Homeಮುಖಪುಟಸಂಪಾದಕರು, ಪತ್ರಕರ್ತರಿಂದ M20 ಶೃಂಗಸಭೆ: G20 ನಾಯಕರಿಗೆ ಪತ್ರಿಕಾ ಸ್ವಾತಂತ್ರ್ಯದ ಸಂದೇಶ ರವಾನೆ

ಸಂಪಾದಕರು, ಪತ್ರಕರ್ತರಿಂದ M20 ಶೃಂಗಸಭೆ: G20 ನಾಯಕರಿಗೆ ಪತ್ರಿಕಾ ಸ್ವಾತಂತ್ರ್ಯದ ಸಂದೇಶ ರವಾನೆ

- Advertisement -
- Advertisement -

ಮಾಧ್ಯಮಗಳು ತಮ್ಮ ದೇಶ ಮತ್ತು ಪ್ರದೇಶಗಳಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು G20 ದೇಶಗಳ ಸಂಪಾದಕರು ಮತ್ತು ಪತ್ರಕರ್ತರು ಒಟ್ಟುಗೂಡಿ ಸೆಪ್ಟೆಂಬರ್ 6ರಂದು ‘M20’ ಎಂಬ ಆನ್‌ಲೈನ್ ಮಾಧ್ಯಮ ಸ್ವಾತಂತ್ರ್ಯ ಶೃಂಗಸಭೆ ನಡೆಸಿದರು.

”M20 ಮಾಧ್ಯಮ ಸ್ವಾತಂತ್ರ್ಯ ಶೃಂಗಸಭೆ”ಯ ಉದ್ದೇಶವು ಮಾಧ್ಯಮಗಳ ಕಳವಳಗಳನ್ನು ಎತ್ತಿ ತೋರಿಸುವುದು ಮತ್ತು ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ G20 ನಾಯಕರ ಸಭೆಗೆ ಪತ್ರಿಕಾ ಸ್ವಾತಂತ್ರ್ಯದ ಮುಖ್ಯವಾದ ಸಂದೇಶವನ್ನು ಕಳುಹಿಸುವುದಾಗಿದೆ.

ಭಾರತದ 11 ಸಂಪಾದಕರು ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರನ್ನು ಒಳಗೊಂಡ M20 ಸಂಘಟನಾ ಸಮಿತಿಯು ಈ ಶೃಂಗಸಭೆಯನ್ನು ಆಯೋಜಿಸಿದೆ.

M20 ಏಕೆ?

ದಿ ವೈರ್‌ನ ಸಂಸ್ಥಾಪಕ ಸಂಪಾದಕ ಮತ್ತು ಸಂಘಟನಾ ಸಮಿತಿಯ ಸಂಚಾಲಕ ಸಿದ್ಧಾರ್ಥ್ ವರದರಾಜನ್ ಅವರು ತಮ್ಮ ಆರಂಭಿಕ ಭಾಷಣದಲ್ಲಿ, ”ಆತಿಥೇಯ ಸರ್ಕಾರ ಮತ್ತು ಅನೇಕ ಜಿ20 ಸದಸ್ಯರಿಗೆ ಮಾಧ್ಯಮ ಸ್ವಾತಂತ್ರ್ಯವು ಮುಖ್ಯ ಎಂದೆನಿಸದ ಕಾರಣಕ್ಕೆ M20 ಶೃಂಗಸಭೆಯ ಅಗತ್ಯವು ಉದ್ಭವಿಸಿದೆ” ಎಂದು ಹೇಳಿದರು.

”G20 ದೇಶಗಳು ಮಾಧ್ಯಮಗಳ ಸ್ವಾತಂತ್ರದ ಬಗ್ಗೆ ಮಾತವಲ್ಲ ಅನೇಕ ಸಾಮಾನ್ಯ ಸಮಸ್ಯೆಗಳು ಮತ್ತು ಮಾಧ್ಯಮಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿ ತೋರುತ್ತಿಲ್ಲ” ಎಂದು ಅವರು ಹೇಳಿದರು.

”ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾವುಗಳೇ ಮಾತನಾಡಬೇಕು ಆಗ ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಬಹುದು. ಜಿ20 ನಾಯಕರು ಶೀಘ್ರದಲ್ಲೇ ತಮ್ಮ ಶೃಂಗಸಭೆಗೆ ಸೇರುತ್ತಾರೆ, ಅವರು ತಮ್ಮ ದೇಶಗಳಲ್ಲಿ ಮಾಧ್ಯಮಗಳು ಮುಕ್ತವಾಗಿಲ್ಲದಿದ್ದರೆ, ಅಲ್ಲಿ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ” ಎಂದರು.

