Homeಮುಖಪುಟಇಸ್ರೇಲ್‌ ದಾಳಿಗೆ ಖಂಡನೆ: ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಸೇರಿ 145 ದೇಶಗಳ ಬೆಂಬಲ

ಇಸ್ರೇಲ್‌ ದಾಳಿಗೆ ಖಂಡನೆ: ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಸೇರಿ 145 ದೇಶಗಳ ಬೆಂಬಲ

- Advertisement -
- Advertisement -

ಆಕ್ರಮಿತ ಪ್ಯಾಲೆಸ್ತೀನ್‌ನ ಪ್ರದೇಶಗಳಲ್ಲಿ ಇಸ್ರೇಲ್‌ನ ವಸಾಹತು ಚಟುವಟಿಕೆಯನ್ನು ಖಂಡಿಸಿ ವಿಶ್ವಸಂಸ್ಥೆಯು, ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿತು. ಈ ನಿರ್ಣಯದ ಪರ ಭಾರತ ಸೇರಿದಂತೆ 145 ರಾಷ್ಟ್ರಗಳು ಮತ ಚಲಾಯಿಸಿವೆ.

”ಪೂರ್ವ ಜೆರುಸಲೇಂ ಹಾಗೂ ಸಿರಿಯಾದ ಗೋಲನ್ ಸೇರಿದಂತೆ ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ವಸಾಹತು ಚಟುವಟಿಕೆ’ ಶೀರ್ಷಿಕೆಯಡಿ ಕರಡು ನಿರ್ಣಯ ಸಿದ್ಧಪಡಿಸಲಾಗಿತ್ತು. ವಿಶ್ವಸಂಸ್ಥೆಯ ವಿಶೇಷ ರಾಜಕೀಯ ಹಾಗೂ ವಸಾಹತು ವಿಮೋಚನಾ ಸಮಿತಿಯು ಇದಕ್ಕೆ ಅನುಮೋದನೆ ನೀಡಿತ್ತು.

ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಈ ನಿರ್ಣಯದ ವಿರುದ್ಧ ಏಳು ದೇಶಗಳು ಮತ ಚಲಾಯಿಸಿವೆ. 18 ದೇಶಗಳು ನಿರ್ಣಯದಿಂದ ದೂರ ಉಳಿದಿವೆ. ಅಮೆರಿಕ, ಕೆನಡಾ, ಹಂಗರಿ, ಇಸ್ರೇಲ್, ಮಾರ್ಷಲ್ ದ್ವೀಪಗಳು, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ ಹಾಗೂ ನೌರು ನಿರ್ಣಯದ ವಿರುದ್ಧ ಮತ ಚಲಾಯಿಸಿದ ರಾಷ್ಟ್ರಗಳಾಗಿವೆ.

ಚೀನಾ, ಫ್ರಾನ್ಸ್, ಜಪಾನ್, ಮಲೇಷ್ಯಾ, ಮಾಲೀವ್, ರಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬ್ರಿಟನ್, ಬಾಂಗ್ಲಾದೇಶ, ಭೂತಾನ್ ನಿರ್ಣಯ ಬೆಂಬಲಿಸಿರುವ ಪ್ರಮುಖ ದೇಶಗಳಾಗಿವೆ.

ಇಸ್ರೇಲ್ ಆಕ್ರಮಣವನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಭೂಮಿ ಮುಟ್ಟುಗೋಲು ಹಾಕಿಕೊಂಡು ಜನರ ಜೀವನೋಪಾಯಕ್ಕೆ ಅಡ್ಡಿಯುಂಟು ಮಾಡುವುದು, ಬಲವಂತವಾಗಿ ಜನರ ಸ್ಥಳಾಂತರ ಹಾಗೂ ಭೂಪ್ರದೇಶದ ಅತಿಕ್ರಮಣ ಮಾಡುವುದಕ್ಕೆ ಬಹುತೇಕ ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿದವು.

”ಇದು ಇಸ್ರೇಲ್‌ನ ಅಕ್ರಮ ನಡೆಯಾಗಿದೆ. ಅಲ್ಲದೇ, ಆ ಪ್ರದೇಶದಲ್ಲಿ ಶಾಂತಿ ಭಂಗ ಉಂಟು ಮಾಡುವ ಜತೆಗೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಅಡ್ಡಿಯಾಗಲಿದೆ” ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಕೂಡಲೇ, ಈ ಎಲ್ಲಾ ಚಟುವಟಿಕೆಗಳಿಂದ ಇಸ್ರೇಲ್ ದೂರ ಸರಿಯಬೇಕು ಎಂದು ಒತ್ತಾಯಿಸಲಾಗಿದೆ.

193 ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯತ್ವ ಪಡೆದಿವೆ. ಅಕ್ಟೋಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ 10ನೇ ತುರ್ತು ವಿಶೇಷ ಅಧಿವೇಶನದಲ್ಲಿ ಗಾಜಾ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಜೋರ್ಡಾನ್ ನಿರ್ಣಯ ಮಂಡಿಸಿತ್ತು. ಬಾಂಗ್ಲಾದೇಶ, ಮಾಲೀವ್, ಪಾಕಿಸ್ತಾನ, ರಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳು ಜೋರ್ಡಾನ್ ನಿರ್ಧಾರಕ್ಕೆ ಸಹಮತ ಸೂಚಿಸಿದ್ದವು.

ಗಾಜಾ ಪಟ್ಟಿ ಜನರ ರಕ್ಷಣೆ ಹಾಗೂ ಮಾನವೀಯ ಕಟ್ಟುಪಾಡುಗಳನ್ನು ಕಾಪಾಡುವುದಕ್ಕೆ ಸಂಬಂಧಿಸಿದ ಈ ನಿರ್ಣಯದ ಪರ 120 ದೇಶಗಳು ಮತ ಚಲಾಯಿಸಿದ್ದವು. 14 ದೇಶಗಳು ವಿರೋಧಿಸಿದ್ದರೆ, 45 ರಾಷ್ಟ್ರಗಳು ದೂರ ಉಳಿದಿದ್ದವು. ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿ ಬಗ್ಗೆ ನಿರ್ಣಯದಲ್ಲಿ ಪ್ರಸ್ತಾಪಿಸಿಲ್ಲ ಎಂದು ಭಾರತವು ದೂರ ಉಳಿದಿತ್ತು.

ಇದನ್ನೂ ಓದಿ: ಪ್ಯಾಲೆಸ್ತೀನ್ ಪರ ಲಂಡನ್‌ನಲ್ಲಿ ಬೃಹತ್ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...