Homeಮುಖಪುಟಹಿಮಾಚಲ ಪ್ರದೇಶ: ಸರ್ಕಾರ ಅಸ್ಥಿರಗೊಳಿಸಲು ಮುಂದುವರಿದ ಬಿಜೆಪಿ ಪ್ರಯತ್ನ; ಮೂವರು ಸ್ವತಂತ್ರ ಶಾಸಕರಿಂದ ರಾಜೀನಾಮೆ

ಹಿಮಾಚಲ ಪ್ರದೇಶ: ಸರ್ಕಾರ ಅಸ್ಥಿರಗೊಳಿಸಲು ಮುಂದುವರಿದ ಬಿಜೆಪಿ ಪ್ರಯತ್ನ; ಮೂವರು ಸ್ವತಂತ್ರ ಶಾಸಕರಿಂದ ರಾಜೀನಾಮೆ

- Advertisement -
- Advertisement -

ಹಿಮಾಚಲ ಪ್ರದೇಶ ರಾಜಕೀಯ ಬೆಳವಣಿಗೆಗಳ ನಾಟಕೀಯ ತಿರುವಿನಲ್ಲಿ, ಫೆಬ್ರವರಿ 27ರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಹರ್ಷ್ ಮಹಾಜನ್ ಅವರಿಗೆ ಮತ ಹಾಕಿದ್ದ ಮೂವರು ಸ್ವತಂತ್ರ ಶಾಸಕರು, ಆರು ಜನ ಅನರ್ಹ ಕಾಂಗ್ರೆಸ್ ಶಾಸಕರೊಂದಿಗೆ ಒಂದು ವಾರಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಇದೀಗ ಮೂವರು ಸ್ವತಂತ್ರ ಶಾಸಕರು ಶುಕ್ರವಾರ ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡೆಹ್ರಾದಿಂದ ಹೋಶಿಯಾರ್ ಸಿಂಗ್, ಹಮೀರ್‌ಪುರದಿಂದ ಆಶಿಶ್ ಶರ್ಮಾ ಮತ್ತು ನಲಗಢದಿಂದ ಕೆಎಲ್ ಠಾಕೂರ್ ಎಂಬ ಮೂವರು ಶಾಸಕರು ಶಿಮ್ಲಾದಲ್ಲಿ ವಿಧಾನಸಭಾ ಕಾರ್ಯದರ್ಶಿ ಯಶಪಾಲ್ ಶರ್ಮಾ ಅವರಿಗೆ ರಾಜೀನಾಮೆ ಸಲ್ಲಿಸಿದರು.

ನಾವು ಮೂವರೂ ಬಿಜೆಪಿ ಸೇರುತ್ತಿದ್ದೇವೆ; ನಾವು ಈ ಹಿಂದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆವು. ಆದರೆ, ಅವರಿರಿಂದ ನಮಗೆ ಗೌರವ ಸಿಗಲಿಲ್ಲ. ಅಲ್ಲದೆ, ನಮ್ಮ ಕ್ಷೇತ್ರಗಳಲ್ಲಿ ದಿನನಿತ್ಯದ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಹಾಗಾಗಿ, ಬಿಜೆಪಿಗೆ ಸೇರುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ ಎಂದು ಡೆಹ್ರಾದಿಂದ ಎರಡನೇ ಬಾರಿಗೆ ಶಾಸಕರಾಗಿರುವ ಹೋಶಿಯಾರ್ ಸಿಂಗ್ ಹೇಳಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ರಾಜೇಶ್ ಶರ್ಮಾ ಅವರನ್ನು 4,024 ಮತಗಳಿಂದ ಸೋಲಿಸಿದ್ದರು. ಹೋಶಿಯಾರ್ ಸಿಂಗ್ ಅವರು ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿ ಸೇರಿದಾಗ ಈಗಾಗಲೇ ಸ್ವತಂತ್ರ ಶಾಸಕರಾಗಿದ್ದರು. ಆದರೆ, ಪಕ್ಷದ ಟಿಕೆಟ್ ನಿರಾಕರಿಸಲಾಯಿತು.

“ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ; ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಎಲ್ಲರನ್ನೂ ಗುರಿಯಾಗಿಸಿಕೊಂಡಿದೆ. ನಾವು ನಮ್ಮ ಆತ್ಮಸಾಕ್ಷಿಯನ್ನು ಅನುಸರಿಸಿದ್ದೇವೆ, ಹೊರಗಿನ ಅಭ್ಯರ್ಥಿಗೆ (ಅಭಿಷೇಕ್ ಮನು ಸಿಂಘ್ವಿ) ಮತ ಹಾಕಲು ಅದು ನಮಗೆ ಅವಕಾಶ ನೀಡಲಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ” ರಾಜೀನಾಮೆ ನೀಡಿದ ಶಾಸಕ ಠಾಕೂರ್ ಹೇಳಿದ್ದಾರೆ.

