Homeಮುಖಪುಟ'ಪ್ರಭುತ್ವದ ಯೋಜನೆಯಾಗಿ ದ್ವೇಷ': ಇಂದು ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ವೆಬಿನಾರ್

‘ಪ್ರಭುತ್ವದ ಯೋಜನೆಯಾಗಿ ದ್ವೇಷ’: ಇಂದು ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ವೆಬಿನಾರ್

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ 60ನೇ ಜನ್ಮದಿನದ ಅಂಗವಾಗಿ ಇಂದು (ಜನವರಿ 29 ರ ಶನಿವಾರ) ಗೌರಿ ಮೆಮೋರಿಯಲ್ ಟ್ರಸ್ಟ್ ಮತ್ತು ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಪೀಸ್ ವೇದಿಕೆ ವತಿಯಿಂದ ‘ಪ್ರಭುತ್ವದ ಯೋಜನೆಯಾಗಿ ದ್ವೇಷ (Hate As State Project) ಎಂಬ ವಿಷಯದ ಕುರಿತು ವೆಬಿನಾರ್ ಆಯೋಜಿಸಲಾಗಿದೆ.

ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಝೂಮ್ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಭಾಷಾತಜ್ಞರಾದ ಪ್ರೊ.ಜಿ.ಎನ್ ದೇವಿಯವರು ಚಾಲನ ನುಡಿಗಳನ್ನಾಡಲ್ಲಿದ್ದು, ವಿಷಯದ ಕುರಿತು ಅಂಕಣಕಾರರು ಮತ್ತು ಅಜೀಂ ಪ್ರೇಮ್‌ಜಿ ವಿವಿಯ ಪ್ರಾಧ್ಯಾಪಕರಾದ ಎ.ನಾರಾಯಣರವರು ಮತ್ತು ಪತ್ರಕರ್ತರು ಹಾಗೂ ಹೋರಾಟಗಾರರಾದ ತೀಸ್ತಾ ಸೆಟ್ಲವಾದ್‌ರವರು ಮಾತನಾಡಲಿದ್ದಾರೆ.

ನಂತರ ನಡೆಯುವ ಪ್ಯಾನಲ್ ಚರ್ಚೆಯಲ್ಲಿ ದಿ ವೈರ್ ಪತ್ರಕರ್ತರಾದ ಆರ್ಫ ಖಾನಂ ಶೇರ್ವಾನಿ ಮತ್ತು ಇಸ್ಮತ್ ಅರ, ಕಲಾವಿದರಾದ ಸಯೇಮ, ಕಾನೂನು ವಿದ್ಯಾರ್ಥಿಯಾದ ನೂರ್ ಮಹ್ವಿಶ್‌ರವರು ಭಾಗವಹಿಸಲಿದ್ದು, ಪತ್ರಕರ್ತಾದ ಸಬ ನಖ್ವಿಯವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಈ ಝೂಮ್ ಲಿಂಕ್ ಬಳಸಿ

ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾ ಕೈಬಿಡಿ: ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...