Homeಮುಖಪುಟಭಾರತ ಕೇವಲ ಹಿಂದಿವಾಲಾಗಳ ದೇಶವೇ? ದ್ರಾವಿಡ ಚಳವಳಿ ನೆನಪಿದೆಯೇ?: ಟಿ.ಎ.ನಾರಾಯಣಗೌಡ

ಭಾರತ ಕೇವಲ ಹಿಂದಿವಾಲಾಗಳ ದೇಶವೇ? ದ್ರಾವಿಡ ಚಳವಳಿ ನೆನಪಿದೆಯೇ?: ಟಿ.ಎ.ನಾರಾಯಣಗೌಡ

ಕೇಂದ್ರ ಸರ್ಕಾರದ ನಡವಳಿಕೆ ನೋಡಿದರೆ ದಕ್ಷಿಣ ಭಾರತೀಯರನ್ನು ಅವರು ದೇಶದ ನಾಗರಿಕರೆಂದು ಪರಿಗಣಿಸಿಯೇ ಇಲ್ಲವೆಂದು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -
- Advertisement -

ಕರ್ನಾಟಕ ರಕ್ಷಣಾ ವೇದಿಕೆ ಕಚೇರಿ ಮುಂಭಾಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣದ ನಂತರ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಮಾತನಾಡಿ, “ಭಾರತವೇನು ಕೇವಲ ಹಿಂದಿವಾಲಾಗಳ ದೇಶವೇ? ದ್ರಾವಿಡ ಚಳವಳಿ ನೆನಪಿದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೇಂದ್ರ ಸರ್ಕಾರದ ನಡವಳಿಕೆ ನೋಡಿದರೆ ದಕ್ಷಿಣ ಭಾರತೀಯರನ್ನು ಅವರು ದೇಶದ ನಾಗರಿಕರೆಂದು ಪರಿಗಣಿಸಿಯೇ ಇಲ್ಲವೆಂದು ತೋರುತ್ತದೆ. ಭಾರತವೇನು ಕೇವಲ ಹಿಂದಿವಾಲಾಗಳ ದೇಶವೇ? ದ್ರಾವಿಡ ಚಳವಳಿ ನೆನಪಿದೆಯೇ? ಅಂಥ ಚಳವಳಿ ಮತ್ತೆ ಮರುಕಳಿಸಿದರೆ ಆಶ್ವರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಿಲ್ಲವೇ? ಯಾಕೆ ಅವರು ಕರ್ನಾಟಕದ ನೆರೆ ಸಂತ್ರಸ್ಥ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಅವರ ದೃಷ್ಟಿಯಲ್ಲಿ ಉತ್ತರ ಭಾರತ ಮಾತ್ರ ಭಾರತವೇ? ದಕ್ಷಿಣ ಭಾರತವು ಭಾರತಕ್ಕೆ ಸೇರಿಲ್ಲವೇ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳ ಪಟ್ಟಿ: ರಾಜ್ಯೋತ್ಸವದಂದು ಸಿದ್ದರಾಮಯ್ಯ ಆಕ್ರೋಶ

“ಜಿಎಸ್ ಟಿ ಬಾಕಿ ಹಣ ಕೊಡಿ ಎಂದು ಕರ್ನಾಟಕ‌ ಬೇಡುವ ಸ್ಥಿತಿ ತಲುಪಿದೆ. ನಾವು ಯಾರ ಹಣವನ್ನು ಕೇಳುತ್ತಿದ್ದೇವೆ? ಅದು ನಮ್ಮದೇ ಹಣ. ನಾವೇ ಕೊಟ್ಟ ತೆರಿಗೆಯ ಒಂದು ಭಾಗವನ್ನಷ್ಟೇ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಹಣವನ್ನು ನಮಗೆ ಕೊಡದೆ ನಮ್ಮನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ದಕ್ಕಬೇಕಿರುವ ಅನುದಾನಗಳನ್ನು ಕೇಳಲು, ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಧಾನಿ ಜತೆ ಮಾತನಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭಯ ಪಡುತ್ತಿದ್ದಾರೆ. ಒಬ್ಬ ಪ್ರಧಾನಿ ಜತೆ ಮಾತಾಡಲು ಒಬ್ಬ ಮುಖ್ಯಮಂತ್ರಿ ಭಯ ಪಡುವ ಸ್ಥಿತಿ ತಲುಪಿದರೆ ಏನರ್ಥ? ಇದನ್ನು ಒಕ್ಕೂಟವೆಂದು ಕರೆಯಲು ಸಾಧ್ಯವೇ? ಒಕ್ಕೂಟದ ಮೂಲತತ್ತ್ವಗಳು‌ ಉಳಿದುಕೊಂಡಿವೆಯೇ?” ಎಂದು ಟಿ.ಎ.ನಾರಾಯಣಗೌಡ ಕಿಡಿಕಾರಿದರು.

