Homeಕರ್ನಾಟಕದ್ವೇಷ, ಹಿಂಸೆಯ ಸಿದ್ಧಾಂತ ನಮ್ಮ ಪ್ರೀತಿಯ ಬಾಪುವನ್ನು ಕಿತ್ತುಕೊಂಡಿತು: ರಾಹುಲ್ ಗಾಂಧಿ

ದ್ವೇಷ, ಹಿಂಸೆಯ ಸಿದ್ಧಾಂತ ನಮ್ಮ ಪ್ರೀತಿಯ ಬಾಪುವನ್ನು ಕಿತ್ತುಕೊಂಡಿತು: ರಾಹುಲ್ ಗಾಂಧಿ

- Advertisement -
- Advertisement -

“ದ್ವೇಷದ ಮೂಲಕ ಸತ್ಯದ ಜ್ವಾಲೆಯನ್ನು ನಂದಿಸಲು ಬಿಡಬೇಡಿ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಗರಿಕರಿಗೆ ಮನವಿ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮರಾದ 76ನೇ ವರ್ಷದ ದಿನವಾದ ಇಂದು ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

ಎಕ್ಸ್‌ನಲ್ಲಿ ಮಹಾತ್ಮ ಗಾಂಧಿ ಹುತಾತ್ಮರಾದ ದಿನವನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ, “ಈ ದಿನ, ದ್ವೇಷ ಮತ್ತು ಹಿಂಸೆಯ ಸಿದ್ಧಾಂತವು ನಮ್ಮ ಪ್ರೀತಿಯ ಬಾಪುವನ್ನು ಕಿತ್ತುಕೊಂಡಿತು. ಇಂದು ಅದೇ ಮನಸ್ಥಿತಿಯು ಅವರ ತತ್ವಗಳು ಮತ್ತು ಆದರ್ಶಗಳನ್ನು ನಮ್ಮಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

“ದ್ವೇಷದ ಚಂಡಮಾರುತದಲ್ಲಿ, ಸತ್ಯ ಮತ್ತು ಸದ್ಭಾವನೆಯ ಜ್ವಾಲೆಯನ್ನು ನಂದಿಸಲು ನಾವು ಬಿಡಬಾರದು. ಇದು ನಿಜಕ್ಕೂ ಗಾಂಧೀಜಿ ಅವರಿಗೆ ನಾವು ಸಲ್ಲಿಸುವ ಪ್ರಾಮಾಣಿಕ ಗೌರವವಾಗಿದೆ” ಎಂದು ರಾಹುಲ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“76 ವರ್ಷಗಳ ಹಿಂದೆ, ಈ ದಿನ ದ್ವೇಷವನ್ನು ಹರಡುವ ಶಕ್ತಿಗಳು ಮಹಾತ್ಮ ಗಾಂಧಿಯನ್ನು ಹತ್ಯೆಗೈದವು. ಗಾಂಧಿಯವರ ಸ್ಮರಣಾರ್ಥ ಇಂದು ಬೆಳಗ್ಗೆ ಬಿಹಾರದ ಅರಾರಿಯಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಶಿಬಿರದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಗಾಂಧಿಯ ಜೀವಿತಾವಧಿಯಲ್ಲಿ ಅವರನ್ನು ವಿರೋಧಿಸಿದ, ನಿರಾಕರಿಸಿದ ಮತ್ತು ಅಂತಿಮವಾಗಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಸಿದ್ಧಾಂತ ಮತ್ತು ಅದಕ್ಕೆ ಬದ್ಧವಾಗಿರುವವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಈಗ, ಅವರು ತಮ್ಮ ಪರಂಪರೆಯನ್ನು ಸರಿ ಎಂದು ರುಜು ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ್ದಾರೆ.

ಸೋಮವಾರ ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ ಪಶ್ಚಿಮ ಬಂಗಾಳದಲ್ಲಿ ಪೂರ್ಣಗೊಂಡು ಮಂಗಳವಾರ ಬಿಹಾರಕ್ಕೆ ಪ್ರವೇಶಿಸಿದೆ.

ಜನತಾದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಭಾಗವಾಗಿದ್ದ ‘ಮಹಾಘಟಬಂಧನ್’ ಮೈತ್ರಿಯನ್ನು ಕೈಬಿಟ್ಟು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿದ ಕೇವಲ ಎರಡು ದಿನಗಳ ನಂತರ ಬಿಹಾರಕ್ಕೆ ರಾಹುಲ್ ಯಾತ್ರೆ ಕಾಲಿಟ್ಟಿರುವುದು ಮಹತ್ವ ಪಡೆದುಕೊಂಡಿದೆ.

ಇಂದು (ಜ.30) ರಾಹುಲ್ ಯಾತ್ರೆಯು ಬಿಹಾರದ ಅರಾರಿಯಾ ಜಿಲ್ಲೆಯ ಅಂಬೇಡ್ಕರ್ ಚೌಕ್‌ನಿಂದ ಪ್ರಾರಂಭಗೊಂಡಿದೆ. ಮಹಾತ್ಮಾ ಗಾಂಧಿ ಹುತಾತ್ಮರಾದ 76 ನೇ ವರ್ಷದ ದಿನದ ಅಂಗವಾಗಿ ಇಂದು ಬೆಳಗ್ಗೆ ಅರಾರಿಯಾದ ಭಾರತ್ ಜೋಡೋ ನ್ಯಾಯ ಯಾತ್ರೆಯ ಶಿಬಿರದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಯಾವುದೇ ಶಿಕ್ಷೆಯಾಗಿಲ್ಲ, ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...