Homeಮುಖಪುಟಚುನಾವಣಾ ಬಾಂಡ್ ಸಂಖ್ಯೆಗಳು ಸೇರಿದಂತೆ ಎಲ್ಲಾ ವಿವರಗಳನ್ನು ಚು. ಆಯೋಗಕ್ಕೆ ಸಲ್ಲಿಸಿದ ಎಸ್‌ಬಿಐ

ಚುನಾವಣಾ ಬಾಂಡ್ ಸಂಖ್ಯೆಗಳು ಸೇರಿದಂತೆ ಎಲ್ಲಾ ವಿವರಗಳನ್ನು ಚು. ಆಯೋಗಕ್ಕೆ ಸಲ್ಲಿಸಿದ ಎಸ್‌ಬಿಐ

- Advertisement -
- Advertisement -

ವಿಶಿಷ್ಟ ಸಂಖ್ಯೆಗಳು ಅಥವಾ ಸೀರಿಯಲ್ ನಂಬರ್‌ಗಳು ಸೇರಿದಂತೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

‘ಆಲ್ಪಾ ನ್ಯೂಮರಿಕ್’ ಎಂಬ ವಿಶೇಷ ಸಂಖ್ಯೆಗಳು ಚುನಾವಣಾ ಬಾಂಡ್‌ಗಳ ಖರೀದಿದಾರರು ಮತ್ತು ಬಾಂಡ್‌ಗಳನ್ನು ನಗದೀಕರಿಸಿಕೊಂಡ ರಾಜಕೀಯ ಪಕ್ಷಗಳನ್ನು ಹೊಂದಾಣಿಕೆ ಮಾಡಲು ಅನುವು ಮಾಡಿಕೊಡುತ್ತದೆ.

ಅಫಿಡವಿಟ್ ಪ್ರಕಾರ, ಎಸ್‌ಬಿಐ ತನ್ನ ಬಳಿ ಇರುವ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಮಾರ್ಚ್ 21 ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಒದಗಿಸಿದೆ.

https://x.com/LiveLawIndia/status/1770764128392556871?s=20

ಬಾಂಡ್‌ ಖರೀದಿದಾರರ ವಿವರಗಳು : ಸೀರಿಯಲ್ ನಂಬರ್ ಯುಆರ್‌ಎನ್ ನಂಬರ್, ಜರ್ನಲ್ ದಿನಾಂಕ, ಖರೀದಿಯ ದಿನಾಂಕ, ಮುಕ್ತಾಯ ದಿನಾಂಕ, ಖರೀದಿದಾರರ ಹೆಸರು, ಪ್ರಿಫಿಕ್ಸ್, ಬಾಂಡ್ ಸಂಖ್ಯೆ, ಮುಖಬೆಲೆ, ಬಾಂಡ್ ನೀಡಿದ ಎಸ್‌ಬಿಐ ಶಾಖೆಯ ಕೋಡ್, ಬಾಂಡ್‌ನ ಟೆಲ್ಲರ್, ಸ್ಟೇಟಸ್.

ಬಾಂಡ್‌ ನಗದೀಕರಿಸಿದ ರಾಜಕೀಯ ಪಕ್ಷಗಳ ವಿವರಗಳು : ಕ್ರಮಸಂಖ್ಯೆ, ನಗದೀಕರಣದ ದಿನಾಂಕ, ರಾಜಕೀಯ ಪಕ್ಷದ ಹೆಸರು, ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು, ಪ್ರಿಫಿಕ್ಸ್‌, ಬಾಂಡ್ ಸಂಖ್ಯೆ, ಮುಖಬೆಲೆ, ಪಾವತಿ ಶಾಖೆ, ಕೋಡ್ ಮತ್ತು ಪಾವತಿ ಟೆಲ್ಲರ್.

ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸಾರ್ವಜನಿಕಗೊಳಿಸುತ್ತಿಲ್ಲ ಇದು ಖಾತೆಯ ಭದ್ರತೆಗೆ ಸಮಸ್ಯೆ ಉಂಟು ಮಾಡಬಹುದು ಎಂದು ಅಫಿಡವಿಟ್‌ನಲ್ಲಿ ಎಸ್‌ಬಿಐ ಹೇಳಿದೆ. ಅದೇ ರೀತಿ, ಖರೀದಿದಾರರ ಕೆವೈಸಿ ವಿವರಗಳನ್ನು ಕೂಡ ಸಾರ್ವಜನಿಕಗೊಳಿಸುತ್ತಿಲ್ಲ. ದೇಣಿಗೆ ಪಡೆದ ರಾಜಕೀಯ ಪಕ್ಷಗಳನ್ನು ಗುರುತಿಸಲು ಅವುಗಳ ಅಗತ್ಯವಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.

ಫೆ.15ರಂದು ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದಿದ್ದ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಆ ಬಳಿಕ ತನ್ನ ಬಳಿ ಇರುವ ಬಾಂಡ್‌ಗಳ ಕುರಿತ ಎಲ್ಲಾ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು. ಆರಂಭದಲ್ಲಿ ಸಮಯ ವಿಸ್ತರಣೆ ಕೋರಿದ್ದ ಎಸ್‌ಬಿಐ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ಮಾಹಿತಿ ಒದಗಿಸಿತ್ತು. ಆ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಆದರೆ, ಎಸ್‌ಬಿಐ ಯಾವ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಮತ್ತು ರಾಜಕೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ ಎಷ್ಟು ಎಂಬುವುದನ್ನು ಮಾತ್ರ ಬಹಿರಂಗಪಡಿಸಿತ್ತು. ಯಾವ ಕಂಪನಿ ಅಥವಾ ವ್ಯಕ್ತಿಗಳು ಯಾವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎಂದು ತಿಳಿಯಲು ಸಹಕಾರಿಯಾಗುವ ಆಲ್ಫಾ ನ್ಯೂಮರಿಕ್ ನಂಬರ್ ಅಥವಾ ಸೀರಿಯಲ್ ನಂಬರ್‌ಗಳನ್ನು ಕೊಟ್ಟಿರಲಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಸ್‌ಬಿ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಎಲ್ಲಾ ಮಾಹಿತಿಗಳನ್ನು ಒದಗಿಸಿರುವುದಾಗಿ ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಇದನ್ನೂ ಓದಿ : ಚುನಾವಣಾ ಬಾಂಡ್‌ಗಳಲ್ಲದೆ 7,726 ಕೋಟಿ ರೂ.ದೇಣಿಗೆ: 65% ದೇಣಿಗೆ ಬಿಜೆಪಿ ಪಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...