Homeಕರ್ನಾಟಕಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕವಿದ್ದಂತೆ: ಕ.ಸಾ.ಪ ಕವಿಗೋಷ್ಟಿಯಿಂದ ಹಿಂದೆ ಸರಿದ ಚಾಂದ್ ಪಾಷ

ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕವಿದ್ದಂತೆ: ಕ.ಸಾ.ಪ ಕವಿಗೋಷ್ಟಿಯಿಂದ ಹಿಂದೆ ಸರಿದ ಚಾಂದ್ ಪಾಷ

- Advertisement -
- Advertisement -

ಹಾವೇರಿಯಲ್ಲಿ ಜನವರಿ 6ರಿಂದ 8ರವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಕಡೆಗಣಿಸಿದ್ದನ್ನು ಖಂಡಿಸಿ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸುವುದಿಲ್ಲ ಎಂದು ಯುವ ಬರಹಗಾರ ಚಾಂದ್ ಪಾಷ ಘೋಷಿಸಿದ್ದಾರೆ.

ಮೂರನೇ ಕವಿಗೋಷ್ಟಿಯಲ್ಲಿ ಕವನ ವಾಚಿಸಲು ಚಾಂದ್ ಪಾಷ ಎನ್ ಎಸ್‌ರವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಮ್ಮೇಳನದ ರೀತಿ ನೀತಿ, ಸಮ್ಮೇಳನಾಧ್ಯಕ್ಷರ ಹಿಂದಿ ರಾಷ್ಟ್ರೀಯ ಭಾಷೆ ಎಂಬ ಹೇಳಿಕೆಗಳನ್ನು ಉಲ್ಲೇಖಿಸಿರುವ ಅವರು ಗೋಷ್ಠಿಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, “ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಪ್ರಜ್ಞೆ. ಅದೊಂದು ಜಾತಿ, ಧರ್ಮವನ್ನು ಪ್ರತಿನಿಧಿಸುವ ಮತ್ತು ಧರ್ಮದ ವಿಶೇಷಣವನ್ನು ಹೊತ್ತು ಮೆರೆಸುವ ಧಾರ್ಮಿಕ ಕೇಂದ್ರವಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಪರಿಷತ್ ಸಂಪೂರ್ಣವಾಗಿ ಜಾತಿ ಮತ್ತು ಧರ್ಮ ಕೇಂದ್ರಿತ ಹಾಗೂ ಪುರುಷ ಪ್ರಧಾನತೆಯನ್ನೆ ಪ್ರತಿಪಾದಿಸುವ ಮನುಸಂಸ್ಕೃತಿಯನ್ನು ಚಲಾವಣೆಗೆ ತರಲು ಹಾತೊರೆಯುತ್ತಿರುವುದು ದುರಂತವೇ ಸರಿ. ಮನುಷ್ಯ ಕೇಂದ್ರಿತ ಪ್ರಜ್ಞೆಯನ್ನು ಇಲ್ಲವಾಗಿಸಿ, ಸಮುದಾಯವೊಂದರ ಮೇಲಿನ ರಾಜಕೀಯ ಪ್ರೇರಿತ ದ್ವೇಷವನ್ನು ಇಮ್ಮಡಿಗೊಳಿಸುವ ಹಿಡನ್ ಅಜೆಂಡಾವನ್ನು ಇಟ್ಟುಕೊಂಡು ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, “ಸರ್ವ ಜನಾಂಗದ ಶಾಂತಿಯ ತೋಟ”ಕ್ಕೆ ಬೆಂಕಿ ಹಚ್ಚಿದ ಹಾಗಿದೆ. ಹಾವೇರಿಯಂತಹ ಸಾಮರಸ್ಯ ಉಳ್ಳ ಸ್ಥಳದಲ್ಲಿ ನಡೆಯುವ ಸಮ್ಮೇಳನವು ದಲಿತ ಮತ್ತು ಮುಸ್ಲಿಂ ಸಮುದಾಯದ ಬರಹಗಾರನ್ನು ವ್ಯವಸ್ಥತವಾಗಿ ಹೊರಗಿಟ್ಟಿದ್ದು, ಉಡುಪಿ ಮಠದಿಂದ ಕನಕದಾಸನನ್ನು ಹೊರಗಿಟ್ಟ ಹಾಗೆಯೇ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, “ಕನ್ನಡ ಸಾಹಿತ್ಯಕ್ಕೆ ಜೀವ ವಿರೋಧಿತನ ಎಂದಿಗೂ ಅಂಟಿಕೊಂಡೆ ಇಲ್ಲ. ವಿಶ್ವಕ್ಕೆ ವಿಶ್ವಮಾನವತ್ವ ಸಂದೇಶ ಸಾರಿದೆ ಕುವೆಂಪು ನೆಲದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಅಲ್ಪಮಾನವತ್ವವನ್ನು ಪ್ರತಿಯೊಂದು ಕಾರ್ಯಕ್ರಮದಲಿ ಪರೋಕ್ಷವಾಗಿ ಪ್ರತಿಪಾದಿಸುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿರುವ ದಲಿತರ ಮೇಲಿನ ದೌರ್ಜನ್ಯ, ಸ್ತ್ರೀ ಶೋಷಣೆ, ಮುಸ್ಲಿಂ ಫೋಬಿಯವನ್ನು ಹಬ್ಬಿಸುತ್ತಿರುವುದು, ಸರ್ಕಾರಿ ಶಾಲೆಗಳ ಸ್ಥಿತಿ ಗತಿ…. ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಕೂಡ ಸಮ್ಮೇಳನದಲ್ಲಿ ಇದರ ಕುರಿತ ಒಂದು ಗೋಷ್ಠಿಯೂ ಇಲ್ಲದಿರುವುದು, ಸಾಹಿತ್ಯ ಪರಿಷತ್ತಿನ ಜಾಣಕುರುಡುತನಕ್ಕೆ ಸಾಕ್ಷಿಯಂತಿದೆ” ಎಂದಿದ್ದಾರೆ.

