Homeಮುಖಪುಟಬಾಲ್ಯ ವಿವಾಹ ತಡೆಯಲು ಶೀಘ್ರದಲ್ಲೇ 2,000ಕ್ಕೂ ಹೆಚ್ಚು ಜನರ ಬಂಧನ: ಹಿಮಂತ್ ಬಿಸ್ವಾ ಶರ್ಮಾ

ಬಾಲ್ಯ ವಿವಾಹ ತಡೆಯಲು ಶೀಘ್ರದಲ್ಲೇ 2,000ಕ್ಕೂ ಹೆಚ್ಚು ಜನರ ಬಂಧನ: ಹಿಮಂತ್ ಬಿಸ್ವಾ ಶರ್ಮಾ

- Advertisement -
- Advertisement -

”ಬಾಲ್ಯವಿವಾಹದ ವಿರುದ್ಧದ ಅಭಿಯಾನದ ಭಾಗವಾಗಿ ರಾಜ್ಯ ಪೊಲೀಸರು ಮುಂದಿನ ಹತ್ತು ದಿನಗಳಲ್ಲಿ 2,000 ರಿಂದ 3,000 ಪುರುಷರನ್ನು ಬಂಧಿಸಲಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.

ಅಸ್ಸಾಂನ ಸರ್ಕಾರವು ಫೆಬ್ರವರಿಯಿಂದ ರಾಜ್ಯವ್ಯಾಪಿ ಬಾಲ್ಯ ವಿವಾಹಗಳ ವಿರುದ್ಧ ಶಿಸ್ತುಕ್ರಮವನ್ನು ಕೈಗೊಂಡಿದೆ. 14-18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾದವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶರ್ಮಾ ಅವರು ಬಾಲ್ಯ ವಿವಾಹದ ವಿರುದ್ಧದ ಅಭಿಯಾನದ ಕುರಿತು ಮಾತನಾಡಿದ್ದು, ”ಆರು ತಿಂಗಳ ಹಿಂದೆ, ನಾನು ಅಸ್ಸಾಂನಲ್ಲಿ ಬಾಲ್ಯವಿವಾಹ ಪ್ರಕರಣದಲ್ಲಿ 5,000 ಜನರನ್ನು ಬಂಧಿಸಿದ್ದೆ” ಎಂದು ಹೇಳಿದರು.

”ನಾನು ಜಿ 20 ಕೊನೆಗೊಳ್ಳಲು ಕಾಯುತ್ತಿದ್ದೆ. ಇನ್ನು 10 ದಿನಗಳಲ್ಲಿ 2,000-3,000 ಪುರುಷರನ್ನು ಬಾಲ್ಯವಿವಾಹ ಪ್ರಕರಣದಲ್ಲಿ ಬಂಧಿಸುತ್ತೇನೆ. ಏಕೆಂದರೆ ನಾವು ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡಬೇಕು ಎಂದು ಕಾನೂನು ರೂಪಿಸಲಾಗಿದೆ. ಆದರೂ ಅಂತಹ ಪ್ರಕರಣಗಳು ನಡೆದರೆ ಆ ಹೆಣ್ಣುಮಕ್ಕಳು ಎಂದಿಗೂ ಪ್ರಗತಿ ಹೊಂದುವುದಿಲ್ಲ, ಅವರು ಶೋಷಣೆಗೆ ಬಲಿಯಾಗುತ್ತಲೇ ಇರುತ್ತಾರೆ” ಎಂದು ಎಚ್ಚರಿಸಿದರು.

”ನಾವು ಮುಸ್ಲಿಂ ವಿರೋಧಿ ಎಂದು ಕೆಲವರು ಹೇಳುತ್ತಾರೆ. ಆದರೆ ತ್ರಿವಳಿ ತಲಾಖ್, ಬಹುಪತ್ನಿತ್ವ ಮತ್ತು ಬಾಲ್ಯವಿವಾಹವನ್ನು ಕೊನೆಗೊಳಿಸುವ ಮೂಲಕ ಮುಸ್ಲಿಮರಿಗೆ ಒಳ್ಳೆಯದನ್ನೇ ಮಾಡಿದ್ದೇವೆ” ಎಂದು ಹೇಳಿದರು.

ಪೊಲೀಸರ ಮಾಹಿತಿ ಪ್ರಕಾರ ಬಂಧಿತರಲ್ಲಿ ಹೆಚ್ಚಿನವರು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯವರು ಎಂದು ತೋರಿಸಿದೆ.

”ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಕಾನೂನನ್ನು ತರಲಿದೆ” ಎಂದು ಜುಲೈನಲ್ಲಿ ಶರ್ಮಾ ಹೇಳಿದ್ದರು.

ಬಹುಪತ್ನಿತ್ವ – ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವ ಅಭ್ಯಾಸ – ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಅನುಮತಿಸಲಾಗಿದೆ. 1950ರ ದಶಕದಲ್ಲಿ ಹಿಂದೂ ಕೋಡ್ ಬಿಲ್ ಮೂಲಕ ಹಿಂದೂಗಳಲ್ಲಿ ಈ ಆಚರಣೆಯನ್ನು ನಿಷೇಧಿಸಲಾಯಿತು, ಅದು ಉತ್ತರಾಧಿಕಾರ, ದತ್ತು, ಮದುವೆ ಮತ್ತು ವಿಚ್ಛೇದನದಂತಹ ಅಂಶಗಳನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಬಾಲ್ಯವಿವಾಹದ ವಿರುದ್ಧ ಅಸ್ಸಾಂ ಸರ್ಕಾರದ ಶಿಸ್ತುಕ್ರಮ; 2,441 ಜನರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...