“ರಾಜ್ಯೋತ್ಸವವನ್ನು ಸಂಘಸಂಸ್ಥೆಗಳು ಸರಳವಾಗಿ ಆಚರಿಸಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರ ನಡೆಸುವ‌ ಪಕ್ಷ, ಉಪಚುನಾವಣೆಗಳಲ್ಲಿ ಹತ್ತಾರು ಸಾವಿರ ಜನರನ್ನು ಸೇರಿಸಿ, ಸಿನಿಮಾ ಕಲಾವಿದರನ್ನು‌ ಕರೆಯಿಸಿ ರ್‍ಯಾಲಿಗಳನ್ನು ನಡೆಸುತ್ತದೆ. ನೀವು ಹೇಳುವ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ?” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗುಡ್ ನ್ಯೂಸ್: ಸುಡು ಬಿಸಿಲಿನಲ್ಲಿ ಗಿಡ ಮಾರುತ್ತಿದ್ದ ಅಜ್ಜನ ಮುಖದಲ್ಲಿ ಮಂದಹಾಸ ಮೂಡಿಸಿದ ಫೇಸ್‌ಬುಕ್…

“ಕರೋನಾ ಮತ್ತು ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ರಾಜ್ಯೋತ್ಸವ ಆಚರಿಸಲು‌ ನಾವು ಮೊದಲೇ ತೀರ್ಮಾನಿಸಿದ್ದೆವು. ಆದರೆ ರಾಜಕೀಯ ಪಕ್ಷಗಳು ಚುನಾವಣೆ ಹೆಸರಲ್ಲಿ‌ ತಾವೇ ಮಾಡಿದ ನಿಯಮಗಳನ್ನು ತಾವೇ ಮುರಿಯುತ್ತಿವೆ. ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮ, ಸಡಗರವಲ್ಲ. ಅಖಂಡ ಕರ್ನಾಟಕದ ಕನಸು ಕಂಡ ನಮ್ಮ ಹಿರಿಯರ ಶ್ರೇಯೋಭಿಲಾಷೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಸವಾಲು. ನಾವು ನಮ್ಮ ಹಕ್ಕುಗಳಿಗೆ ಯಾರನ್ನು ಬೇಕಾದರೂ ಪ್ರಶ್ನಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ಕನ್ನಡಿಗರ ಹಕ್ಕೊತ್ತಾಯಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಪ್ರಶ್ನಿಸುತ್ತಿರೋಣ, ಹೋರಾಟ ನಡೆಸೋಣ” ಎಂದು ಟಿ.ಎ.ನಾರಾಯಣಗೌಡ ಕರೆನೀಡಿದರು.

ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ ಎಂದ ಟಿ.ಎ.ನಾರಾಯಣಗೌಡ, “ನಾವು ಈಗ ಪ್ರಾದೇಶಿಕ ಚಿಂತನೆಗಳನ್ನು ಬಿತ್ತಬೇಕಿದೆ. ಕೇಂದ್ರ ಸರ್ಕಾರ ಏನೇ ಸಮಸ್ಯೆ ಬಂದರೂ‌ ಒಮ್ಮೆ ಚೀನಾ ಕಡೆ ಮತ್ತೊಮ್ಮೆ ಪಾಕಿಸ್ತಾನದ ಕಡೆ ತೋರಿಸಿ ನುಣುಚಿಕೊಳ್ಳುತ್ತದೆ. ಈ‌ ಆಟ ಹೆಚ್ಚು‌ ದಿನ‌ ನಡೆಯದು. ಕನ್ನಡಿಗರು ಜಾಗ್ರತರಾಗಿದ್ದಾರೆ” ಎಂದು ಹೇಳಿದರು.


ಇದನ್ನೂ ಓದಿ: ಬೆಂಗಳೂರಿನಲ್ಲಿ ಆಪ್‌ನಿಂದ ‘ಆಮ್ ಆದ್ಮಿ ಕ್ಲಿನಿಕ್’ ಉದ್ಘಾಟನೆ: ಪೂರ್ತಿ ಉಚಿತ ಚಿಕಿತ್ಸೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...