Homeಮುಖಪುಟಪೊನ್ಮುಡಿ ಸಂಪುಟ ಮರು ಸೇರ್ಪಡೆಗೆ ನಿರಾಕರಣೆ; ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕಿಡಿ

ಪೊನ್ಮುಡಿ ಸಂಪುಟ ಮರು ಸೇರ್ಪಡೆಗೆ ನಿರಾಕರಣೆ; ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕಿಡಿ

- Advertisement -
- Advertisement -

ಕ್ರಿಮಿನಲ್ ಶಿಕ್ಷೆಗೆ ನ್ಯಾಯಾಲಯ ವಿರಾಮ ನೀಡಿದರೂ, ಡಿಎಂಕೆ ನಾಯಕ ಪೊನ್ಮುಡಿ ಅವರನ್ನು ಮತ್ತೆ ಸಚಿವ ಸ್ಥಾನಕ್ಕೆ ಸೇರಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ ಆರ್‌ಎನ್‌ ರವಿ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ವಾಗ್ದಾಳಿ ನಡೆಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ‘ರಾಜ್ಯಪಾಲರು ಸುಪ್ರೀಂಕೋರ್ಟ್ ಅನ್ನು ಧಿಕ್ಕರಿಸುತ್ತಿದ್ದಾರೆ; ಅವರೇ ಸಂವಿಧಾನವನ್ನು ಅನುಸರಿಸದಿದ್ದರೆ, ಸರ್ಕಾರ ಏನು ಮಾಡುತ್ತದೆ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಇದೀಗ ಡಿಎಂಕೆಯ ಕೆ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲರಿಗೆ ನಾಳೆಯವರೆಗೆ ಒಂದು ದಿನದ ಗಡುವು ನೀಡಿದೆ.

ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ರವಿ ನಿರಾಕರಿಸಿದ ಹಿನ್ನೆಲೆಯಲ್ಲಿ ಎಂಕೆ ಸ್ಟಾಲಿನ್ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಆಸ್ತಿ ಪ್ರಕರಣದಲ್ಲಿ ಅವರ ಖುಲಾಸೆಯನ್ನು ರದ್ದುಗೊಳಿಸಿದ ನಂತರ ಪೊನ್ಮುಡಿ ಅವರನ್ನು ಶಾಸಕರಾಗಿ ಅನರ್ಹಗೊಳಿಸಲಾಯಿತು. ಅದರ ನಂತರ, ಸುಪ್ರೀಂ ಕೋರ್ಟ್ ಅವರ ಅಪರಾಧ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಿದೆ. ರಾಜ್ಯ ಸರ್ಕಾರವು ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ಮುಂದಾಯಿತು. ಆದರೆ, ರಾಜ್ಯಪಾಲರು ಅವರ ಅಪರಾಧವನ್ನು ಅಮಾನತುಗೊಳಿಸಲಾಗಿದೆ ಮತ್ತು ಬದಿಗಿಟ್ಟಿಲ್ಲ ಎಂದು ಒತ್ತಿ ಹೇಳುವ ಮೂಲಕ, ರಾಜ್ಯ ಸರ್ಕಾರದೊಂದಿಗಿನ ತಮ್ಮ ಮೊಂಡುತನ ಮುಂದುವರಿಸಿದ್ದರು.

“ರಾಜ್ಯಪಾಲರಿಗೆ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುವಂತೆ ನಾವು ಆದೇಶವನ್ನು ನೀಡುತ್ತೇವೆ. ತಮಿಳುನಾಡು ರಾಜ್ಯಪಾಲರು ಮತ್ತು ಅವರ ನಡವಳಿಕೆಯ ಬಗ್ಗೆ ನಾವು ಗಂಭೀರವಾಗಿ ಚಿಂತಿಸುತ್ತೇವೆ. ಅವರಿಗೆ ಇದನ್ನು ಬಿಟ್ಟು ಮಾಡಲು ಬೇರೆ ಯಾವುದೇ ಕೆಲಸವಿಲ್ಲ. ನಾವು ಕಣ್ಣು ತೆರೆದಿದ್ದೇವೆ ಮತ್ತು ನಾಳೆ ನಾವು ನಿರ್ಧರಿಸುತ್ತೇವೆ; ನಾವು ಗಂಭೀರವಾಗಿ ಚಿಂತಿಸುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ತೀವ್ರ ವಾಗ್ದಾಳಿ ನಡೆಸಿದರು.

‘ರಾಜ್ಯಪಾಲರು ಸುಪ್ರೀಂ ಕೋರ್ಟ್ ಅನ್ನೇ ಧಿಕ್ಕರಿಸುತ್ತಿದ್ದಾರೆ; ಅವರಿಗೆ ಸಲಹೆ ನೀಡಿದವರು ಸರಿಯಾಗಿ ಸಲಹೆ ನೀಡಿಲ್ಲ. ನಾನು ವ್ಯಕ್ತಿ/ಸಚಿವರ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರಬಹುದು. ಆದರೆ, ನಾವು ಸಾಂವಿಧಾನಿಕ ಕಾನೂನಿನ ಪ್ರಕಾರ ಹೋಗಬೇಕು. ಮುಖ್ಯಮಂತ್ರಿ ಹೇಳುತ್ತಾರೆ ನಾವು ಈ ವ್ಯಕ್ತಿಯನ್ನು ನೇಮಿಸಲು ಬಯಸುತ್ತೇವೆ, ರಾಜ್ಯಪಾಲರು ಸಂಸದೀಯ ಪ್ರಜಾಪ್ರಭುತ್ವದ ಭಾಗವಾಗಿ ಹಾಗೆ ಮಾಡಬೇಕು. ಮುಖ್ಯಮಂತ್ರಿಗಳು ರಾಜ್ಯದ ಮುಖ್ಯಸ್ಥರಾಗಿದ್ದಾರೆ’ ಎಂದರು.

2021 ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ, ಡಿಎಂಕೆ ಸರ್ಕಾರವು ತನ್ನ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ರವಿ ಅವರ ವಿರುದ್ಧ ಪದೇಪದೇ ಆರೋಪಿಸಿದೆ. ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲರು ನಿರಾಕರಿಸಿದ್ದು, ಅವರ ಕಚೇರಿ ಮತ್ತು ಎಂಕೆ ಸ್ಟಾಲಿನ್ ಸರ್ಕಾರದ ನಡುವಿನ ಮುಖಾಮುಖಿಯ ಸರಣಿಯಲ್ಲಿ ಇತ್ತೀಚಿನ ಬೆಳವಣಿಗೆಗಳಲ್ಲಿ ಒಂದಾಗಿದೆ.

ಈ ಹಿಂದೆ, ರಾಜಭವನದ ಮಸೂದೆಗಳನ್ನು ತೆರವುಗೊಳಿಸಲು ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಸ್ಟಾಲಿನ್ ಪತ್ರ ಬರೆದು, ರವಿ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಮನವಿ ಮಾಡಿದ್ದರು.

ಇದನ್ನೂ ಓದಿ; ಶಾಸಕ ಕೆ. ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...