Homeಮುಖಪುಟಸೂಫಿ ಸಂತರಿಗೆ ಮರುನಾಮಕರಣ ಮಾಡಿದ ಸಂಘಪರಿವಾರ: ಮುಸ್ಲಿಮರಿಂದ ಉಪವಾಸ ಸತ್ಯಾಗ್ರಹ

ಸೂಫಿ ಸಂತರಿಗೆ ಮರುನಾಮಕರಣ ಮಾಡಿದ ಸಂಘಪರಿವಾರ: ಮುಸ್ಲಿಮರಿಂದ ಉಪವಾಸ ಸತ್ಯಾಗ್ರಹ

- Advertisement -
- Advertisement -

ಸೂಫಿ ಸಂತಪೀರ್ ಇಮಾಮ್ ಶಾ ಬಾವ ಅವರಿಗೆ ಸದ್ಗುರು ಹಂಸತೇಜಿ ಮಹಾರಾಜ್ ಎಂದು ಮರು ನಾಮಕರಣ ಮಾಡಿದ್ದು, ಐನೂರು ವರ್ಷಗಳ ಹಿಂದೆ ಮೃತರಾದ ಸೂಫಿ ಸಂತರ ಹೆಸರಿನಲ್ಲಿ ಅಹ್ಮದಾಬಾದ್ ನಲ್ಲಿ ಇದೀಗ ವಿವಾದವನ್ನು ಸಂಘಪರಿವಾರ ಹುಟ್ಟುಹಾಕಿದೆ.

ಸೈಯ್ಯದ್ ಸಮುದಾಯದ ಪೀರ್ ವಂಶಸ್ಥರು,  ಸಾಮರಸ್ಯದ ಸಂಕೇತವಾಗಿದ್ದ ಸೂಫಿ ಸಂತಪೀರ್  ಇಮಾಮ್ ಶಾ ಬಾವ ಅವರ ಹೆಸರನ್ನು ಮರುನಾಮಕರಣ ಮಾಡುವುದಕ್ಕೆ ತೀವ್ರವಾಗಿ ವಿರೋಧಿಸಿದ್ದಾರೆ. ಇದು ಕೇಸರೀಕರಣದ ಇನ್ನೊಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ಸಂತರ ಹೆಸರನ್ನು ಮರುನಾಮಕರಣವನ್ನು ವಿರೋಧಿಸಿ  ದರ್ಗಾದ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇಮಾಮ್‌ಶಾ ಬಾವ ರೋಜಾ ಸಂಸ್ಥಾನದ ಮೂವರು ಮುಸ್ಲಿಮ್ ಟ್ರಸ್ಟಿಗಳು ಈ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮತ್ತು ಅನಿರ್ದಿಷ್ಟಾವಧಿವರೆಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಉಪವಾಸಿಗರಿಗೆ ಭದ್ರತೆಯನ್ನು ಕೊಡುವಂತೆ ಪೊಲೀಸರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಸಾಮರಸ್ಯದ ಸಂಕೇತವಾಗಿದ್ದ ಇಮಾಮ್‌ ಶಾ ಬಾವ ರೋಜಾ ಅವರ ಹೆಸರನ್ನು ಬದಲಿಸಿ ದರ್ಗಾವನ್ನು ಹಿಂದೂ ಆರಾಧನಾ ಕೇಂದ್ರವಾಗಿ ಬದಲಿಸಲಾಗುತ್ತಿದೆ ಎಂದು ಇಮಾಮ್‌ ಶಾ ಬಾವ ರೋಜಾ ಸಂಸ್ಥಾನದ ಟ್ರಸ್ಟಿಗಳು ಆರೋಪಿಸಿದ್ದಾರೆ.

ಕಳೆದ ವರ್ಷ ಸುನ್ನಿ ಅವಾಮಿ ಫಾರಂ ದರ್ಗಾದ ಆವರಣದಲ್ಲಿ ದೇವಾಲಯ  ನಿರ್ಮಾಣ ವಿರೋಧಿಸಿ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನು ಓದಿ: ಬಲಪಂಥೀಯ ಸಂಘಟನೆಯಿಂದ ಜೀವಬೆದರಿಕೆ: ವಿಚಾರವಾದಿಗಳಿಗೆ ರಕ್ಷಣೆ ಒದಗಿಸಲು ಮುಂದಾದ ರಾಜ್ಯ ಸರ್ಕಾರ

 

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...