Homeಮುಖಪುಟಅನುಮತಿ ಇಲ್ಲದಿದ್ದರೂ ಮೆರವಣಿಗೆ ನಡೆಸಲು ಮುಂದಾಗಿರುವ ವಿಎಚ್‌ಪಿ: ನುಹ್‌ನಲ್ಲಿ ಇಂಟರ್ನೆಟ್ ಬಂದ್

ಅನುಮತಿ ಇಲ್ಲದಿದ್ದರೂ ಮೆರವಣಿಗೆ ನಡೆಸಲು ಮುಂದಾಗಿರುವ ವಿಎಚ್‌ಪಿ: ನುಹ್‌ನಲ್ಲಿ ಇಂಟರ್ನೆಟ್ ಬಂದ್

- Advertisement -
- Advertisement -

ವಿಶ್ವ ಹಿಂದೂ ಪರಿಷತ್‌ನವರು ಅನುಮತಿ ನಿರಾಕರಿಸಿದರೂ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ ಹಾಗಾಗಿ  ಹರ್ಯಾಣದ ಅಧಿಕಾರಿಗಳು ಶನಿವಾರ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಆಗಸ್ಟ್ 28 ರವರೆಗೆ ನಿಷೇಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ರ ಅಡಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಾರ್ವಜನಿಕವಾಗಿ ಸೇರುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜಿಲ್ಲೆಯ ನಿವಾಸಿಗಳು ಬಂದೂಕುಗಳು, ಕೋಲುಗಳು ಮತ್ತು ಕೊಡಲಿಗಳಂತಹ ಶಸ್ತ್ರಾಸ್ತ್ರಗಳನ್ನು (ಪರವಾನಗಿ ಪಡೆದಿರುವ ಶಸ್ತ್ರಾಸ್ತ್ರಗಳು) ಸಾರ್ವಜನಿಕವಾಗಿ ಒಯ್ಯುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನವರು ಆಗಸ್ಟ್ 28 ರಂದು ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಪುನರಾರಂಭಿಸಲು ಯೋಜಿಸುತ್ತಿದೆ. ಜುಲೈ 31ರಂದು ಇದೇ ಮೆರವಣಿಗೆಯಿಂದ ನುಹ್‌ನಲ್ಲಿ ಹಿಂಸಾಚಾರ ಆರಂಭವಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆಗಳು ನಡೆದವು, ಈ ಹಿಂಸಾಚಾರವು ಮುಂದಿನ ದಿನಗಳಲ್ಲಿ ನೆರೆಯ ಗುರುಗ್ರಾಮ್‌ಕ್ಕೂ ಹರಡಿತು.

ಗುರುಗ್ರಾಮ್‌ನಲ್ಲಿ ಹಿಂದೂತ್ವವಾದಿಗಳು ಈ ಹಿಂಸಾಚಾರವನ್ನು ನಡೆದರು. ಸೆಕ್ಟರ್ 57 ರಲ್ಲಿ ಮಸೀದಿಯನ್ನು ಸುಟ್ಟುಹಾಕಿದರು, ಅದರ ಉಪ ಇಮಾಮ್‌ನನ್ನು ಕೊಂದುಹಾಕಿದರು. ಆಗಸ್ಟ್ 1 ರಂದು ಸೆಕ್ಟರ್ 70 ರಲ್ಲಿ ಮುಸ್ಲಿಂ ವಲಸೆ ಕಾರ್ಮಿಕರ ಅಂಗಡಿಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಯಿತು. ಎರಡು ಜಿಲ್ಲೆಗಳಲ್ಲಿ ಹಿಂಸಾಚಾರವು ಆರು ಜನರನ್ನು ಬಲಿತೆಗೆದುಕೊಂಡಿತು.

ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಆತಂಕದಲ್ಲಿ ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ಆಗಸ್ಟ್ 28 ರಂದು ಮೆರವಣಿಗೆಗೆ ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಮತ್ತೊಂದೆಡೆ ಮೆರವಣಿಗೆಗೆ ಸ್ಥಳೀಯ ಆಡಳಿತ ಭದ್ರತೆ ಒದಗಿಸಿ ಅನುಕೂಲ ಮಾಡಿಕೊಡಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಂದ್ರ ಜೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ”ಧಾರ್ಮಿಕ ಮೆರವಣಿಗೆಗಳಿಗೆ ಅನುಮತಿ ತೆಗೆದುಕೊಳ್ಳುವುದಿಲ್ಲ. ಧಾರ್ಮಿಕ ಮೆರವಣಿಗೆಗಳಿಗೆ, ಆಡಳಿತವು ಸ್ವತಃ ಮುಂದೆ ಬರುತ್ತದೆ, ಸಹಕಾರ ನೀಡಿ, ಭದ್ರತೆಯನ್ನು ಕೊಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನುಹ್‌ ನಲ್ಲಿ ನಡೆದಂತೆ ಮಧ್ಯಪ್ರದೇಶದಲ್ಲಿ ಬಿಜೆಪಿ  ಗಲಭೆ  ಸೃಷ್ಟಿಸಲು ಯತ್ನಿಸುತ್ತದೆ: ದಿಗ್ವಿಜಯ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...