Homeಮುಖಪುಟಹೈದರಾಬಾದ್: ಅಸ್ಸಾಂ ಸಿಎಂ ಇದ್ದ ವೇದಿಕೆಗೆ ನುಗ್ಗಿ ಮೈಕ್‌ ಕಿತ್ತ ಅಪರಿಚಿತ ವ್ಯಕ್ತಿ

ಹೈದರಾಬಾದ್: ಅಸ್ಸಾಂ ಸಿಎಂ ಇದ್ದ ವೇದಿಕೆಗೆ ನುಗ್ಗಿ ಮೈಕ್‌ ಕಿತ್ತ ಅಪರಿಚಿತ ವ್ಯಕ್ತಿ

- Advertisement -
- Advertisement -

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರದಂದು ಹೈದರಾಬಾದ್‌ನಲ್ಲಿ ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯೊಂದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದು, ಭದ್ರತಾ ವೈಫಲ್ಯ ಘಟನೆ ನಡೆದಿದೆ. ವ್ಯಕ್ತಿಯನ್ನು ವೇದಿಕೆಯಲ್ಲಿ ಇದ್ದವರು ಅವರನ್ನು ಕೆಳಗೆ ಎಳೆದುಕೊಂಡು ಹೋಗಿದ್ದು, ಪೊಲೀಸರ ವಶಕ್ಕೆ ನೀಡಿದ್ದಾರೆ.

ಮುಖ್ಯಮಂತ್ರಿಯಿದ್ದ ವೇದಿಕೆಯ ಮೇಲೆ ಬಿಜೆಪಿಯ ನಾಯಕರೊಬ್ಬರು ಮೈಕ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ನುಗ್ಗಿದ ವ್ಯಕ್ತಿ, ಅವರಿಂದ ಮೈಕ್‌ ಅನ್ನು ಕಿತ್ತು ಮಾತನಾಡದಂತೆ ತಡೆದಿದ್ದಾರೆ. ನಂತರ ಮುಖ್ಯಮಂತ್ರಿಯತ್ತ ತಿರುಗಿ ಅವರೊಂದಿಗೆ ಮಾತಿಗೆ ಇಳಿಯುತ್ತಾರೆ. ಈ ವೇಳೆ ವೇದಿಕೆಯಲ್ಲಿ ಇದ್ದವರು ಅವರನ್ನು ಕೆಳಗೆ ಕರೆದುಕೊಂಡು ಹೋಗುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಪರಿಚಿತ ವ್ಯಕ್ತಿಯು ತೆಲಂಗಾಣದ ಆಡಳಿತರೂಢ ಪಕ್ಷವಾದ ಟಿಆರ್‌ಎಸ್‌‌ ಪಕ್ಷವನ್ನು ಪ್ರತಿನಿಧಿಸುವ ಶಾಲನ್ನು ಕತ್ತಿಗೆ ಧರಿಸಿಕೊಂಡಿದ್ದರು. ಅಸ್ಸಾಂ ಮುಖ್ಯಮಂತ್ರಿ ಗಣೇಶ ಹಬ್ಬ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಭಾಗವಹಿಸಲು ಹೈದರಾಬಾದ್‌ ಆಗಮಿಸಿದ್ದರು.

ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ, ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಬಿಹಾರಕ್ಕೆ ಭೇಟಿ ನೀಡಿದ ತೆಲಂಗಾಣ ಸಿಎಂ ಕೆಸಿಆರ್‌‌: ‘ಬಿಜೆಪಿ ಮುಕ್ತ ಭಾರತ’ಕ್ಕೆ ಕರೆ

“ಮುಖ್ಯಮಂತ್ರಿ ಕೆಸಿಆರ್ ಅವರು ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಕುಟುಂಬ ರಾಜಕಾರಣ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತೇವೆ. ಹೈದರಾಬಾದ್‌ನಲ್ಲಿ ಇನ್ನೂ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತಿದ್ದೇವೆ. ದೇಶದ ರಾಜಕೀಯವು ಕುಟುಂಬ ರಾಜಕಾರಣದಿಂದ ಮುಕ್ತವಾಗಿರಬೇಕು” ಎಂದು ಹಿಮಂತ ಶರ್ಮಾ ಹೇಳಿದ್ದಾರೆ.

ಬಿಜೆಪಿ ಮತ್ತು ಟಿಆರ್‌ಎಸ್‌ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಮತ್ತು 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿವೆ. ಎರಡೂ ಪಕ್ಷಗಳು ಇತ್ತೀಚಿನ ತಿಂಗಳುಗಳಲ್ಲಿ ಪರಸ್ಪರ ದಾಳಿಗಳನ್ನು ಹೆಚ್ಚಿಸುತ್ತಿವೆ.

ಇದನ್ನೂ ಓದಿ: ತೆಲಂಗಾಣ: ಪ್ರವಾದಿ ಮುಹಮ್ಮದ್‌ರನ್ನು ನಿಂದಿಸಿದ್ದ ಶಾಸಕನನ್ನು ಅಮಾನತು ಮಾಡಿದ ಬಿಜೆಪಿ

ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಮತ್ತು ಸಾರ್ವತ್ರಿಕ ಚುನಾವಣೆಗೆ ಐಕ್ಯರಂಗವನ್ನು ರೂಪಿಸಲು  ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರು ಪ್ರಯತ್ನಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...