Homeಮುಖಪುಟಅಕ್ಬರ್ 'ಶಾಂತಿ, ಪ್ರಜಾಪ್ರಭುತ್ವದ ಪ್ರತಿಪಾದಕ': ಜಿ20 ನಿಯತಕಾಲಿಕೆಯಲ್ಲಿ ಮೊಘಲ್‌ ದೊರೆಯನ್ನು ಹೊಗಳಿದ ಮೋದಿ ಸರ್ಕಾರ

ಅಕ್ಬರ್ ‘ಶಾಂತಿ, ಪ್ರಜಾಪ್ರಭುತ್ವದ ಪ್ರತಿಪಾದಕ’: ಜಿ20 ನಿಯತಕಾಲಿಕೆಯಲ್ಲಿ ಮೊಘಲ್‌ ದೊರೆಯನ್ನು ಹೊಗಳಿದ ಮೋದಿ ಸರ್ಕಾರ

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಅದರ ರಾಜಕೀಯ ಅಂಗವಾದ ಬಿಜೆಪಿ ಮತ್ತು ಇತರ ಬಲಪಂಥೀಯ ಹಿಂದೂ ಸಂಘಟನೆಗಳು ಮುಸ್ಲಿಂ ರಾಜರುಗಳ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ದ್ವೇಷ ಕಾರುತ್ತಾರೆ. ಆದರೆ ಇದೀಗ ನರೇಂದ್ರ ಮೋದಿ ಸರ್ಕಾರವು ತಮ್ಮ ನಿಲುವಿಗೆ ವ್ಯತಿರಿಕ್ತವಾಗಿ, ಮೊಘಲ್ ಚಕ್ರವರ್ತಿ ಅಕ್ಬರ್‌ನನ್ನು ಹೊಗಳಿದೆ.

ಸೆಪ್ಟೆಂಬರ್ 09 ಮತ್ತು 10, 2023 ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ನಡೆದ G20 ಶೃಂಗಸಭೆ 2023 ರ ಸಂದರ್ಭದಲ್ಲಿ ಬಿಡುಗಡೆಯಾದ ನಿಯತಕಾಲಿಕದಲ್ಲಿ ಮೋದಿ ಸರ್ಕಾರವು ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು ಹೊಗಳಿತು.

ಆನ್‌ಲೈನ್‌ನಲ್ಲಿ ಲಭ್ಯವಿರುವ PDF ರೂಪದ 52 ಪುಟಗಳ G20 ಮ್ಯಾಗಜೀನ್‌ನಲ್ಲಿ, ಮೋದಿ ಸರ್ಕಾರವು ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು “ಶಾಂತಿ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದಕ” ಎಂದು ಕರೆದಿದೆ, ಅವರ ”ಪ್ರಜಾಪ್ರಭುತ್ವದ ಚಿಂತನೆಯು ಅಸಾಮಾನ್ಯ ಮತ್ತು ಅದರ ಮುಂದಾಲೋಚನೆಯಿಂದ ಕೂಡಿದೆ” ಎಂದು ಹೇಳಿದೆ.

ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಇತರ ಬಲಪಂಥೀಯ ಹಿಂದೂ ನಾಯಕರು, ಭಾರತದಲ್ಲಿ ಇಂದು ನಡೆಯುವ ತಪ್ಪುಗಳಿಗೆ ಮೊಘಲ್ ರಾಜರೇ ಕಾರಣ ಎಂದು ಆಗಾಗ್ಗೆ ನಿಂದಿಸುವುದು ಮತ್ತು ಅವರನ್ನು “ವಿದೇಶಿ ದಾಳಿಕೋರರು” ಎಂದು ಕರೆಯುತ್ತಿದ್ದರು. 2014 ರ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿಯವರು “1,200 ವರ್ಷಗಳ ಗುಲಾಮ ಮನಸ್ಥಿತಿ” ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಸರ್ಕಾರವೇ ಚಕ್ರವರ್ತಿ ಅಕ್ಬರನ ಮೊಘಲ್ ಯುಗವನ್ನು ಜಿ20 ಮ್ಯಾಗಜೀನ್‌ನಲ್ಲಿ “ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಉತ್ತಮ ಆಡಳಿತ”ದ ಉದಾಹರಣೆಯನ್ನು ವಿವರಿಸಿದೆ.

”ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೆ ಪ್ರತಿಯೊಬ್ಬರ ಹಿತಾಸಕ್ತಿಯು ನಿರತವಾಗಿರುವುದು ಉತ್ತಮ ಆಡಳಿತವಾಗಿದೆ. ಮೂರನೇ ಮೊಘಲ್ ದೊರೆ, ಅಕ್ಬರ್ ಕೂಡ ಇದೇ ರೀತಿಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಧರ್ಮದ ಆಧಾರದ ಮೇಲೆ ತಾರತಮ್ಯದ ವಿರುದ್ಧ ಕ್ರಮಗಳನ್ನು ಕೈಗೊಂಡ ಅವರು ಸುಲ್-ಎ-ಕುಲ್ ಅಂದರೆ ವಿಶ್ವ ಶಾಂತಿಯ ತತ್ವವನ್ನು ಪರಿಚಯಿಸಿದರು. ಸಾಮರಸ್ಯ ಮತ್ತು ಸಹಿಷ್ಣು ಸಮಾಜವನ್ನು ರಚಿಸಲು, ಅವರು ದೀನ್-ಇ-ಇಲಾಹಿ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಆಚರಿಸಿದರು” ಎಂದು ಅಕ್ಬರ್‌ ಬಗ್ಗೆ ವಿವರಿಸಲಾಗಿದೆ.

”ಅಕ್ಬರ್‌ ಸ್ಥಾಪಿಸಿದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಪಂಗಡಗಳ ಬುದ್ಧಿಜೀವಿಗಳು ಮತ್ತು ಧಾರ್ಮಿಕ ಮುಖಂಡರು ಅಕ್ಬರ್‌ ಉಪಸ್ಥಿತಿಯಲ್ಲಿ ಸೇರಿ, ಚರ್ಚೆ ನಡೆಸುತ್ತಿದ್ದರು. ಅಕ್ಬರ್ ನವರತ್ನ ಎಂಬ ತನ್ನ ಪರಿಷತ್ತಿನ ಒಂಬತ್ತು ವಿದ್ವಾಂಸರೊಂದಿಗೆ ಸಮಾಲೋಚಿಸಿ ತನ್ನ ಸಾರ್ವಜನಿಕ ಕಲ್ಯಾಣ ನೀತಿಗಳನ್ನು ಜಾರಿಗೆ ತರುತ್ತಿದ್ದ. ಅಕ್ಬರನ ಪ್ರಜಾಸತ್ತಾತ್ಮಕ ಸಿದ್ಧಾಂತವು ಅಸಾಮಾನ್ಯವಾಗಿತ್ತು ಮತ್ತು ಆತನ ಕಾಲಮಾನಕ್ಕಿಂತ ಬಹಳ ಮುಂದಿತ್ತು” ಎಂದು ಅಕ್ಬರ್‌ ಬಗ್ಗೆ ಸಂಕ್ಷಿಪ್ತ ವಿವರವನ್ನು ಒದಗಿಸಲಾಗಿದೆ.

ನಿಯತಕಾಲಿಕೆಯಲ್ಲಿ ಶಿವಾಜಿ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆಯೂ ವಿವರಿಸಲಾಗಿದೆ.

ಆದರೆ, ಮುಸ್ಲಿಂ ದೊರೆಗಳ ಇತಿಹಾಸವನ್ನು ತಿರುಚಿ ಅದರಲ್ಲೂ ಮೊಘಲ್‌ ಅರಸರ ಬಗ್ಗೆ ಅಪಪ್ರಚಾರಗಳನ್ನು ನಡೆಸುತ್ತಲೇ ಬಂದಿರುವ ಬಿಜೆಪಿ ಹಾಗೂ ಬಲಪಂಥೀಯ ರಾಜಕೀಯದ ಹೊರತಾಗಿಯೂ ಜಾಗತಿಕ ಸಮಾವೇಶದಲ್ಲಿ ಅಕ್ಬರನ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಂಡಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಜಿ20 ಶೃಂಗಸಭೆಗೆ ಬಂದ ವಿಶ್ವ ನಾಯಕರೊಂದಿಗೆ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಸಾಮೂಹಿಕ ನಮನ ಸಲ್ಲಿಸಿದ ಬಗ್ಗೆಯೂ ಇಂಟರ್‌ನೆಟ್‌ ಬಳಕೆದಾರರು ಚರ್ಚೆ ನಡೆಸಿದ್ದರು.

ಬಲಪಂಥೀಯ ರಾಜಕಾರಣ ದೇಶೀಯ ಮಟ್ಟದಲ್ಲಿ ಎಷ್ಟೇ ವಿರೋಧಿಸಿದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹಾನ್‌ ವ್ಯಕ್ತಿತ್ವಗಳೇ ದೇಶವನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಸಂಪಾದಕರು, ಪತ್ರಕರ್ತರಿಂದ M20 ಶೃಂಗಸಭೆ: G20 ನಾಯಕರಿಗೆ ಪತ್ರಿಕಾ ಸ್ವಾತಂತ್ರ್ಯದ ಸಂದೇಶ ರವಾನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...