Homeಮುಖಪುಟಜಾಗತಿಕ ಸಂತೋಷ ಸೂಚ್ಯಂಕದಲ್ಲಿ 126ನೇ ಸ್ಥಾನಕ್ಕಿಳಿದ ಭಾರತ

ಜಾಗತಿಕ ಸಂತೋಷ ಸೂಚ್ಯಂಕದಲ್ಲಿ 126ನೇ ಸ್ಥಾನಕ್ಕಿಳಿದ ಭಾರತ

- Advertisement -
- Advertisement -

2024ರ ಜಾಗತಿಕ ಸಂತೋಷ ಸೂಚ್ಯಂಕದಲ್ಲಿ ಭಾರತವು 143 ರಾಷ್ಟ್ರಗಳಲ್ಲಿ 126ನೇ ಸ್ಥಾನದಲ್ಲಿದ್ದು, ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ.

ಸತತ ಏಳನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದಲ್ಲೇ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವೀಡನ್, ಇಸ್ರೇಲ್, ನೆದರ್ಲ್ಯಾಂಡ್ಸ್, ನಾರ್ವೆ, ಲಕ್ಸೆಂಬರ್ಗ್, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರೇಲಿಯಾ ಇತರ ಅಗ್ರ 10 ದೇಶಗಳ ಪಟ್ಟಿಯಲ್ಲಿದೆ.

ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಸಂತೋಷದ ದಿನವನ್ನು ಗುರುತಿಸಲು ಪ್ರಕಟಿಸಿದ ಸಂಶೋಧನಾ ವರದಿ  ಪ್ರಕಾರ, ಲಿಬಿಯಾ, ಇರಾಕ್, ಪ್ಯಾಲೆಸ್ತೀನ್‌ನಂತಹ ದೇಶಗಳ ಹಿಂದೆ ಭಾರತವು ಪಟ್ಟಿಯಲ್ಲಿ 126ನೇ ಸ್ಥಾನದಲ್ಲಿದೆ. ಆಕ್ಸ್‌ಫರ್ಡ್ ವೆಲ್‌ಬಿಯಿಂಗ್‌ ರಿಸರ್ಚ್‌ ಸೆಂಟರ್‌ (Oxford Wellbeing Research Centre), ಯುಎನ್ ಸಸ್ಟೆನೇಬಲ್ ಡೆವಲಪ್‌ಮೆಂಟ್‌ ಶೊಲ್ಯೂಷನ್‌ ನೆಟ್‌ವರ್ಕ್ (UN Sustainable Development Solutions Network) ಮತ್ತು WHRನ ಸಂಪಾದಕೀಯ ಮಂಡಳಿ ಒಂದಾಗಿ ಈ ವರದಿಯನ್ನು ಸಿದ್ದಪಡಿಸಿದೆ.

ಭಾರತದಲ್ಲಿ ಯುವಕರು ಸಂತೋಷದಿಂದ ಇದ್ದಾರೆ, ಆದರೆ ಕೆಳ ಮಧ್ಯಮ ವಯಸ್ಕರು ಕಡಿಮೆ ಸಂತೋಷವನ್ನು ಹೊಂದಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ವಿಶ್ವ ಸಂತೋಷದ ವರದಿಯನ್ನು ಪ್ರಕಟಿಸಿದ ನಂತರ ಅಮೆರಿಕ ಇದೇ ಮೊದಲ ಬಾರಿಗೆ 20ನೇ ಸ್ಥಾನದಿಂದ 23ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಫ್ಘಾನಿಸ್ತಾನವು ಒಟ್ಟಾರೆ ಶ್ರೇಯಾಂಕದಲ್ಲಿ ವಿಶ್ವದ ‘ಅತೃಪ್ತಿಕರ’ ರಾಷ್ಟ್ರವಾಗಿ ಕೆಳ ಭಾಗದಲ್ಲಿದೆ, ಈ ಪಟ್ಟಿಯಲ್ಲಿ ಪಾಕಿಸ್ತಾನ 108ನೇ ಸ್ಥಾನದಲ್ಲಿದೆ. ಪೂರ್ವ ಯುರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ದೇಶಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡರೆ ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್ ದೇಶಗಳ ಶ್ರೇಯಾಂಕ ತೀವ್ರವಾಗಿ ಕುಸಿದಿದೆ.

ಭಾರತದಲ್ಲಿ ವೃದ್ಧಾಪ್ಯದಲ್ಲಿ ವಯಸ್ಸಾದ ಪುರುಷರು ವಯಸ್ಸಾದ ಮಹಿಳೆಯರಿಗಿಂತ ಜೀವನದಲ್ಲಿ ಹೆಚ್ಚು ತೃಪ್ತರಾಗಿದ್ದಾರೆ ಆದರೆ ಎಲ್ಲಾ ಇತರ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳುವಾಗ ವಯಸ್ಸಾದ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜೀವನ ತೃಪ್ತಿಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.

ಭಾರತದಲ್ಲಿ, ಮಾದ್ಯಮಿಕ ಅಥವಾ ಉನ್ನತ ಶಿಕ್ಷಣವನ್ನು ಹೊಂದಿರುವ ಹಿರಿಯ ವಯಸ್ಕರು ಮತ್ತು ಸವರ್ಣೀಯ ಜಾತಿಗರು ಔಪಚಾರಿಕ ಶಿಕ್ಷಣವಿಲ್ಲದ ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನರಿಗಿಂತ ಹೆಚ್ಚಿನ ಜೀವನ ತೃಪ್ತಿಯನ್ನು ಪಡೆಯುತ್ತಾರೆ.

ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ವಯಸ್ಕ ಜನಸಂಖ್ಯೆಯು ಭಾರತದಲ್ಲಿದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 140 ಮಿಲಿಯನ್ ಭಾರತೀಯರಿದ್ದಾರೆ. ಹೆಚ್ಚಿನ ವಯಸ್ಸಿನ ಭಾರತೀಯರ ಸರಾಸರಿ ಬೆಳವಣಿಗೆ ದರವು ಒಟ್ಟಾರೆ ಜನಸಂಖ್ಯೆಯ ಬೆಳವಣಿಗೆಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯು ಉಲ್ಲೇಖಿಸಿದೆ.

ಇದನ್ನು ಓದಿ: ಟಿಎಂ ಕೃಷ್ಣಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ವಿರೋಧ: ಬಲಪಂಥೀಯ ದ್ವೇಷದ ಭಾಗ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...