Homeಮುಖಪುಟ‘ನನ್ನೊಂದಿಗೆ ಸಹೋದರಿ ಇದ್ದಾಳೆ’: 2022ರ ಯುಪಿ ಚುನಾವಣೆಗೆ ಫಿಲ್ಮ್‌ ಡೈಲಾಗ್‌ ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ

‘ನನ್ನೊಂದಿಗೆ ಸಹೋದರಿ ಇದ್ದಾಳೆ’: 2022ರ ಯುಪಿ ಚುನಾವಣೆಗೆ ಫಿಲ್ಮ್‌ ಡೈಲಾಗ್‌ ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ

- Advertisement -
- Advertisement -

“ನನಗೆ ಸಹೋದರಿ ಇದ್ದಾಳೆ” (ಮೇರೆ ಪಾಸ್ ಬೆಹೆನ್ ಹೈ) ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರದಂದು ಬಾಲಿವುಡ್ ಚಲನಚಿತ್ರ ‘ದೀವಾರ್’ನ ಜನಪ್ರಿಯ ಡೈಲಾಗ್‌ ಒಂದನ್ನು ನೆನಪಿಸಿಕೊಂಡಿದ್ದಾರೆ.

‘‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಯಾವುದೇ ನೆಲೆಯಿಲ್ಲದ ಕಾರಣ ಕಾಂಗ್ರೆಸ್ ತನ್ನ ರ್‍ಯಾಲಿಗಳಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಿದೆ’’ ಎಂಬ ಪ್ರತಿಸ್ಪರ್ಧಿ ಪಕ್ಷಗಳ ಟೀಕೆಗಳಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕ ಗಾಂಧಿ ಈ ಮಾತನ್ನು ಹೇಳಿದ್ದಾರೆ. ಇದರ ವಿಡಿಯೊವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಇದನ್ನೂ ಓದಿ:ಯುಪಿ ಚುನಾವಣೆ-2022 | ಏಕಾಂಗಿಯಾಗಿ ಸ್ಪರ್ಧಿಸಲಿರುವ ಕಾಂಗ್ರೆಸ್: ಪ್ರಿಯಾಂಕ ಗಾಂಧಿ ಘೋಷಣೆ

ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಸಹೋದರರಾಗಿ ನಟಿಸಿದ ದೀವಾರ್ ಸಂಭಾಷಣೆಯನ್ನು ನೀವು ಕೇಳಿದ್ದೀರಾ ಎಂದು ಅವರು ತನ್ನನ್ನು ಸಂದರ್ಶಿಸುತ್ತಿದ್ದ ಪತ್ರಕರ್ತರನ್ನು ಉದ್ದೇಶಿಸಿ ಕೇಳಿದ್ದಾರೆ.

“ಅಮಿತಾಭ್, ಶಶಿ ಕಪೂರ್ ಅವರಿಗೆ, ‘ನನ್ನ ಬಳಿ ಕಾರು ಇದೆ, ನನ್ನ ಬಳಿ ಬಂಗಲೆ ಇದೆ ಅದು ಇದು, ಇದು ಇದೆ’ ಎಂದು ಹೇಳುವಾಗ, ಶಶಿ ಕಪೂರ್ ಹೇಳುತ್ತಾರೆ, ನನಗೆ ತಾಯಿ ಇದ್ದಾರೆ ಎಂದು. ಆದ್ದರಿಂದ ನಾನು ಹೇಳುತ್ತೇನೆ. ನನ್ನ ಬಳಿ ಸಹೋದರಿ ಇದ್ದಾಳೆ” ಎಂದು ಉತ್ತರ ಪ್ರದೇಶದ ಮಹಿಳೆಯರನ್ನು ಉಲ್ಲೇಖಿಸಿ ಹೇಳಿದ್ದಾರೆ.

ಈ ವಿಡಿಯೊ ಜೊತೆಗೆ , “ನನಗೆ ಸಹೋದರಿಯರಿದ್ದಾರೆ…ಸಹೋದರಿಯರು ರಾಜಕೀಯದಲ್ಲಿ ಬದಲಾವಣೆ ತರುತ್ತಾರೆ” ಎಂದು ಬರೆದಿರುವ ಅವರು “ಮಹಿಳೆ ನಾನು, ಹೋರಾಟ ಮಾಡಬಲ್ಲೆ” ಎಂಬ ಹ್ಯಾಶ್ ಟ್ಯಾಗ್‌‌ ಮಾಡಿದ್ದಾರೆ.

ಇದನ್ನೂ ಓದಿ:ಯುಪಿ ಚುನಾವಣೆ-2022: ಮಹಿಳೆಯರಿಗೆ ಮತ್ತೇ ಭರ್ಜರಿ ಭರವಸೆ ನೀಡಿದ ಪ್ರಿಯಾಂಕ ಗಾಂಧಿ

2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ 40% ಮೀಸಲಾತಿಯನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.

ಮಂಗಳವಾರ, ಪ್ರಯಾಗ್‌ರಾಜ್‌ನಲ್ಲಿ ಮಹಿಳಾ ಸಬಲೀಕರಣದ ಕುರಿತು ಪ್ರಧಾನ ಮಂತ್ರಿಯವರ ಕಾರ್ಯಕ್ರಮವು ಮಹಿಳೆಯರ ಮುಂದೆ ಮೋದಿ ಬಾಗಿದ್ದನ್ನು ತೋರಿಸುತ್ತದೆ. ಸಹೋದರಿಯರ ಒಗ್ಗಟ್ಟಿನಿಂದ ಕ್ರಾಂತಿ ಮಾಡುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಈ ಹಿಂದೆ ‘ಶಕ್ತಿ ವಿಧಾನ’ ಎಂಬ ಶೀರ್ಷಿಕೆಯ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮಹಿಳೆಯರಿಗಾಗಿಯೆ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ:ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಪದವಿ ವಿದ್ಯಾರ್ಥಿನಿಯರಿಗೆ ‘ಸ್ಕೂಟಿ’: ಪ್ರಿಯಾಂಕ ಗಾಂಧಿ ಮತ್ತೊಂದು ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...