Homeಮುಖಪುಟಕುಶಾಲನಗರ: ಕೇಸರಿ ಶಾಲು ಹಾಕುವಂತೆ ಒತ್ತಾಯಿಸಿದ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಕುಶಾಲನಗರ: ಕೇಸರಿ ಶಾಲು ಹಾಕುವಂತೆ ಒತ್ತಾಯಿಸಿದ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

- Advertisement -
- Advertisement -

ಕೇಸರಿ ಶಾಲು ಧರಿಸುವಂತೆ ಒತ್ತಾಯಿಸಿದ ಕುಶಾಲನಗರದ ಸುಂದರನಗರ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಚಾಕುವಿನಿಂದ ಇರಿದ ಘಟನೆ ಮಂಗಳವಾರ ನಡೆದಿದೆ.

ಸುಂದರನಗರ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ (20) ಎಂಬುವವರು ಕೇಸರಿ ಶಾಲು ಧರಿಸಿ ಪ್ರತಿಭಟಿಸಲು ಮುಂದಾಗಿದ್ದನು. ಆತ ಎಲ್ಲರಿಗೂ ಕೇಸರಿ ಶಾಲು ಹಂಚುವಾಗ ತನಗೆ ಮತ್ತು ತನ್ನ ಸ್ನೇಹಿತೆಗೆ ಶಾಲು ಬೇಡ ಎಂದು ವಿಕ್ರಂ ಎಂಬ ವಿದ್ಯಾರ್ಥಿ ವಿರೋಧಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ. ಕೊನೆಗೆ ಅದು ವಿಕ್ರಂ ಸಂದೀಪನಿಗೆ ಚಾಕು ಹಾಕುವ ಮಟ್ಟಿಗೆ ಬೆಳೆದಿದೆ.

ಸಂದೀಪನ ಬೆನ್ನು ಹಾಗೂ ಭುಜಕ್ಕೆ ಚಾಕು ಇರಿತ ಉಂಟಾಗಿದೆ. ಆತನ ಸ್ನೇಹಿತರ ಮೇಲೂ ಹಲ್ಲೆ ನಡೆಸಲಾಗಿದೆ. ಸದ್ಯಕ್ಕೆ ಅವರು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಾಕು ಹಾಕಿ ಪರಾರಿಯಾಗಿದ್ದ ವಿಕ್ರಂ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸ್ನೇಹಿತೆಗೆ ಬಲವಂತವಾಗಿ ಕೇಸರಿ ಶಾಲು ಹಾಕಲು ಬಂದರು. ಹಾಗಾಗಿ ಜಗಳ ನಡೆದಿದೆ ಎಂದು ವಿಕ್ರಂ ಪೊಲೀಸರಿಗೆ ತಿಳಿಸಿದ್ದಾನೆ.

 

ಎರಡೂ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಸಂದೀಪರವರ ಹೆಗಲಿಗೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ವಿಕ್ರಂ ಅವರ ತಲೆ ಹಾಗೂ ಕೈಗೆ ಪೆಟ್ಟಾಗಿದ್ದು, ಸಂದೀಪ ಹಾಗೂ ವಿಕ್ರಂ ಇಬ್ಬರೂ ಚಿಕಿತ್ಸೆ ಪಡೆದಿದ್ದಾರೆ. ನನ್ನ ಮಗನನ್ನು ಓದಲು ಕಾಲೇಜಿಗೆ ಕಳಿಸಿದರೆ ಈ ರೀತಿ ಶಾಲು ಅಂತ ಗಲಾಟೆ ಮಾಡಿಕೊಂಡಿದ್ದಾನೆ. ಕೆಲವರು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂದೀಪನ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಸಿ.ಜಯಪ್ರಕಾಶ್, “ಕಾಲೇಜು ವಿದ್ಯಾರ್ಥಿಗಳನ್ನು ಕೆಲವರು ರಾಜಕೀಯವಾಗಿ ಬಳಸಿಕೊಂಡು ಈ ರೀತಿ ಬಲಿಪಶುವನ್ನಾಗಿ ಮಾಡುತ್ತಿದ್ದಾರೆ. ಕೆಲವೇ ಕೆಲವರ ರಾಜಕೀಯ ದುರುದ್ದೇಶಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇನ್ನು ಮುಂದೆ ಯಾರೂ ಕೂಡಾ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇದಕ್ಕೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಕರ್ನಾಟಕವನ್ನು ಯುಪಿ ಮಾಡುವ ಕುಟಿಲ ತಂತ್ರವನ್ನು ವಿಫಲಗೊಳಿಸಿ: ಟಿ.ಎ ನಾರಾಯಣಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನೆಮ್ಮದಿಯಿಂದ ಇದ್ದ ಶಾಲಾ ಕಾಲೇಜು ವಾತಾವರಣವನ್ನ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಬೇಳೆ‌ಬೇಯಿಸಿಕೊಳ್ಳುತ್ತಿದ್ದಾರೆ… ಇಲ್ಲಿ ಸಾಹಿತಿಗಳು. ಪ್ರಜ್ನಾವಂತ ನಾಗರೀಕರು ವಿಧ್ಯಾರ್ಥಿಗಳಿಗೆ ಬುದ್ದಿ ಹೇಳಬೇಕು…. ಮಕ್ಕಳ ಭಾವನೆಗಳೊಂದಿಗೆ ಆಟವಾಡಬೇಡಿ…

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...