G20 ದೇಶಗಳಲ್ಲಿ ಮಾಧ್ಯಮಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳು ದಮನದ ಸಮಸ್ಯೆ ಮತ್ತು ‘ಕಾಶ್ಮೀರದಿಂದ ಕನ್ಯಾಕುಮಾರಿ’ವರೆಗೆ ಪತ್ರಿಕೋದ್ಯಮವನ್ನು ಅಪರಾಧೀಕರಿಸಲು ಕಾನೂನಿನ ದುರುಪಯೋಗ, ಸ್ಪೈವೇರ್ ಮೂಲಕ ಪತ್ರಕರ್ತರ ಮೇಲೆ ಕಣ್ಗಾವಲು ಇಡುವುದು, ಮಾಧ್ಯಮಗಳು ತೀವ್ರ ಒತ್ತಡದಲ್ಲಿವೆ” ಎಂದು ವರದರಾಜನ್ ಹೇಳಿದರು.

ಇದನ್ನೂ ಓದಿ: G20 ಔತಣ ಕೂಟಕ್ಕೆ ಆಹ್ವಾನಿಸದ ಬಗ್ಗೆ ಮೌನ ಮುರಿದ ಖರ್ಗೆ

ದಿ ಹಿಂದೂ ಮಾಧ್ಯಮ ಸಂಸ್ಥೆಯ ಮಾಜಿ ಪ್ರಧಾನ ಸಂಪಾದಕ ಎನ್. ರಾಮ್ ಮಾತನಾಡಿ, ”ಜಾಗತಿಕವಾಗಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತದ ಶ್ರೇಯಾಂಕವು ಕಳೆದ ಒಂಬತ್ತು ವರ್ಷಗಳಲ್ಲಿ ಅಥವಾ ಈ ಸರ್ಕಾರವು ಅಧಿಕಾರದಲ್ಲಿದ್ದಾಗಿನಿಂದ ನಿರಂತರವಾಗಿ ಅಡೆತಡೆಯಿಲ್ಲದೆ ಇಳಿಯುತ್ತಿದೆ” ಎಂದು ಹೇಳಿದರು.

ಸ್ವತಂತ್ರ ಸುದ್ದಿ ಸಂಸ್ಥೆಗಳ ಮೇಲಿನ ತೆರಿಗೆ ದಾಳಿಗಳು, ಭಯೋತ್ಪಾದನೆಗೆ ಸಂಬಂಧಿಸಿದ ಕಾನೂನುಗಳನ್ನು ಬಳಸಿಕೊಂಡು ಪತ್ರಕರ್ತರ ಬಂಧನಗಳು ಮತ್ತು ಕೇಂದ್ರೀಯ ಕಾನೂನುಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಸೆನ್ಸಾರ್ಶಿಪ್‌ನ್ನು ರಾಮ್ ಉಲ್ಲೇಖಿಸಿದರು.

”ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳುಗಳನ್ನು ಹೇಳಲಾಗುತ್ತದೆ. ಅವರನ್ನು ಭಕ್ತರು ಎಂದು ಕರೆಯಲಾಗುತ್ತದೆ. ಅವರು ನಿಜವಾಗಿಯೂ ತಾವು ಇಷ್ಟಪಡದವರನ್ನು ಗುರಿಯಾಗಿಸಿ ದಾಳಿ ಮಾಡುತ್ತಾರೆ” ಎಂದು ಅವರು ಹೇಳಿದರು.

ಸ್ವತಂತ್ರ ಪತ್ರಕರ್ತ ಮತ್ತು ಟರ್ಕಿಯ ಹರ್ರಿಯೆಟ್‌ನ ಮಾಜಿ ವಿದೇಶಿ ಸಂಪಾದಕ ಇಪೆಕ್ ಯೆಜ್ದಾನಿ ಮಾತನಾಡಿ, ”ಟರ್ಕಿಯಲ್ಲಿನ 90% ಕ್ಕಿಂತ ಹೆಚ್ಚು ಮುಖ್ಯವಾಹಿನಿಯ ಮಾಧ್ಯಮವು ಸರ್ಕಾರದ ನಿಯಂತ್ರಣದಲ್ಲಿದೆ ಅಥವಾ ನೇರವಾಗಿ ಸರ್ಕಾರದ ಒಡೆತನದಲ್ಲಿದೆ” ಎಂದು ಆತಂಕಕಾರಿ ವಿಚಾರವನ್ನು ಹಂಚಿಕೊಂಡರು.

”ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಸರ್ಕಾರದ ಒತ್ತಡ ಹೇರಿ ಪತ್ರಕರ್ತರನ್ನು ಬಂಧಿಸಲಾಗಿದೆ, ಹಿಂಬಾಲಿಸಲಾಗಿದೆ. ಟರ್ಕಿಯಲ್ಲಿ ಹಲವು ವರ್ಷಗಳಿಂದ ಪತ್ರಕರ್ತರು ಅನಿಶ್ಚಿತ ನಿರುದ್ಯೋಗ ಮತ್ತು ಕಡಿಮೆ ವೇತನದೊಂದಿಗೆ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

”ಪತ್ರಕರ್ತರ ಬಂಧಿಸಲು ಒತ್ತಡಗಳು ಕಡಿಮೆಯಾಗಿದ್ದರೂ, ಸಾರ್ವಜನಿಕ ಜಾಹೀರಾತುಗಳನ್ನು ನ್ಯಾಯಯುತವಾಗಿ ವಿತರಿಸಲು ಸ್ಥಾಪಿಸಲಾದ ಟರ್ಕಿಯ ಸಾರ್ವಜನಿಕ ಜಾಹೀರಾತು ಏಜೆನ್ಸಿಯಂತಹ ಏಜೆನ್ಸಿಗಳ ಮೂಲಕ ಪ್ರಯೋಗಗಳು ಮತ್ತು ದಂಡಗಳು ಹೆಚ್ಚಿವೆ. ಸರ್ಕಾರವನ್ನು ಟೀಕಿಸುವ ಎಲ್ಲಾ ಪತ್ರಿಕೆಗಳ ವಿರುದ್ಧ ಸರ್ಕಾರ ಯುದ್ಧ ಘೋಷಿಸಿದೆ” ಎಂದು ಅವರು ಹೇಳಿದರು.

ಮ್ಯಾನ್ಮಾರ್ ನೌ ಸಂಪಾದಕ ಸ್ವೆ ವಿನ್ ಅವರು ಮಾತನಾಡಿ, ”ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ” ಎಂದು ಹೇಳಿದರು.

”ನಾನು ಹೇಳಬಯಸುವುದೇನೆಂದರೆ, ಭಾರತದ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್, ದಮನ ಮತ್ತು ಕ್ರೂರತೆಯ ವಿಷಯದಲ್ಲಿ ಉತ್ತರ ಕೊರಿಯಾವನ್ನು ಹೋಲುವ ದೇಶವಾಗಿದೆ. ಬಹಳಷ್ಟು ಕ್ರೌರ್ಯಗಳು ನಡೆಯುತ್ತಿವೆ. ನಮ್ಮ ತ್ಯಂತ ಪುಟ್ಟ ದೇಶವಾಗಿರುವುದರಿಂದ, ನಮ್ಮ ದೇಶದೆಡೆಗೆ ಯಾರೂ ಗಮನಹರಿಸುತ್ತಿಲ್ಲ” ಎಂದು ಅವರು ಹೇಳಿದರು.

ಇದೇ ರೀತಿ ಈ ಮಾಧ್ಯಮ ಸ್ವಾತಂತ್ರ್ಯ ಶೃಂಗಸಭೆಯಲ್ಲಿ ಅರಬ್, ಇಂಡೋನೇಷಿಯಾ ,ಯುರೋಪ್‌, ಇಟಲಿ, ಬ್ರೆಜಿಲ್‌ನಲ್ಲಿ, ದಕ್ಷಿಣ ಆಫ್ರಿಕಾ, ಜಪಾನ್‌, ಕೊರಿಯಾ, ಆಸ್ಟ್ರೇಲಿಯಾ ಕೆನಡಾ ದೇಶದ ಮಾಧ್ಯಮ ಪ್ರತಿನಿಧಿಗಳು ತಾವು ತಮ್ಮ ದೇಶದಲ್ಲಿ ಎದುರಿಸುತ್ತಿರುವ ಸವಾಲುಗಳು ಬಗ್ಗೆ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...