Homeಮುಖಪುಟನೇಹಾ ಹತ್ಯೆ ಖಂಡಿಸಿ ಬೀದಿಗಿಳಿದ ಹುಬ್ಬಳ್ಳಿ ಮುಸ್ಲಿಮರು; ಅಂಗಡಿ ಮುಚ್ಚಿ ಪ್ರತಿಭಟನೆ

ನೇಹಾ ಹತ್ಯೆ ಖಂಡಿಸಿ ಬೀದಿಗಿಳಿದ ಹುಬ್ಬಳ್ಳಿ ಮುಸ್ಲಿಮರು; ಅಂಗಡಿ ಮುಚ್ಚಿ ಪ್ರತಿಭಟನೆ

- Advertisement -
- Advertisement -

ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ತಮ್ಮದೇ ಸಮುದಾಯದ ಆರೋಪಿ ಫಯಾಜ್ ಖೊಂಡುನಾಯಕ್ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತಿಭಟನೆ ನಡೆಸಿದರು. ಆ ಮೂಲಕ, ಸಂತ್ರಸ್ತ ಹಿಂದೂ ಕುಟುಂಬದ ಪರವಾಗಿ ನಾವಿದ್ದೇವೆ ಎಂದು ಸಾರ್ವಜನಿಕವಾಗಿ ಸಂದೇಶ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಬೆಚ್ಚಿಬೀಳಿಸಿದ ಹೀನ ಕೃತ್ಯವನ್ನು ಖಂಡಿಸಿ ಹಿರೇಮಠ ಅವರ ಕುಟುಂಬಕ್ಕೆ ಒಗ್ಗಟ್ಟಿನಿಂದ ಮುಸ್ಲಿಂ ಒಡೆತನದ ಅಂಗಡಿಗಳನ್ನು ಅರ್ಧ ದಿನ ಮುಚ್ಚಲಾಯಿತು. ‘ನೇಹಾ ಹಿರೇಮಠ್‌ಗೆ ನ್ಯಾಯ ಕೊಡಿ’ ಎಂದು ಅಂಗಡಿ ಮಾಲೀಕರು ಪೋಸ್ಟರ್‌ ಅಂಟಿಸಿದ್ದರು.

ಅಂಜುಮನ್-ಎ-ಇಸ್ಲಾಂನ ಧಾರವಾಡ ಘಟಕದ ಬ್ಯಾನರ್ ಅಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರು ನಗರದಲ್ಲಿ “ಹೆಣ್ಣು ವಿದ್ಯಾರ್ಥಿಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು” ಎಂಬ ಬರಹ ಹಾಗೂ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ನೇಹಾ ಹತ್ಯೆ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಯ ಭಾಗವಾಗಿ ಬಿಜೆಪಿ ನಗರದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವುದರಿಂದ, ಮೀಸಲು ಪೊಲೀಸ್ ಪಡೆಗಳ ನಿಯೋಜನೆಯೊಂದಿಗೆ, ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ (23) ಅವರನ್ನು ಗುರುವಾರ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ಖೋಂಡುನಾಯ್ಕ್ ಎಂಬುವರು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಫಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ನೇಹಾ ಮೊದಲ ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ವಿದ್ಯಾರ್ಥಿನಿ ಮತ್ತು ಫಯಾಜ್ ಮೊದಲು ಆಕೆಯ ಸಹಪಾಠಿಯಾಗಿದ್ದನು. ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದ ಕೊಲೆ ಪ್ರಕರಣವು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ಜಗಳಕ್ಕೆ ಕಾರಣವಾಗಿದೆ.

ಆಡಳಿತ ಪಕ್ಷವು ಇದನ್ನು ವೈಯಕ್ತಿಕ ಕೋನದಿಂದ ಘಟನೆ ಎಂದು ಹೇಳಿದರೆ, ಬಿಜೆಪಿಯು ಇದನ್ನು “ಲವ್ ಜಿಹಾದ್” ಪ್ರಕರಣ ಎಂದು ಹೆಸರಿಸಿದೆ.

ಇದನ್ನೂ ಓದಿ; ದ್ವೇಷ ಭಾಷಣ: ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...