Homeಕರ್ನಾಟಕಬೆಂಗಳೂರು ಹೊಸಕೆರೆಹಳ್ಳಿಯ ಕೆರೆ ಮಧ್ಯದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ; ಜೆಡಿಎಸ್ ಆರೋಪ

ಬೆಂಗಳೂರು ಹೊಸಕೆರೆಹಳ್ಳಿಯ ಕೆರೆ ಮಧ್ಯದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ; ಜೆಡಿಎಸ್ ಆರೋಪ

- Advertisement -
- Advertisement -

“ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ ಬಿಬಿಎಂಪಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದೆ. ಇದು ಅಕ್ಷಮ್ಯ” ಎಂದು ಜೆಡಿಎಸ್ ಸರಣಿ ಟ್ವೀಟ್‌ ಮಾಡಿದೆ.

ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ವಿಡಿಯೊ ತುಣುಕನ್ನು ಲಗತ್ತಿಸಿರುವ ಜೆಡಿಎಸ್‌, “ಅಪಾರ್ಟ್ಮೆಂಟೊಂದರ ಮೌಲ್ಯ ಹೆಚ್ಚಿಸಲು ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಅವರು ಯಾವುದೇ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ” ಎಂದು ಉರಿಗೌಡ, ನಂಜೇಗೌಡ ವಿವಾದವನ್ನು ಉಲ್ಲೇಖಿಸಿದೆ.

“ಕೆರೆಗಳು ನಗರದ ಜೀವಸೆಳೆ, ಅದನ್ನು ರಕ್ಷಿಸಬೇಕೆ ವಿನಃ ಹಾಳುಗೆಡವುದಲ್ಲ. ಕೆರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ, ಆದರೆ ಕೆರೆಯಿನ್ನೂ ದುರ್ನಾತ ಬೀರುತ್ತಿದೆ. ಕೆರೆಗೆ ಈಗಾಗಲೆ ಖರ್ಚು ಮಾಡಲಾದ ಹಣವನ್ನು ಏನು ಮಾಡಲಾಗಿದೆ ಎಂದು ಮುನಿರತ್ನ ಅವರು ಹೇಳಬೇಕಾಗಿದೆ” ಎಂದು ಒತ್ತಾಯಿಸಿದೆ.

“ಕರೆ ಮಧ್ಯೆ ರಸ್ತೆ ನಿರ್ಮಿಸಲು ಬಿಬಿಎಂಪಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅನುಮೋದನೆ ಕೂಡಾ ಪಡೆದಿಲ್ಲ ಎಂಬ ವರದಿಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಮಿಷನ್ ದಂಧೆ ಬಿಟ್ಟು ಇತ್ತ ಕಡೆ ತಲೆ ಹಾಕಿ. ಕಾನೂನು ಮುರಿದು ಕರೆ ಮಧ್ಯೆ ರಸ್ತೆ ನಿರ್ಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ” ಎಂದು ಜೆಡಿಎಸ್‌ ಆಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...