Homeಮುಖಪುಟಸಿಐಎಸ್ಎಫ್ ಯೋಧರ ಹೆಗಲಿಗೆ ಸಂಸತ್ ಭದ್ರತಾ ಜವಾಬ್ದಾರಿ: ಕೇಂದ್ರ ಸರ್ಕಾರ

ಸಿಐಎಸ್ಎಫ್ ಯೋಧರ ಹೆಗಲಿಗೆ ಸಂಸತ್ ಭದ್ರತಾ ಜವಾಬ್ದಾರಿ: ಕೇಂದ್ರ ಸರ್ಕಾರ

- Advertisement -
- Advertisement -

ಡಿಸೆಂಬರ್ 13ರಂದು ಲೋಕಸಭೆಯಲ್ಲಿ ಸಂಭವಿಸಿದ ಭಾರಿ ಭದ್ರತಾ ಉಲ್ಲಂಘನೆ ನಂತರ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ದೆಹಲಿ ಪೊಲೀಸರ ಜತೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್ಎಫ್) ರಕ್ಷಣೆಗೆ ನಿಯೋಜಿಸಲು ಮುಂದಾಗಿದೆ.

ದೆಹಲಿ ಪೊಲೀಸರ ಬದಲಿಗೆ ಸಿಐಎಸ್ಎಫ್ ಅನ್ನು ಸಂಸತ್ ಉಸ್ತುವಾರಿ ಏಜೆನ್ಸಿಯಾಗಿ ಬದಲಾಯಿಸಲಾಗುತ್ತಿದ್ದು, ಆವರಣ ಪ್ರವೇಶಿಸುವ ಪ್ರತಿಯೊಬ್ಬರನ್ನು ಪರೀಕ್ಷಿಸುವುದು ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಈ ತಂಡ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವಾಲಯ ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಕಟ್ಟಡದೊಳಗಿನ ಭದ್ರತೆಯು ಲೋಕಸಭೆಯ ಸಚಿವಾಲಯದ ಜವಾಬ್ದಾರಿಯಾಗಿ ಮುಂದುವರಿಯುತ್ತದೆ. ಆದರೆ, ಹೊರಗಿನ ರಕ್ಷಣಾ ಪರಿಧಿಯನ್ನು ಪೊಲೀಸರು ಮುಂದುವರಿಸುತ್ತಾರೆ. ವಿಭಿನ್ನ ಏಜೆನ್ಸಿಗಳು ಪರಸ್ಪರರ ಸಹಕಾರ ನೀಡುವ ಮೂಲಕ ಪ್ರೋಟೋಕಾಲ್‌ಗಳನ್ನು ಸುವ್ಯವಸ್ಥಿತಗೊಳಿಸುವ ಪ್ರಯತ್ನವೆಂದು ಈ ಬದಲಾವಣೆಯನ್ನು ಪರಿಗಣಿಸಲಾಗಿದ್ದು, ಗೃಹ ಸಚಿವಾಲಯದ ಆದೇಶದ ವಿವರ ‘ಭದ್ರತಾ ಸ್ವೀಪ್’ ನಂತರ ಇದನ್ನು ಜಾರಿಗೊಳಿಸಲಾಗುವುದು ಎನ್ನಲಾಗಿದೆ.

ಸಿಐಎಸ್ಎಫ್, ದೇಶದ ಸೂಕ್ಷ್ಮ ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಮಗ್ರ ಭದ್ರತಾ ರಕ್ಷಣೆ ಒದಗಿಸುತ್ತದೆ. ಪ್ರಸ್ತುತ ವಿಮಾನ ನಿಲ್ದಾಣಗಳು, ಬಂದರುಗಳು, ಪ್ರಮುಖ ಐಟಿ ಕಾರಿಡಾರ್‌ಗಳು ಮತ್ತು ಪರಮಾಣು ಘಟಕಗಳು ಒಳಗೊಂಡಂತೆ 350ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾವಲು ಕಾಯುತ್ತಿದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪ್ರವೇಶ ಪಾಸ್‌ಗಳ ಮೂಲಕ ಇಬ್ಬರು ಯುವಕರು, ಡಿಸೆಂಬರ್ 13 ರಂದು ಲೋಕಸಭೆಯ ಸಂದರ್ಶಕರ ಗ್ಯಾಲರಿ ಮೂಲಕ ಸದನ ಪ್ರವೇಶಿಸಿದ್ದರು. ಜತೆಗೆ, ಕೆಳ ಮನೆಯಲ್ಲಿ ಹಳದಿ ಹೊಗೆ ಡಬ್ಬಿಗಳನ್ನು ಹಾಕಿ ಸಂಸತ್ ಸದಸ್ಯರಿಗೆ ಆತಂಕ ಉಂಟು ಮಾಡಿದ್ದರು. ಉಳಿದ ಒಬ್ಬ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಗಡೆ ಕೆಂಪು ಮತ್ತು ಹಳದಿ ಹೊಗೆ ಕ್ಯಾನ್‌ಗಳನ್ನು ಸ್ಪೋಟಿಸಿದ್ದರು.
ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಕರ್ನಾಟಕದ ಡಿ. ಮನೋರಂಜನ್ ಲೋಕಸಭೆಯ ಒಳಗೆ ಪ್ರವೇಶಿಸಿ ಹಳದಿ ಹೊಗೆ ಡಬ್ಬಗಳನ್ನು ಸ್ಟೋಟಿಸಿದ್ದರು.

ಈಗಾಗಲೇ ಘಟನೆ ಸಂಬಂಧ ಏಳಕ್ಕೂ ಹೆಚ್ಚು ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆಪಾದಿತ ಮಾಸ್ಟರ್ ಮೈಂಡ್ ಸೇರಿದಂತೆ ಇನ್ನಿಬ್ಬರು ಸಹ ಬಂಧನದಲ್ಲಿದ್ದಾರೆ. ಆದರೆ, ಇಡೀ ಘಟನೆಯು ಭಾರಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರ ಕೊಡಬೇಕು ಎಂದು ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಧರಣಿ ನಡೆಸುತ್ತಿದ್ದು, 140ಕ್ಕೂ ಹೆಚ್ಚು ಸಂಸದರು ಈ ಗದ್ದಲದ ಕಾರಣಕ್ಕಾಗಿ ಚಳಿಗಾಲ ಅಧಿವೇಶನದಿಂದ ಅಮಾನತಾಗಿದ್ದಾರೆ.

ಇದನ್ನೂ ಓದಿ; ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...