Homeಕರ್ನಾಟಕಐಎಂಎ ಆರೋಪಿ ರೋಷನ್ ಬೇಗ್ ತಪ್ಪಿಸಿಕೊಳ್ಳಲು ಬಿಜೆಪಿ ಸಹಾಯ ಮಾಡುತ್ತಿದೆ.- ಸಿಎಂ ಕುಮಾರಸ್ವಾಮಿ

ಐಎಂಎ ಆರೋಪಿ ರೋಷನ್ ಬೇಗ್ ತಪ್ಪಿಸಿಕೊಳ್ಳಲು ಬಿಜೆಪಿ ಸಹಾಯ ಮಾಡುತ್ತಿದೆ.- ಸಿಎಂ ಕುಮಾರಸ್ವಾಮಿ

- Advertisement -
- Advertisement -

ಐಎಂಎಯ ಕೋಟ್ಯಂತರ ರೂ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ತಲೆಮರೆಸಿಕೊಳ್ಳಲು ಸಹಾಯ‌ ಮಾಡುವ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಈ ಮೂಲಕ ಕುದುರೆ ವ್ಯಾಪಾರ ಮಾಡಿ ಮೈತ್ರಿ ಸರ್ಕಾರ ಅಸ್ಥಿರ ಗೊಳಿಸಲು ಬಿಜೆಪಿ ಮುಖಂಡಕರು‌ ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ “ರೋಷನ್‌ ಬೇಗ್ ಬೆಂಗಳೂರು ಬಿಟ್ಟು ತೆರಳಲು ಪ್ರಯತ್ನಿಸಿದ್ದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಂತೋಷ್ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಬೇಗ್ ಜೊತೆಗಿದ್ದರು. ಈ ವೇಳೆ ಎಸ್.ಐ.ಟಿ ಅಧಿಕಾರಿಗಳನ್ನು ‌ನೋಡಿದ‌ ಕೂಡಲೇ ಯಡಿಯೂರಪ್ಪ ಆಪ್ತ ಸಂತೋಷ್ ಪರಾರಿಯಾಗಿದ್ದಾನೆ.” ಎಂದು ಆರೋಪಿಸಿ ರೋಷನ್ ಬೇಗ್ ಮತ್ತು ಸಂತೋಷ್ ಇಬ್ಬರೂ ಟಿಕೆಟ್ ಬುಕ್ ಮಾಡಿರುವ ಪ್ರತಿಯೊಂದುನ್ನು ಪೋಸ್ಟ್ ಮಾಡಿದ್ದಾರೆ.

ರೋಷನ್ ಬೇಗ್ ಮಾಜಿ ಸಚಿವರಾಗಿದ್ದು ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್  ನೊಡನೆ ಮುನಿಸಿಕೊಂಡಿದ್ದರು. ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಏಕವಚನದಲ್ಲಿಯೇ ಮಾತಾಡಿದ್ದರು. ಆದಾದ ನಂತರ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ಆ ನಂತರ ಐಎಂಎ ಕೇಸ್ ನಲ್ಲಿ ಅವರು ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಆನಂತರ ಅವರು ರಾಜೀನಾಮೆ ನೀಡಿದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಡನೆ ಮಾತುಕತೆ ನಡೆಸಿದ್ದರು.

ಈಗ ಬಹುತೇಕ ರಾಜ್ಯ ಸರ್ಕಾರ ಪತನಗೊಳ್ಳುವುದು ಖಾತ್ರಿಯಾಗುತ್ತಿದ್ದಂತೆ ಬಿಜೆಪಿಗೆ ಹಾರಿ ತಮ್ಮೆಲ್ಲಾ ಕೇಸ್ ಗಳಿಂದ ಬಚಾವ್ ಆಗಲು ರೋಷನ್ ಬೇಗ್ ಪ್ರಯತ್ನಿಸಿದ್ದರು ಎನ್ನಲಾಗಿದೆ. ಯಡಿಯೂರಪ್ಪನವರೆ ಬಿಜೆಪಿಗೆ ಬಂದರೆ ಎಲ್ಲಾ ಕೇಸುಗಳನ್ನು ಮುಚ್ಚಿಹಾಕುವುದಾಗಿ ಭರವಸೆ ನೀಡಿ ತಮ್ಮ ಆಪ್ತ ಸಂತೋಷ್ ಜೊತೆ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲು ತಯಾರಿ ನಡೆಸಿದ್ದರು. ಆದರೆ ಎಸ್.ಐ.ಟಿ ಯೂ ಈ ಮುಂಚೆಯೇ ವಿಚಾರಣೆಗೆ ನೋಟಿಸ್ ನೀಡಿದ್ದರಿಂದ ಇಂದು ವಿಚಾರಣೆಗಾಗಿ ವಶಕ್ಕೆ ಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...