ಇಂಥ ದುರಿತ ಕಾಲದಲ್ಲಿ ಸಾಮರಸ್ಯವನ್ನು ಹಬ್ಬಿಸಬೇಕೆ ಹೊರತು, ಅದನ್ನು ಇಲ್ಲವಾಗಿಸುವ ಸಾಹಿತ್ಯ ಸಮ್ಮೇಳವನ್ನು ಬಹಿಷ್ಕರಿಸಿಸುವುದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ನಾನು ನಂಬುತ್ತೇನೆ. “ಹಿಂದಿ ಭಾರತದ ರಾಷ್ಟ್ರೀಯ ಭಾಷೆ” ಎಂದು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡರಂಗೇಗೌಡರು ಸಂದರ್ಶನದಲ್ಲಿ ಹೇಳಿದ ಮಾತಿದು. ಇಂಥ ಕನ್ನಡ ಭಾಷಾ ವಿರೋಧಿಯನ್ನು ಅಧ್ಯಕ್ಷ ಸ್ಥಾನದಲ್ಲಿರಿಸುವ ಸಮ್ಮೇಳನದಲ್ಲಿ ಆಹ್ವಾನಿತ ಕವಿಯಾಗಿರುವ ನಾನು ಖಂಡಿತವಾಗಿಯು ಕವಿತೆ ಓದಲಾರೆ, ಭಾಗವಹಿಸಿಲಾರೆ. ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕದ ಹಾಗೆಯೇ ಇದೆ. ಅಷ್ಟಕ್ಕೂ ಷರೀಫನನ್ನು ಹೊರಗಿಟ್ಟಿದ್ದನ್ನೆ ಗುರು ಗೋವಿಂದ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ; ಮುಸ್ಲಿಂ ಲೇಖಕರನ್ನು ಹೊರಗಿಟ್ಟ ಕಸಾಪ: ಪ್ರತಿರೋಧವಾಗಿ ಜ.8ರಂದು ಜನಸಾಹಿತ್ಯ ಸಮ್ಮೇಳನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...