ ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,05,155 ಕೋಟಿ ರೂ. ಆಗಿದ್ದು, ಇದರಲ್ಲಿ ಸಿಜಿಎಸ್‌ಟಿ 19,193 ಕೋಟಿ ರೂ., ಎಸ್‌ಜಿಎಸ್‌ಟಿ 5,411 ಕೋಟಿ ರೂ., ಐಜಿಎಸ್‌ಟಿ 52,540 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 23,375 ಕೋಟಿ ರೂ.) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ 95,379 ಕೋಟಿ ರೂ.ಗಳಿಗಿಂತ ಈ ತಿಂಗಳ ಆದಾಯವು ಶೇಕಡಾ 10 ರಷ್ಟು ಹೆಚ್ಚಾಗಿದೆ. ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಕುಸಿದಿತ್ತು.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳ ಪಟ್ಟಿ: ರಾಜ್ಯೋತ್ಸವದಂದು ಸಿದ್ದರಾಮಯ್ಯ ಆಕ್ರೋಶ

ಆರ್ಥಿಕ ಕುಸಿತದ ಕಾರಣದಿಂದ ಈ ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪಾಲು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಜೊತೆಗೆ ಇದು “ದೇವರ ಕ್ರಿಯೆ” ಎಂದು ಹೇಳಿ ವ್ಯಾಪಕ ಟೀಕೆ ಮತ್ತು ವ್ಯಂಗ್ಯಕ್ಕೆ ಗುriಯಾಗಿದ್ದರು. ಬಿಜೆಪಿಯೇತರ ರಾಜ್ಯ ಸರ್ಕಾರಗಳು ತಮ್ಮ ಜಿಎಸ್‌ಟಿ ಪಾಲು ನೀಡುವಂತೆ ಪ್ರತಿಭಟಿಸುತ್ತಿದ್ದವು. ಕೇರಳ ಒಂದು ಹೆಜ್ಜೆ ಮುಂದೆ ಹೋಗಿ ಸುಪ್ರೀಂ ಮೆಟ್ಟಿಲೇರುವುದಾಗಿ ಎಚ್ಚರಿಸಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ -23 ರಷ್ಟು ಕುಸಿದಿತ್ತು. ಇದು ಪುನಃ ಚೇತರಿಸಿಕೊಳ್ಳಲು ಕೆಲವು ವರ್ಷಗಳೆ ಬೇಕಾಗಬಹುದು ಎಂದು ಆರ್‌ಬಿಐ ಉಪ ಗವರ್ನರ್‌ ಹೇಳಿದ್ದರು. ಕಳೆದವಾರ ನಿರ್ಮಲಾ ಸೀತಾರಾಮನ್, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಋಣಾತ್ಮಕವಾಗಿಯೇ ಇರಲಿದೆ ಎಂದು ಹೇಳಿದ್ದರು.

ಇದೀಗ ಅಕ್ಟೋಬರ್‌ ತಿಂಗಳಿನಲ್ಲಿ ಜಿಎಸ್‌ಟಿ ದೊಡ್ಡಮೊತ್ತದಲ್ಲಿ ಸಂಗ್ರಹವಾಗಿದೆ. ಈಗಲಾದರೂ ರಾಜ್ಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಜಿಎಸ್‌ಟಿ ಪಾಲು ಸಿಗಲಿದೆಯೇ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: ಜಿಎಸ್‌ಟಿ ಪಾಲು ನೀಡುವಂತೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...