Homeಮುಖಪುಟಐಪಿಎಲ್‌ನಲ್ಲಿ ಕೊನೆವರೆಗೂ ಆರ್‌ಸಿಬಿಯಲ್ಲೇ ಇರುವೆ: ಕೊಹ್ಲಿ

ಐಪಿಎಲ್‌ನಲ್ಲಿ ಕೊನೆವರೆಗೂ ಆರ್‌ಸಿಬಿಯಲ್ಲೇ ಇರುವೆ: ಕೊಹ್ಲಿ

ದುಬೈನಲ್ಲಿ ನಡೆಯುತ್ತಿರುವ 2021ರ ಐಪಿಎಲ್‌ ಟೂರ್ನಿ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವನ್ನು ತ್ಯಜಿಸುವುದಾಗಿ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

- Advertisement -
- Advertisement -

ದುಬೈನಲ್ಲಿ ನಡೆಯುತ್ತಿರುವ 2021ರ ಐಪಿಎಲ್‌ ಟೂರ್ನಿ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವನ್ನು ತ್ಯಜಿಸುವುದಾಗಿ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಟಿ-20 ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಹೇಳಿದ್ದ ಅವರು, ಆರ್‌ಸಿಬಿ ನಾಯಕತ್ವವನ್ನೂ ತ್ಯಜಿಸಲು ತೀರ್ಮಾನಿಸಿದ್ದು, “ಐಪಿಎಲ್‌ನಲ್ಲಿ ನಾನು ಇರುವವರೆಗೂ ಆರ್‌ಸಿಬಿಯೊಂದಿಗೆಯೇ ಇರುವೆ” ಎನ್ನುವ ಮೂಲಕ ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದಾರೆ.

“ನನ್ನ ನಂಬಿದ ಹಾಗೂ ನನ್ನದೊಂದಿಗೆ ಸದಾ ಇರುವ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡಿರುವೆ. ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಇದ್ದದ್ದನ್ನು ಹಂಚಿಕೊಂಡಿರುವೆ. ಒತ್ತಡವನ್ನು ನಿಭಾಯಿಸಲೆಂದು ಟಿ-20 ನಾಯಕತ್ವವನ್ನು ತ್ಯಜಿಸುವುದಾಗಿ ಇತ್ತೀಚೆಗೆ ಹೇಳಿದ್ದೆ. ಈವರೆಗೆ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಆರ್‌ಸಿಬಿ ತಂಡದ ರೀತಿ ಇನ್ಯಾವುದೂ ಇಲ್ಲವೆಂದೂ ಭಾವಿಸುತ್ತೇನೆ. ಹೀಗಾಗಿ ಆರ್‌ಸಿಬಿಯೊಂದಿಗೆ ಐಪಿಎಲ್‌ನಲ್ಲಿ ಇರುವವರೆಗೂ ಮುಂದುವರಿಯುತ್ತೇನೆ. ಈ ಒಂಬತ್ತು ವರ್ಷಗಳ ಪಯಣದಲ್ಲಿ ಸಹಿ-ಕಹಿ ಘಟನೆಗಳೆಲ್ಲವೂ ಇವೆ. ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’ ಎಂದು ಕೊಹ್ಲಿ ತಿಳಿಸಿದ್ದಾರೆ.


 ಇದನ್ನೂ ಓದಿ: ಟಿ-20 ನಾಯಕತ್ವ ತ್ಯಜಿಸಲು ವಿರಾಟ್‌ ಕೊಹ್ಲಿ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...