Homeಮುಖಪುಟಗುಜರಾತ್‌: ನಮಾಝ್‌ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ; ಪೋಸ್ಟ್‌ ಅಳಿಸುವಂತೆ ಎಕ್ಸ್‌ಗೆ ಸೂಚನೆ?

ಗುಜರಾತ್‌: ನಮಾಝ್‌ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ; ಪೋಸ್ಟ್‌ ಅಳಿಸುವಂತೆ ಎಕ್ಸ್‌ಗೆ ಸೂಚನೆ?

- Advertisement -
- Advertisement -

ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ನಾಲ್ಕು ವೀಡಿಯೊಗಳನ್ನು ಎಕ್ಸ್‌ ಖಾತೆಯಿಂದ ತೆಗೆದು ಹಾಕುಲು ಗುಜರಾತ್ ಲಾ ಎನ್‌ಫೋರ್ಸ್‌ಮೆಂಟ್ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇಳಿಕೊಂಡಿದೆ ಎಂದು ಆಲ್ಟ್ ನ್ಯೂಸ್  ಫ್ಯಾಕ್ಟ್ ಚೆಕ್ ಪೋರ್ಟಲ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ನಾಲ್ಕು ವೀಡಿಯೊಗಳನ್ನು ಅವರು ಪೋಸ್ಟ್‌ ಮಾಡಿದ್ದರು.  ಆದರೆ
ಗುಜರಾತ್ ಮತ್ತು ಅಹಮದಾಬಾದ್ ನಗರದ ಉನ್ನತ ಪೊಲೀಸ್ ಅಧಿಕಾರಿಗಳು ಎಕ್ಸ್‌ಗೆ ಅಂತಹ ಯಾವುದೇ ವಿನಂತಿಗಳನ್ನು ಮಾಡಿರುವ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೊಹಮ್ಮದ್ ಝುಬೈರ್, ಗುಜರಾತ್ ವಿಶ್ವವಿದ್ಯಾನಿಲಯದ ಹಿಂಸಾಚಾರದ ಕುರಿತು ಹಂಚಿಕೊಂಡಿರುವ ವಿಷಯವು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳುವ ಮೂಲಕ ಈ ಪೋಸ್ಟ್‌ನ್ನು ತೆಗೆದುಹಾಕಲು ಎಕ್ಸ್‌ಗೆ ಗುಜರಾತ್ ಕಾನೂನು ಜಾರಿ ಸಂಸ್ಥೆ ಇ-ಮೇಲ್ ಕಳುಹಿಸಿದೆ ಎಂದು ಹೇಳಿದ್ದು, ಇ-ಮೇಲ್‌ನ ಸ್ಕ್ರೀನ್‌ಶಾಟ್‌ನ್ನು ಸಹ ಜುಬೈರ್ ಹಂಚಿಕೊಂಡಿದ್ದಾರೆ.

ಈ ಕುರಿತು ಗುಜರಾತ್ ಡಿಜಿಪಿ ವಿಕಾಸ್ ಸಹಾಯ್ ಮತ್ತು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಜಿ ಎಸ್ ಮಲಿಕ್ ಅವರು ಪ್ರತಿಕ್ರಿಯಿಸಿದ್ದು, ನಮಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಗುಜರಾತ್ ವಿಶ್ವವಿದ್ಯಾನಿಲಯದ ಅಹಮದಾಬಾದ್ ಹಾಸ್ಟೆಲ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೆ ರಂಝಾನ್‌ ನಮಾಝ್‌ ವೇಳೆ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಹಾಸ್ಟೆಲ್‌ನಲ್ಲಿದ್ದ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಗಿದೆ.  ಕ್ಯಾಂಪಸ್‌ನಲ್ಲಿ ಮಸೀದಿ ಇಲ್ಲ, ಆದ್ದರಿಂದ ರಂಝಾನ್ ಸಮಯದಲ್ಲಿ ರಾತ್ರಿ ಮಾಡಲಾಗುವ ತರಾವೀಹ್  ನಮಾಜ್ ಮಾಡಲು ಹಾಸ್ಟೆಲ್‌ನೊಳಗೆ ಸೇರಿದ್ದೆವು. ಸ್ವಲ್ಪ ಸಮಯದ ನಂತರ, ದೊಣ್ಣೆಗಳು ಮತ್ತು ಚಾಕುಗಳೊಂದಿಗೆ ಶಸ್ತ್ರಸಜ್ಜಿತವಾದ ಗುಂಪೊಂದು ಹಾಸ್ಟೆಲ್‌ಗೆ ನುಗ್ಗಿ ದಾಳಿ ಮಾಡಿ ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ಗುಂಪನ್ನು ತಡೆಯಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದರು.

ಘಟನೆ ಬಳಿಕ ಅಹಮದಾಬಾದ್ ಪೊಲೀಸರು ಮಧ್ಯಪ್ರವೇಶಿಸಿ ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದರು. ಘಟನೆ ಬಳಿಕ ಐವರನ್ನು ಬಂಧಿಸಲಾಗಿದೆ ಮತ್ತು ಹೊಸ ಎನ್‌ಆರ್‌ಐ ಹಾಸ್ಟೆಲ್‌ನಲ್ಲಿ ಸಾರ್ವಜನಿಕ ಚಟುವಟಿಕೆಗಳ ವಿರುದ್ಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಇದನ್ನು ಓದಿ: ಗುಜರಾತ್ ಹಾಸ್ಟೆಲ್‌ನಲ್ಲಿ ನಮಾಝ್‌ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪು ದಾಳಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...