Homeಮುಖಪುಟಪಂಜಾಬ್‌: ಎರಡು ಕ್ಷೇತ್ರಗಳಲ್ಲೂ ಪಂಜಾಬ್‌ ಸಿಎಂಗೆ ಸೋಲು; ಸಿಧು, ಅಮರಿಂದರ್‌ಗೂ ಸೋಲು

ಪಂಜಾಬ್‌: ಎರಡು ಕ್ಷೇತ್ರಗಳಲ್ಲೂ ಪಂಜಾಬ್‌ ಸಿಎಂಗೆ ಸೋಲು; ಸಿಧು, ಅಮರಿಂದರ್‌ಗೂ ಸೋಲು

- Advertisement -
- Advertisement -

ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಂಜಿತ್ ಸಿಂಗ್ ಚನ್ನಿ ಅವರು ಚಮಕೌರ್ ಸಾಹಿಬ್ ಮತ್ತು ಭದೌರ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಸೋತಿದ್ದಾರೆ.

ಭದೌರ್‌ನಲ್ಲಿ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ 57,000 ಮತಗಳನ್ನು ಪಡೆದರೆ, ಚನ್ನಿ 23,000 ಮತಗಳನ್ನು ಪಡೆದರು. ಚಮಕೌರ್‌ ಸಾಹಿಬ್‌ನಲ್ಲಿ ಚನ್ನಿ ಸುಮಾರು 50,000 ಮತಗಳನ್ನು ಗಳಿಸಿದರು. ಆದರೆ ಅವರ ಹತ್ತಿರದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ, ಸಿಎಂ ರೀತಿಯ ಹೆಸರನ್ನೇ ಹೊಂದಿದ್ದ ಚರಂಜಿತ್ ಸಿಂಗ್ 54,000ಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿದರು.

ಆಮ್ ಆದ್ಮಿ ಪಕ್ಷ ಅಥವಾ ಎಎಪಿ ಪಂಜಾಬ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸುವ ಮೂಲಕ ಸರ್ಕಾರ ರಚಿಸಲು ಸಿದ್ಧವಾಗಿದೆ. 117 ಸದಸ್ಯ ಬಲದ ಸದನದಲ್ಲಿ ಎಎಪಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 18 ಸ್ಥಾನಗಳಲ್ಲಿ ಹಿಂದುಳಿದಿದೆ. ಬಿಜೆಪಿ 2 ಸ್ಥಾನಗಳನ್ನು ಗೆದ್ದರೆ, ಶಿರೋಮಣಿ ಅಕಾಲಿದಳ 6 ಸ್ಥಾನಗಳನ್ನು ಗೆದ್ದಿದೆ ಎಂದು ಆರಂಭಿಕ ಫಲಿತಾಂಶಗಳು ಹೇಳಿವೆ.

ನವಜೋತ್‌ ಸಿಂಗ್ ಸಿಧು ಸೋಲು

ಈ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಅಮೃತಸರ ಪೂರ್ವದಲ್ಲಿ ಸೋಲನುಭವಿಸಿದ್ದು, ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಗೆಲುವು ಸಾಧಿಸಿದ್ದಾರೆ.

ಅಮರಿಂದರ್‌ಸಿಂಗ್‌ ಸೋಲು

ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ಪಟಿಯಾಲ ನಗರ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ.

ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಕ್ಲೀನ್ ಸ್ವೀಪ್ ದೊರೆಯುವ ಸೂಚನೆಗಳು ದೊರೆತಿವೆ. ಮಧ್ಯಾಹ್ನ 1 ಗಂಟೆ ವೇಳೆಗೆ 117 ಸ್ಥಾನಗಳಲ್ಲಿ 91ರಲ್ಲಿ ಎಎಪಿ ಮುನ್ನಡೆ ಸಾಧಿಸಿದೆ ಎಂದು ತಿಳಿಸಿದೆ.

ಪಟಿಯಾಲಾ ಕ್ಷೇತ್ರದಲ್ಲಿ ಅಮರಿಂದರ್ ಸಿಂಗ್ ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಅವರು 13,000 ಮತಗಳ ಅಂತರದಿಂದ ಸೋಲಿಸಿದರು.

ಮಧ್ಯಾಹ್ನ 12.30 ರ ಹೊತ್ತಿಗೆ, ಅಜಿತ್ ಪಾಲ್ ಸಿಂಗ್ 36,645 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ 22,868 ಮತಗಳನ್ನು ಹೊಂದಿದ್ದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಮರಿಂದರ್‌‌, ಹಿಂದಿನ ಚುನಾವಣೆಯಲ್ಲಿ 2017ರಲ್ಲಿ ಭಾರಿ ಅಂತರದಿಂದ ಗೆದ್ದಿದ್ದರು ಎಂದು ಎನ್‌‌ಡಿಟಿವಿ ವರದಿ ಮಾಡಿದೆ. ಅವರು ನಾಲ್ಕು ಬಾರಿ ( 2002, 2007, 2012 ಮತ್ತು 2017) ಪಟಿಯಾಲಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ನವೆಂಬರ್‌ನಲ್ಲಿ ಅಮರಿಂದರ್ ಸಿಂಗ್ ತಮ್ಮದೇ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದರು. ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.


ಇದನ್ನೂ ಓದಿರಿ: ರೈತರ ಹತ್ಯಾಕಾಂಡ ನಡೆದ ಲಖಿಂಪುರ್‌ ಖೇರಿ ಚುನಾವಣಾ ಫಲಿತಾಂಶ ಹೀಗಿದೆ..? ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...