Homeಕರ್ನಾಟಕ"ಆತ ನಮ್ಮ ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದಿದ್ದೇನೆ" -ಕಪಾಳಮೋಕ್ಷಕ್ಕೆ ಡಿಕೆಶಿ ಸ್ಪಷ್ಟನೆ

“ಆತ ನಮ್ಮ ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದಿದ್ದೇನೆ” -ಕಪಾಳಮೋಕ್ಷಕ್ಕೆ ಡಿಕೆಶಿ ಸ್ಪಷ್ಟನೆ

- Advertisement -
- Advertisement -

ಮಂಡ್ಯದ ಎಂ.ಕೆ. ದೊಡ್ಡಿಯಲ್ಲಿ ಕಾರ್ಯಕರ್ತರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಪಾಳಮೋಕ್ಷ ಮಾಡಿರುವ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಘಟನೆಗೆ ಸಂಬಂಧಿಸಿದಂತೆ ಹೊಡೆತ ತಿಂದ ಕಾರ್ಯಕರ್ತ ಕೂಡ ಸ್ಪಷ್ಟನೆ ನೀಡಿದ್ದು ಡಿ.ಕೆ.ಶಿವಕುಮಾರ್‌ ಮೇಲೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ.

ಈ ವಿಡಿಯೋ ಬಳಸಿಕೊಂಡು ಬಿಜೆಪಿ ಡಿ.ಕೆ. ಶಿವಕುಮಾರ್‌ ಅವರನ್ನು ಭೂಗತ ಜಗತ್ತಿನ ಪಾತಕಿ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆದಿತ್ತು.

ಶಿವಕುಮಾರ್‌ ಇಂದು ಘಟನೆ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

’ಆತ ನಮ್ಮ ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದಿದ್ದೇನೆ. ನನ್ನ ದೂರದ ಸಂಬಂಧಿ ಅವರು. ತಪ್ಪು ಮಾಡಿದಾಗ ನಾವು ಬಯ್ಯುತ್ತೇವೆ. ಅದು ನಮ್ಮ ನಡುವಿನ ಪ್ರೀತಿಯ ಸಂಬಂಧ’ ಎಂದು ಶನಿವಾರದ ಘಟನೆಗೆ   ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

’ನಾನು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೆ. ಜಲ ಸಂಪನ್ಮೂಲ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಅಗ ಯಾರೂ ಕೆಆರ್‌ಎಸ್‌ ವಿಷಯವನ್ನಾಗಲಿ, ಅಕ್ರಮ ಗಣಿಗಾರಿಕೆ ವಿಚಾರವನ್ನಾಗಿ ನನ್ನ ಮುಂದೆ ಪ್ರಸ್ತಾಪಿಸಿರಲಿಲ್ಲ. ಈಗ ಪ್ರಚಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ’, ಎಂದು ಪರೋಕ್ಷವಾಗಿ ಮಂಡ್ಯದ ಗಣಿ ರಾಜಕೀಯದಲ್ಲಿ ತೊಡಗಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಣಿಗಾರಿಕೆ ನೋಡಿಕೊಳ್ಲಲು ಗಣಿ ಸಚಿವಾಲಯ, ಭು ವಿಜ್ಞಾನ ಇಲಾಖೆ, ಇಂಜಿನೀಯರ್‌ಗಳು ಮತ್ತು ವಿಜ್ಞಾನಿಗಳು ಇದ್ದಾರೆ. ನಾವು ರಾಜಕಾರಣಿಗಳು ಕೆಆರ್‌ಎಸ್‌ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

’ಜಾತಿ ಗಣತಿ ವರದಿ ತಯಾರಿಕೆಗೆ ಕೋಟ್ಯಾಂತರ ರೂಪಾಯಿ ಹಣ ಖರ್ಚಾಗಿದೆ. ಅದನ್ನು ವ್ಯರ್ಥಗೊಳಿಸಲು ಬಿಡುವುದಿಲ್ಲ. ಹಿಂದುಳಿದ ವರ್ಗದ ಮುಖಂಡರು ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯವರ ನಿಲುವು ಏನಿದೆ ಎಂಬುದನ್ನು ತಿಳಿದು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ’ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ರೌಡಿ ಡಿಕೆಶಿ’ ಎಂದ ಬಿಜೆಪಿ; ಬಿಜೆಪಿ ಹುಟ್ಟಿದ್ದೆ ಕೊಲೆ, ಗಲಭೆಗಳಿಂದ ಎಂದು ಕಾಂಗ್ರೆಸ್ ತಿರುಗೇಟು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...