Homeಮುಖಪುಟಗುಜರಾತ್‌: ಕಾಂಗ್ರೆಸ್ ಶಾಸಕ ಅನಂತ್‌ ಪಟೇಲ್‌ ಮೇಲೆ ಹಲ್ಲೆ; ಕೃತ್ಯದ ಹಿಂದೆ ಬಿಜೆಪಿ ಕೈವಾಡ?

ಗುಜರಾತ್‌: ಕಾಂಗ್ರೆಸ್ ಶಾಸಕ ಅನಂತ್‌ ಪಟೇಲ್‌ ಮೇಲೆ ಹಲ್ಲೆ; ಕೃತ್ಯದ ಹಿಂದೆ ಬಿಜೆಪಿ ಕೈವಾಡ?

- Advertisement -
- Advertisement -

ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ, ಬುಡಕಟ್ಟು ನಾಯಕ ಅನಂತ್ ಪಟೇಲ್ ಮೇಲೆ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರು ಬಿಜೆಪಿಯ ಮುಖಂಡರೆಂದು ಆರೋಪಿಸಲಾಗಿದೆ.

“ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರದ ಆಡಳಿತದಲ್ಲಿ ಯಾರೇ ಧ್ವನಿ ಎತ್ತಿದರೂ ಅವರನ್ನು ಹೊಡೆದು ಜೈಲಿಗೆ ಕಳುಹಿಸಲಾಗುತ್ತದೆ” ಎಂದು ಅನಂತ್ ಪಟೇಲ್ ತಿಳಿಸಿದ್ದಾರೆ.

“ಸಭೆಯೊಂದರಲ್ಲಿ ಪಾಲ್ಗೊಳ್ಳಲು ನವಸಾರಿಯ ಖೇರ್ಗಾಮ್ ತಲುಪುತ್ತಿದ್ದಾಗ ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಗಳು ನನ್ನ ಕಾರನ್ನು ಧ್ವಂಸಗೊಳಿಸಿ ಥಳಿಸಿದ್ದಾರೆ” ಎಂದು ಬುಡಕಟ್ಟು ನಾಯಕ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಗೂಂಡಾಗಳು ತಮ್ಮ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, “ನೀವು ಆದಿವಾಸಿಯಾಗಿ ನಾಯಕರಾಗುತ್ತಿದ್ದೀರಿ. ಆದಿವಾಸಿಯನ್ನು ಇಲ್ಲಿ ಕಾಲಿಡಲು ಬಿಡುವುದಿಲ್ಲ” ಎಂದಿರುವುದಾಗಿ ತಿಳಿಸಿದ್ದಾರೆ.

ಬುಡಕಟ್ಟು ನಾಯಕನನ್ನು ಥಳಿಸಿರುವ ಸುದ್ದಿ ತಿಳಿದ ತಕ್ಷಣ, ಕಾಂಗ್ರೆಸ್ ಶಾಸಕರ ಬೆಂಬಲಕ್ಕೆ ಜನರು ದೌಡಾಯಿಸಿದ್ದಾರೆ. ಶನಿವಾರ ರಾತ್ರಿ ಪ್ರತಿಭಟನಾಕಾರರ ಭಾರೀ ಗುಂಪು ಜಮಾಯಿಸಿತು. ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಗಳನ್ನು ಹಿಡಿಯುವವರೆಗೆ 14 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಪಟೇಲ್, “ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಗಳು ನನ್ನ ಕಾರನ್ನು ಧ್ವಂಸಗೊಳಿಸಿದರು. ನಾನು ಸಭೆಯಲ್ಲಿ ಪಾಲ್ಗೊಳ್ಳಲು ನವಸಾರಿಯ ಖೇರ್ಗಾಮ್‌ಗೆ ತಲುಪುತ್ತಿದ್ದಾಗ ನನ್ನನ್ನು ಹೊಡೆಯಲಾಯಿತು. ಆದಿವಾಸಿಗಳಾಗಿರುವ ನೀನು ನಾಯಕನಾಗುತ್ತಿದ್ದೀಯ, ನಿನ್ನನ್ನು ಬಿಡುವುದಿಲ್ಲ. ಒಬ್ಬ ಆದಿವಾಸಿ ಇಲ್ಲಿ ನಡೆಯಲು ಬಿಡುವುದಿಲ್ಲ ಎಂದು ನಿಂದಿಸಿದರು” ಎಂದು ದೂರಿದ್ದಾರೆ.

ಇದನ್ನೂ ಓದಿರಿ: ಬೀದರ್‌: ಮದರಸಾಕ್ಕೆ ನುಗ್ಗಿ ‘ಜೈ ಶ್ರೀರಾಮ್’ ಘೋಷಣೆ, ಪೂಜೆ; ಪ್ರಕರಣ ದಾಖಲು

“ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮತ್ತು ಅವರ ಗೂಂಡಾಗಳನ್ನು ಹಿಡಿಯುವವರೆಗೂ ನಾವು ಇಲ್ಲಿ ಪ್ರತಿಭಟನೆ ನಡೆಸುತ್ತೇವೆ. ಅಲ್ಲಿಯವರೆಗೆ 14 ಜಿಲ್ಲೆಗಳ ಹೆದ್ದಾರಿಗಳನ್ನು ಆದಿವಾಸಿಗಳು ನಿರ್ಬಂಧಿಸಲಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಯಾರೇ ಧ್ವನಿ ಎತ್ತಿದರೂ ಅವರನ್ನು ಹೊಡೆದು ಜೈಲಿಗೆ ಕಳುಹಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ನಿನ್ನೆ ನಾಲ್ಕೈದು ಮಂದಿ ಅನಂತ್ ಪಟೇಲ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಪಟೇಲ್‌ ತಮ್ಮ ಆದಿವಾಸಿ ಬೆಂಬಲಿಗರೊಂದಿಗೆ ಪ್ರತಿಭಟನೆಗೆ ಕುಳಿತರು. ಮೂರು ದಿನಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ನಿಯಮಗಳ ಪ್ರಕಾರ ದೂರು ದಾಖಲಿಸಲಾಗಿದೆ” ಎಂದು ನವಸಾರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...