Homeಮುಖಪುಟದೆಹಲಿ: 'ಜೈ ಶ್ರೀರಾಮ್' ಘೋಷಣೆ ಕೂಗುತ್ತಾ ಚರ್ಚ್ ಗೆ ನುಗ್ಗಿ ದಾಂಧಲೆ

ದೆಹಲಿ: ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ಚರ್ಚ್ ಗೆ ನುಗ್ಗಿ ದಾಂಧಲೆ

- Advertisement -
- Advertisement -

ಗುಂಪೊಂದು ಚರ್ಚ್‌ಗೆ ನುಗ್ಗಿ ‘ಜೈ ಶ್ರೀ ರಾಮ್’  ಘೋಷಣೆ ಕೂಗುತ್ತಾ ಚರ್ಚ್‌ನಲ್ಲಿ ದಾಂಧಲೆ ನಡೆಸಿ  ಕ್ರಿಶ್ಚಿಯನ್ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯ ತಾಹಿರ್‌ಪುರದಲ್ಲಿ ನಡೆದ ಬಗ್ಗೆ  scroll.in ವರದಿ ಮಾಡಿದೆ.

ಭಾನುವಾರ  ಪ್ರಾರ್ಥನಾ ಸಭೆಯ ವೇಳೆ ಬೆಳಗ್ಗೆ 10.40ರ ಸುಮಾರಿಗೆ ದಾಳಿ ನಡೆದಿದೆ ಎಂದು ಪಾದ್ರಿ ಸತ್ಪಾಲ್ ಭಾಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸುಮಾರು 20 ಜನರ ಗುಂಪು “ಜೈ ಶ್ರೀ ರಾಮ್”  ಮತ್ತು ಭಾರತವನ್ನು” ಹಿಂದೂ ರಾಷ್ಟ್ರವೆಂದು”  ಘೋಷಣೆ ಕೂಗುತ್ತಾ  ಚರ್ಚ್‌ನ್ನು  ಪ್ರವೇಶಿಸಿದ್ದು, ಮಹಿಳೆಯರು ಸೇರಿದಂತೆ ಅಲ್ಲಿದ್ದ ಕ್ರಿಶ್ಚಿಯನ್ ಸಮುದಾಯದ  ಸದಸ್ಯರ ಮೇಲೆ  ಹಲ್ಲೆ ಮಾಡಿದ್ದಾರೆ.

ಪೊಲೀಸರು ದಾಖಲಿಸಿದ ಎಫ್ ಐಆರ್ ಪ್ರಕಾರ, ಗುಂಪು ಘೋಷಣೆಗಳನ್ನು ಕೂಗುತ್ತಾ ಚರ್ಚ್‌ಗೆ ನುಗ್ಗಿ ಯೇಸುವಿನ ಚಿತ್ರಗಳನ್ನು ಧ್ವಂಸಗೊಳಿಸಿದೆ ಮತ್ತು ಬೈಬಲ್‌ನ್ನು ಹರಿದು ಹಾಕಲು ಪ್ರಯತ್ನಿಸಿದೆ. ಇದಲ್ಲದೆ  ಅಲ್ಲಿ ಪಾರ್ಥನೆಗೆ ಬಂದಿದ್ದ ಕೆಲವರನ್ನು ಹೊರಗೆ ಎಳೆದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಡೆಮಾಕ್ರಸಿ ನ್ಯೂಸ್ ಇಂಡಿಯಾ ಹಂಚಿಕೊಂಡಿರುವ ವೀಡಿಯೊದಲ್ಲಿ ಸಂಗೀತ ವಾದ್ಯಗಳನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ತೋರಿಸುತ್ತದೆ. ಚಾಕು ಬಳಸಿ ಡ್ರಮ್‌ಗಳನ್ನು ಹರಿದಿದ್ದಾರೆ ಎಂದು ಕ್ರೈಸ್ತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.

ಈ ಕುರಿತು ಸೂಕ್ತ ತನಿಖೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ .ಇಲ್ಲದಿದ್ದರೆ ಇನ್ನು ಮುಂದೆ ಕೂಡ ಇದೇ ರೀತಿಯ ಕೃತ್ಯ ನಡೆಯುವ ಸಾಧ್ಯತೆ ಇದೆ .ಕೃತ್ಯವನ್ನು ಬಜರಂಗದಳ ಮತ್ತು ಆರೆಸ್ಸೆಸ್ ನವರು ನಡೆಸಿದ್ದಾರೆ ಎಂದು ಚರ್ಚ್‌ನ ಪಾದ್ರಿ ಆರೋಪಿಸಿದ್ದಾರೆ.

ದಾಳಿಯ ಬಗ್ಗೆ ದೂರು ನೀಡಲು ಜಿಟಿಬಿ ಎನ್‌ಕ್ಲೇವ್ ಪೊಲೀಸ್ ಠಾಣೆಗೆ ನಾನು ಮತ್ತು ಇತರ ಕೆಲವರು ಹೋದಾಗ, ಭಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಸುಮಾರು 100 ಜನರ  ಗುಂಪು ಠಾಣೆಯ ಹೊರಗೆ ಜಮಾಯಿಸಿ  ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂದು ಪಾದ್ರಿ ಸತ್ಪಾಲ್ ಭಾಟಿ ಆರೋಪಿಸಿದ್ದಾರೆ.

ಇದನ್ನು ಓದಿ: ಇಸ್ರೋ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಇಬ್ಬರು ಅಭ್ಯರ್ಥಿಗಳು ಅರೆಸ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...