HomeUncategorizedಭಾರತದ ಜಿಡಿಪಿ ಬೆಳವಣಿಗೆಯ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ನೀಡಲಾಗಿದೆ: ಅಶೋಕ ಮೋದಿ

ಭಾರತದ ಜಿಡಿಪಿ ಬೆಳವಣಿಗೆಯ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ನೀಡಲಾಗಿದೆ: ಅಶೋಕ ಮೋದಿ

- Advertisement -
- Advertisement -

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಅರ್ಥಶಾಸ್ತ್ರಜ್ಞ ಅಶೋಕ ಮೋದಿ ಅವರು ದೆಹಲಿಯಲ್ಲಿ ಜಿ -20 ಸಭೆಯ ವೇಳೆ ಭಾರತದ ಜಿಡಿಪಿ ಬೆಳವಣಿಗೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಕೆಂದ್ರ ಸರಕಾರ ನೀಡಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಅಶೋಕ ಮೋದಿ ಪ್ರಕಾರ  2023-24ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಜಿಡಿಪಿ ಬೆಳವಣಿಗೆಯ ದರವು 7.8% ಆದರೆ ಅದು ತಪ್ಪಾಗಿದ್ದು, ಜಿಡಿಪಿ ಬೆಳವಣಿಗೆ ದರ ನಿಜವಾಗಿಯೂ  4.5% ಆಗಿದೆ ಎಂದು ಹೇಳಿದ್ದಾರೆ.

ಪ್ರಾಜೆಕ್ಟ್ ಸಿಂಡಿಕೇಟ್‌ ಪ್ರಕಟ ಮಾಡಿದ ಅಶೋಕ ಮೋದಿ ಲೇಖನದಲ್ಲಿ ಬೆಳವಣಿಗೆ ದರವನ್ನು ನಿರ್ಧರಿಸಲು ಎನ್ಎಸ್ಒ ದೇಶಿಯ ಆದಾಯದ ಅಂದಾಜುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಅದು ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಾದಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿನ GDP ಬೆಳವಣಿಗೆಯ ಅಂಕಿಅಂಶಗಳನ್ನು ಪ್ರತಿಪಕ್ಷಗಳು ದೋಷಪೂರಿತ ಎಂದು ಟೀಕಿಸಿದರೆ. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಅಶೋಕ ಮೋದಿ ಅವರ ಪ್ರೊಜೆಕ್ಟ್-ಸಿಂಡಿಕೇಟ್‌  ಪ್ರಕಟ ಮಾಡಿದ ‘ಇಂಡಿಯಾಸ್ ಫೇಕ್ ಗ್ರೋತ್ ಸ್ಟೋರಿ’ ಶೀರ್ಷಿಕೆಯ ಲೇಖನದಲ್ಲಿ ಅಂಕಿ- ಅಂಶಗಳನ್ನು ನಕಲಿ ಎಂದು ಕರೆದಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆಯ ವೇಳೆ ಬಿಡುಗಡೆ ಮಾಡಿದ ಈ ಅಂಕಿ ಅಂಶವು  GDP ಹೆಚ್ಚಳ  ಕೇವಲ ಬ್ರಾಂಡಿಂಗ್ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. GDP ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲದೆ ಭಾರತೀಯ ಆರ್ಥಿಕತೆಯಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಅಶೋಕ ಮೋದಿ ಹೇಳಿಕೊಂಡಿದ್ದಾರೆ.

ಅವರು ಆದಾಯ ಮತ್ತು ವೆಚ್ಚದ ಸಂಖ್ಯೆಗಳ ನಡುವಿನ ‘ವ್ಯತ್ಯಾಸಗಳ’ ಕಾರಣದಿಂದಾಗಿ GDP ಸಂಖ್ಯೆಗಳನ್ನು ದೋಷಪೂರಿತವೆಂದು ಹೇಳಿದ್ದಾರೆ ಮತ್ತು ಕೇವಲ ಆದಾಯವನ್ನು ಬಳಸುವ ಬದಲು ಎರಡರ ಸರಾಸರಿಯನ್ನು ಬಳಸಬೇಕೆಂದು ವಾದಿಸಿದ್ದಾರೆ.

ಆದಾಯದೊಂದಿಗೆ ವೆಚ್ಚವನ್ನು ಹೊಂದಿಸಲು ಬಳಸಲಾದ ‘ವ್ಯತ್ಯಾಸದ ಸಂಖ್ಯೆ’ಯನ್ನು ತೆಗೆದುಹಾಕಿದರೆ 2023 ರಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ GDP ಬೆಳವಣಿಗೆ ದರವು ಕೇವಲ 1.4% ಆಗಿರುತ್ತದೆ, 7.8% ಅಲ್ಲ ಎಂದು ಅಶೋಕ ಮೋದಿ ಹೇಳಿಕೊಂಡಿದ್ದಾರೆ.

ಎನ್ಎಸ್ಒ ಕ್ರಮ ಸರಿಯಾದ ಕ್ರಮವಲ್ಲ ಮತ್ತು ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುಕೆ ಎರಡೂ ಸಂಖ್ಯೆಗಳ ಆಧಾರದ ಮೇಲೆ ತಮ್ಮ GDP ಅನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಬೆಳವಣಿಗೆ ದರವನ್ನು ನಿರ್ಧರಿಸಲು ಎನ್ಎಸ್ಒ ದೇಶಿಯ ಆದಾಯದ ಅಂದಾಜುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಅದು ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇಶಿಯ ಆದಾಯವು ದೇಶದಲ್ಲಿ ಸರಕುಗಳು ಮತ್ತು ಸೇವೆಗಳಿಂದ ದೊರೆಯುವ ಗಳಿಕೆಯನ್ನು ಸೂಚಿಸಿದರೆ ವೆಚ್ಚವು ಅವುಗಳನ್ನು ಖರೀದಿಸಲು ಭಾರತೀಯರು ಮತ್ತು ವಿದೇಶಿಯರು ವ್ಯಯಿಸುವ ಮೊತ್ತವನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಅವಹೇಳನಾಕಾರಿ ಪೋಸ್ಟ್: ಸತಾರಾದಲ್ಲಿ ಘರ್ಷಣೆ, ಮನೆಗಳಿಗೆ ಬೆಂಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...