2012ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ನಲಗಢ ಕ್ಷೇತ್ರವನ್ನು ಗೆದ್ದಿದ್ದ ಠಾಕೂರ್, “ನಾನು ಬಿಜೆಪಿ ಸಿದ್ಧಾಂತದಿಂದ ಬಂದವನು” ಎಂದು ಹೇಳಿದರು. ಎರಡು ಬಾರಿ ಶಾಸಕರಾಗಿದ್ದ ಲಖ್ವಿಂದರ್ ರಾಣಾ ಅವರಿಗೆ ಬಿಜೆಪಿ ಆದ್ಯತೆ ನೀಡಿದ್ದರಿಂದ 2017 ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಯಿತು, ಅವರು ಚುನಾವಣೆಗೆ ಕೆಲವು ದಿನಗಳ ಮೊದಲು ಕೇಸರಿ ಪಕ್ಷಕ್ಕೆ ಬದಲಾಗಿದ್ದರು.

ಆಶಿಶ್ ಶರ್ಮಾ ಅವರನ್ನು ಸಂಪರ್ಕಿಸಿದಾಗ, ಹಮೀರ್‌ಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರನ್ನು ಹಲವಾರು ಸಂದರ್ಭಗಳಲ್ಲಿ ಸಂಪರ್ಕಿಸಿದ್ದು ವ್ಯರ್ಥವಾಯಿತು. ನಾನು ಮುಖ್ಯಮಂತ್ರಿಯನ್ನು ಭೇಟಿಯಾದಾಗಲೆಲ್ಲಾ ಕೇವಲ ಭರವಸೆಯೊಂದಿಗೆ ಹಿಂದಿರುಗಿದೆ. ಅಧಿಕಾರಿಗಳ ಹಸ್ತಕ್ಷೇಪವು ವಿಷಯಗಳನ್ನು ಮತ್ತಷ್ಟು ಕಷ್ಟಕರವಾಗಿಸಿದೆ” ಎಂದು ಅವರು ಹೇಳಿದರು.

ಮೂವರು ಸ್ವತಂತ್ರ ಶಾಸಕರು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರನ್ನು ಭೇಟಿ ಮಾಡಿದರು. ರಾಜಭವನದಲ್ಲಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿ ಮಾಡಿದರು. ನಂತರ ಮೂವರು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರನ್ನು ಭೇಟಿಯಾದರು.

ಅವರನ್ನು ಸಂಪರ್ಕಿಸಿದಾಗ, ಮುಖ್ಯಮಂತ್ರಿ ಸುಖು ರಾಜೀನಾಮೆಗಳ ಬಗ್ಗೆ ಅಜ್ಞಾನವನ್ನು ತೋರಿಸಿದರು. ಬಹುಶಃ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೆ ಎಂದು ಅವರು ಹೇಳಿದರು.

ಕಟ್ ಮೋಷನ್ ಮತ್ತು ಬಜೆಟ್ ಸಮಯದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸಲು ಪಕ್ಷದ ವಿಪ್ ಅನ್ನು ಧಿಕ್ಕರಿಸಿದ ಆರು ಕಾಂಗ್ರೆಸ್ ಸದಸ್ಯರನ್ನು ಸದನದಿಂದ ಅನರ್ಹಗೊಳಿಸಲಾಗಿದೆ. ಮೂವರು ಸ್ವತಂತ್ರ ಶಾಸಕರು ರಾಜೀನಾಮೆ ನೀಡಿದ್ದರಿಂದ 68 ಸದಸ್ಯರ ಸದನದಲ್ಲಿ ಶಾಸಕರ ಬಲ ಇದೀಗ 59ಕ್ಕೆ ಕುಸಿದಿದೆ. ಈಗ ಸ್ಪೀಕರ್ ಸೇರಿದಂತೆ ಕಾಂಗ್ರೆಸ್ 34 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 25 ಶಾಸಕರನ್ನು ಹೊಂದಿದೆ.

ಇದನ್ನೂ ಓದಿ; ಸಿಎಂ ಹುದ್ದೆಯಿಂದ ಕೇಜ್ರಿವಾಲ್ ವಜಾಗೊಳಿಸುವಂತೆ ಅರ್ಜಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read