Homeಮುಖಪುಟಇಸ್ರೇಲ್‌ನ ಆಕ್ರಮಣಕಾರಿ ದಾಳಿಯಲ್ಲಿ ಹಮಾಸ್ ಕಮಾಂಡರ್‌ನ ಹತ್ಯೆ

ಇಸ್ರೇಲ್‌ನ ಆಕ್ರಮಣಕಾರಿ ದಾಳಿಯಲ್ಲಿ ಹಮಾಸ್ ಕಮಾಂಡರ್‌ನ ಹತ್ಯೆ

- Advertisement -
- Advertisement -

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಆಕ್ರಮಣಕಾರಿ ದಾಳಿ ಮುಂದುವರೆದಿದ್ದು, ಇಸ್ರೇಲಿ ವಾಯುಪಡೆಯು ಹಮಾಸ್ ಸಂಘಟನೆಯ ಪ್ರದೇಶದ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲಿ ರಕ್ಷಣಾ ಪಡೆಗಳು ಮಂಗಳವಾರ ಗಾಜಾದ ಜಬಾಲಿಯಾದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ನಡೆಸಿವೆ.

ಹಮಾಸ್ ಸಂಘಟನೆಯ ಕೇಂದ್ರೀಯ ಜಬಾಲಿಯಾ ಬೆಟಾಲಿಯನ್‌ನ ಕಮಾಂಡರ್ ಇಬ್ರಾಹಿಂ ಬಿಯಾರಿ ಅವರನ್ನು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ನ ರಕ್ಷಣಾ ಪಡೆಗಳು ದೃಢಪಡಿಸಿವೆ. ಆದರೆ, ಈ ಶಿಬಿರದಲ್ಲಿ ಸಂಘಟನೆಯ ಮುಖಂಡರು ಇದ್ದರು ಎಂಬ ವರದಿಗಳನ್ನು ಹಮಾಸ್ ವಕ್ತಾರ ಹಝೀಮ್ ಕಾಸಿಂ ಅಲ್ಲಗಳೆದಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು ‘ನುಕ್ಖಾ’ ಹೋರಾಟಗಾರರನ್ನು ಇಸ್ರೇಲ್‌ಗೆ ಕಳುಹಿಸಿಕೊಡುವಲ್ಲಿ ಬಿಯಾರಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಐಡಿಎಫ್ ಹೇಳಿದೆ.

ಇದಕ್ಕೂ ಮುನ್ನ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಟ್ ಹೇಳಿಕೆ ನೀಡಿ, ಪರಿಹಾರ ಶಿಬಿರದ ಸುತ್ತಮುತ್ತ ಅತ್ಯ ಹಿರಿಯ ಹಮಾಸ್ ಕಮಾಂಡರ್ ಅವರನ್ನು ಐಡಿಎಫ್ ಗುರಿ ಮಾಡಿದೆ ಎಂದು ಪ್ರಕಟಿಸಿದ್ದರು.

ಇಲ್ಲಿ ರಕ್ಷಣಾ ಪಡೆಗಳು ಹಮಾಸ್ ಕಮಾಂಡರ್ ಸೇರಿದಂತೆ 50 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅಬು ಅಜೀನಾ ಹತ್ಯೆ ಹಮಾಸ್​ನ್ನು ದುರ್ಬಲಗೊಳಿಸಿದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್ ದಾಳಿಯಲ್ಲಿ ಇದುವರೆಗೆ 10 ಸಾವಿರ ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಹೇಳಿದೆ. ಇಸ್ರೇಲ್​ನಲ್ಲಿ ಇದುವರೆಗೆ 1,400 ಜನರು ಸಾವನ್ನಪ್ಪಿದ್ದಾರೆ, ಸುಮಾರು 250 ಜನರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿದೆ. ಇದೇ ಸಮಯದಲ್ಲಿ, ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಇಸ್ರೇಲಿ ಸೈನಿಕರು ಸಹ ಸಾವನ್ನಪ್ಪಿದ್ದಾರೆ.

ಇಸ್ರೇಲಿ ಸೇನೆಯು ಮೊದಲು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು, ಇದಾದ ನಂತರ ಹಮಾಸ್‌ನ ಸೆಂಟ್ರಲ್ ಜಬಾಲಿಯಾ ಬೆಟಾಲಿಯನ್ ಬಳಸುತ್ತಿದ್ದ ಕಟ್ಟಡವನ್ನು ಗ್ರೌಂಡ್ ಫೋರ್ಸ್ ವಶಪಡಿಸಿಕೊಂಡಿತು. ಇಸ್ರೇಲ್ ದಾಳಿಯಲ್ಲಿ ಜಬಾಲಿಯಾದಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಈ ಸಮಯದಲ್ಲಿ, ಇಸ್ರೇಲಿ ಸೇನೆಯು ಬೆಟಾಲಿಯನ್ ಮುಖ್ಯಸ್ಥ ಸೇರಿದಂತೆ 50 ಹಮಾಸ್ ಹೋರಾಟಗಾರರನ್ನು ಕೊಂದಿದೆ ಎಂದು ಹೇಳಲಾಗಿದೆ. ಇದಾದ ಬಳಿಕ ಇಲ್ಲಿ ನಿರ್ಮಿಸಲಾಗಿದ್ದ ಸುರಂಗವನ್ನೂ ಭೂಸೇನೆ ಧ್ವಂಸಗೊಳಿಸಿದೆ.

ಇದನ್ನೂ ಓದಿ: ಇಸ್ರೇಲ್ ಹಿಂಸಾಚಾರ: ಹಮಾಸ್‌ ಗುಂಪಿನ 150 ಸುರಂಗ ಮಾರ್ಗಗಳು ಧ್ವಂಸ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...