Homeಮುಖಪುಟರೈತರ ಹತ್ಯಾಕಾಂಡ ನಡೆದ ಲಖಿಂಪುರ್‌ ಖೇರಿ ಚುನಾವಣಾ ಫಲಿತಾಂಶ ಹೀಗಿದೆ..? ನೋಡಿ

ರೈತರ ಹತ್ಯಾಕಾಂಡ ನಡೆದ ಲಖಿಂಪುರ್‌ ಖೇರಿ ಚುನಾವಣಾ ಫಲಿತಾಂಶ ಹೀಗಿದೆ..? ನೋಡಿ

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ರೈತರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಲಖಿಂಪುರ್‌ ಖೇರಿಯ ವಿಧಾನಸಭಾ ಚುನಾವಣೆ 2022 ರ ಮತ ಎಣಿಕೆ ನಡೆಯುತ್ತಿದೆ. ಲಖಿಂಪುರ್ ಖೇರಿಯು ಉತ್ತರ ಪ್ರದೇಶದ ಅವಧ್ ಪ್ರದೇಶ ಮತ್ತು ಖೇರಿ ಜಿಲ್ಲೆಯ ವಿಧಾನಸಭಾ ಸ್ಥಾನವಾಗಿದೆ.

ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಸಂಸದರಾಗಿರುವ ಜಿಲ್ಲೆಯಲ್ಲಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈಗ ರದ್ದಾಗಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಚುನಾವಣೆ ಮೇಲೆ ಇದು ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗಿತ್ತು.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಖೀಂಪುರ್‌ ಖೇರಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ರವಿಶಂಕರ್ ತ್ರಿವೇದಿ, ಬಿಜೆಪಿಯ ಯೋಗೇಶ್ ವರ್ಮಾ, ಎಸ್‌ಪಿಯ ಉತ್ಕರ್ಷ್ ವರ್ಮಾ, ಬಿಎಸ್‌ಪಿಯ ಮೋಹನ್ ಬಾಜ್‌ಪೈ, ಎಐಎಂಐಎಂನ ಮೊ. ಉಸ್ಮಾನ್ ಸಿದ್ದಿಕಿ ಸೇರಿದ್ದಾರೆ.

ಇದನ್ನೂ ಓದಿ: Uttarakhand Election Results | ಉತ್ತರಾಖಂಡ್‌ ಬಿಜೆಪಿ ಮುನ್ನಡೆ: ಮೊದಲ ಗೆಲುವು ದಾಖಲಿಸಿದ ಕಾಂಗ್ರೆಸ್‌ | Live

ಈ ಚುನಾವಣೆಯಲ್ಲಿ ರೈತರ ಮೇಲೆ ನಡೆದ ಹತ್ಯಾಕಾಂಡ ಯಾವುದೇ ಪ್ರಭಾವ ಬೀರಿಲ್ಲ ಎಂಬುದು ಆರಂಭಿಕ ಹಂತಗಳಲ್ಲಿ ಕಾಣಿಸುತ್ತಿದೆ. ಎಂಟು ವಿಧಾನಸಭಾ ಕ್ಷೇತ್ರದ ಲಖಿಂಪುರ್‌ ಖೇರಿಯ ಎರಡು ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿ ಮುನ್ನಡೆ ಸಾಧಿಸುತ್ತಿದ್ದರೂ ಉಳಿದ ಆರು ಕ್ಷೇತ್ರಗಳಲ್ಲಿ  ಬಿಜೆಪಿ ಪ್ರಬಲ ಮುನ್ನಡೆ ಸಾಧಿಸುತ್ತಿದೆ.

ಲಖಿಂಪುರ್‌ ಖೇರಿಯಲ್ಲಿ 4,832, ಗೋಲಾದಲ್ಲಿ 9,468, ನಿಘಸನ್‌ನಲ್ಲಿ 12,854, ಧೌರ್ಹರಾದಲ್ಲಿ 4,777, ಕಾಸ್ತಾದಲ್ಲಿ 3,966, ಶ್ರೀನಗರದಲ್ಲಿ 4,711 ಮತಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ, ಮೊಹಮ್ಮದಿ ಮತ್ತು ಪಿಲಾಯದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಈ ಹಿಂದೆ ಲಖಿಂಪುರ ಖೇರಿಯಲ್ಲಿ ಎಲ್ಲಾ ಎಂಟು ಅಸೆಂಬ್ಲಿ ಸ್ಥಾನಗಳು ಬಿಜೆಪಿಯವು. ಲಖೀಂಪುರ್‌ ನಗರದಲ್ಲಿ ಹಾಲಿ ಶಾಸಕ ಯೋಗೇಶ್ ವರ್ಮಾ ಅವರು ಎಸ್‌ಪಿಯ ಉತ್ಕರ್ಷ್ ವರ್ಮಾ ಮಧುರ್ ವಿರುದ್ಧ ಕಣಕ್ಕಿಳಿದಿದ್ದರು. ಕಾಂಗ್ರೆಸ್ ತನ್ನ ಅಭ್ಯರ್ಥಿ ರವಿಶಂಕರ್ ತ್ರಿವೇದಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡು ಕಣಕಿಳಿಸಿತ್ತು. ಸದ್ಯ ಬಿಜೆಪಿಯ ಯೋಗೇಶ್ ವರ್ಮಾ ಅವರು ಎಸ್‌ಪಿಯ ಉತ್ಕರ್ಷ್ ವರ್ಮಾ ಮಧುರ್ ಅವರಿಗಿಂತ 2,787 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.


ಇದನ್ನೂ ಓದಿ: Uttar Pradesh Elections Result | ಎಲ್ಲಾ ಕ್ಷೇತ್ರಗಳ ಎಣಿಕೆ ಪ್ರಾರಂಭ; ಬಿಜೆಪಿ ಮುನ್ನಡೆ | Live

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಲ್‌ ಜಝೀರಾ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಅಧಿಕಾರಿಗಳು

0
ಗಾಝಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದ ಅಲ್‌ ಜಝೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಈ ಹಿಂದೆ ದೇಶದಲ್ಲಿ ನಿರ್ಬಂಧ ವಿಧಿಸಿತ್ತು. ಇದೀಗ ಇಸ್ರೇಲ್‌ನಲ್ಲಿನ ಅಲ್‌ಜಝೀರಾ ಕಚೇರಿಗೆ ಇಸ್ರೇಲ್‌ ಅಧಿಕಾರಿಗಳು ದಾಳಿ ನಡೆಸಿದ್ದು,...