Homeಮುಖಪುಟ4 ವರ್ಷದೊಳಗಿನ ಮಕ್ಕಳಿಗೆ ಶೀತ ನಿವಾರಕ ಔಷಧದ ಮಿಶ್ರಣ ನೀಡಬೇಡಿ: CDSCO

4 ವರ್ಷದೊಳಗಿನ ಮಕ್ಕಳಿಗೆ ಶೀತ ನಿವಾರಕ ಔಷಧದ ಮಿಶ್ರಣ ನೀಡಬೇಡಿ: CDSCO

- Advertisement -
- Advertisement -

ಭಾರತೀಯ ಔಷಧ ನಿಯಂತ್ರಕ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಶಿಶುಗಳು ಮತ್ತು 4 ವರ್ಷದೊಳಗಿನ ಮಕ್ಕಳಿಗೆ ವ್ಯಾಪಕವಾಗಿ ಬಳಸುವ ಶೀತ ನಿವಾರಕ ಕಾಕ್ಟೈಲ್ ಮೆಡಿಸಿನ್  ಮಿಶ್ರಣವನ್ನು ನೀಡದಂತೆ ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ರಾಜ್ಯದ ಡ್ರಗ್ ಕಂಟ್ರೋಲರ್‌ಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ತಯಾರಕರಿಗೆ ಈ ಕುರಿತು ಮಹತ್ವದ ಸೂಚನೆಯನ್ನು ನೀಡಿದೆ. ಜೂನ್‌ನಲ್ಲಿ ತಜ್ಞರ ಸಮಿತಿ ನೀಡಿದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಮತ್ತು ಸಿಡಿಎಸ್‌ಸಿಒ ಮುಖ್ಯಸ್ಥ ಡಾ ರಾಜೀವ್ ಸಿಂಗ್ ರಘುವಂಶಿ ಹೇಳಿದ್ದಾರೆ.

ಶೀತ ವಿರೋಧಿ ಔಷಧದಲ್ಲಿ ಕ್ಲೋರ್ಫೆನಿರಮೈನ್ ಮೆಲೇಟ್ ಮತ್ತು ಫೀನೈಲ್ಫ್ರಿನ್ ಹೈಡ್ರೋಕ್ಲೋರೈಡ್‌ನ ‘ಫಿಕ್ಸೆಡ್-ಡೋಸ್  (ಎಫ್‌ಡಿಸಿ) ಬಳಸಲಾಗುತ್ತದೆ. ರಾಯಿಟರ್ಸ್ ಪ್ರಕಾರ, ಸಾಮಾನ್ಯ ಶೀತ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಎಫ್‌ಡಿಸಿಯನ್ನು ಸಿರಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಬಳಸಲಾಗುತ್ತದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಅಪೆಕ್ಸ್ ಹೆಲ್ತ್ ರೆಗ್ಯುಲೇಟರಿ ಏಜೆನ್ಸಿಯು ಕ್ಲೋರ್‌ಫೆನಿರಮೈನ್ ಮಲೇಟ್ ಐಪಿ 2ಎಂಜಿ ಮತ್ತು ಫೆನೈಲ್‌ಫ್ರಿನ್ ಎಚ್‌ಸಿಐ ಐಪಿ 5ಎಂಜಿ ಡ್ರಾಪ್ಸ್‌ನ ಸ್ಥಿರ ಔಷಧ ಸಂಯೋಜನೆಯ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಮಿಶ್ರಣವು  ಶಿಶುಗಳಿಗೆ ಅನುಮೋದಿತವಲ್ಲ ಎಂದು ಹೇಳಿದೆ.

ಭಾರತದಲ್ಲಿ ತಯಾರಿಸಲಾದ ಕೆಮ್ಮುವಿನ ಸಿರಪ್‌ಗಳ ಸೇವನೆ ಬಳಿಕ ವಿದೇಶದಲ್ಲಿ ಮಕ್ಕಳ ಸಾವುಗಳು ವರದಿ ಬಳಿಕ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ಗಳು ಪರಿಶೀಲನೆಗೆ ಒಳಪಟ್ಟಿವೆ. 2022ರಲ್ಲಿ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್‌ನಲ್ಲಿ 141 ಮಕ್ಕಳ ಸಾವುಗಳು ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳಿಗೆ ಸಂಬಂಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ, ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಯು ತಯಾರಿಸಿದ ಡಿಕೊಂಜೆಸ್ಟೆಂಟ್ ಮತ್ತು ಕೆಮ್ಮಿನ ಸಿರಪ್ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದರು. ಆ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಈ ಸಿರಪ್‌ಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ದೆಹಲಿಯಲ್ಲಿರುವ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತನಿಖೆಗೆ ಆದೇಶಿಸಿತ್ತು.

ಈ ಡ್ರಗ್ಸ್‌ನ್ನು ಹರ್ಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಕಂಪನಿಯಲ್ಲಿ ತಯಾರಿಸಲಾಗುತ್ತಿತ್ತು. ಇದನ್ನು ಸೇವಿಸಿದ ಪರಿಣಾಮ ಭಾರೀ ಪ್ರಮಾಣದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ಔಷಧಿ ಸೇವಿಸಿದ ಮಕ್ಕಳು ಮೂತ್ರಪಿಂಡದ ಹಾನಿ ಸಮಸ್ಯೆಯಿಂದ ಪ್ರಾಣ ಬಿಟ್ಟಿದ್ದರು ಎನ್ನಲಾಗಿತ್ತು.

ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪ: ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿಯೋರ್ವರ ಪುತ್ರ ಸೇರಿ ಮತ್ತಿಬ್ಬರ ಬಂಧನ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...