Homeಮುಖಪುಟನಿರ್ಲಕ್ಷ್ಯದ ಸಾವು: ವೈದ್ಯರ ಶಿಕ್ಷೆ ಪ್ರಮಾಣ ಕಡಿತಗೊಳಿಸಲಿದೆ ಹೊಸ ಕ್ರಿಮಿನಲ್ ಕಾನೂನು

ನಿರ್ಲಕ್ಷ್ಯದ ಸಾವು: ವೈದ್ಯರ ಶಿಕ್ಷೆ ಪ್ರಮಾಣ ಕಡಿತಗೊಳಿಸಲಿದೆ ಹೊಸ ಕ್ರಿಮಿನಲ್ ಕಾನೂನು

- Advertisement -
- Advertisement -

ಚಿಕಿತ್ಸೆ ವೇಳೆ ನಿರ್ಲಕ್ಷ್ಯದಿಂದ ರೋಗಿಯ ಸಾವು ಸಂಭವಿಸಿದರೆ ವೈದ್ಯರಿಗೆ ನೀಡುವ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸುವ ಅಂಶ ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡ ಭಾರತೀಯ ನ್ಯಾಯ(ಎರಡನೆಯ) ಸಂಹಿತೆ ಒಳಗೊಂಡಿದೆ.

ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ನಿರ್ಲಕ್ಷ್ಯದಿಂದ ರೋಗಿಯು ಸಾವನ್ನಪ್ಪಿದ್ದರೆ ತಪ್ಪಿತಸ್ಥರಿಗೆ ವಿಧಿಸುವ ಶಿಕ್ಷೆ ಪ್ರಮಾಣವನ್ನು 5 ವರ್ಷಗಳ ಜೈಲುವಾಸಕ್ಕೆ ಹೆಚ್ಚಿಸಿದರೆ, ಅಂತಹ ಮರಣವು ವೈದ್ಯರಿಂದ ಸಂಭವಿಸಿದರೆ ವಿಧಿಸುವ ಶಿಕ್ಷೆ ಪ್ರಮಾಣವನ್ನು 2 ವರ್ಷಗಳ ಜೈಲು ಶಿಕ್ಷೆಗೆ ಸೀಮಿತಗೊಳಿಸಲಾಗಿದೆ.

ಪ್ರಸ್ತುತ ಇರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾನೂನಿನ ಸೆಕ್ಷನ್ 304ಎ ಪ್ರಕಾರ, ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದರೆ ತಪ್ಪಿತಸ್ಥರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಸೆಕ್ಷನ್ 304ಎ ಐಪಿಸಿಯಲ್ಲಿ ವೈದ್ಯರಿಗೆ ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ವಿಧಿಸುವ ಶಿಕ್ಷೆ ಪ್ರಮಾಣದಲ್ಲಿ ಪ್ರತ್ಯೇಕ ವರ್ಗೀಕರಣವಿಲ್ಲ. ಆದರೆ, ಹೊಸ ನ್ಯಾಯ ಸಂಹಿತೆ ವೈದ್ಯರು ಮತ್ತು ಇತರರಿಂದ ಸಂಭವಿಸುವ ಸಾವುಗಳು ಎಂಬ ಎರಡು ವರ್ಗೀಕರಣ ಮಾಡಿದೆ.

ಭಾರತೀಯ ನ್ಯಾಯ ಸಂಹಿತೆಯ ಕಲಂ 106ರ ಪ್ರಕಾರ, ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದರೆ ನೀಡಲಾಗುವ ಗರಿಷ್ಠ ಶಿಕ್ಷೆಯನ್ನು 2 ವರ್ಷಗಳ ಜೈಲು ಶಿಕ್ಷೆಯಿಂದ 5 ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸಲಾಗಿದೆ. ಆದರೆ, ವೈದ್ಯರಿಗೆ ಗರಿಷ್ಠ ಶಿಕ್ಷೆ 2 ವರ್ಷಗಳ ಜೈಲುವಾಸಕ್ಕೆ ಮಿತಿಗೊಳಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದ ಸಾವಿನ ಪ್ರಕರಣಗಳಲ್ಲಿ ವೈದ್ಯರಿಗೆ ದಂಡವನ್ನೂ ವಿಧಿಸಬಹುದು.

ಚಳಿಗಾಲದ ಅಧಿವೇಶನದದಲ್ಲಿ ಪರಿಚಯಿಸಲಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತೆಯ ಆರಂಭಿಕ ಆವೃತ್ತಿಯಲ್ಲಿ ವೈದ್ಯರಿಗೆ ಸಂಬಂಧಿಸಿದಂತೆ ನೀಡುವ ಶಿಕ್ಷೆಯಲ್ಲಿ ಯಾವುದೇ ವರ್ಗೀಕರಣವಿರಲಿಲ್ಲ. ಬಳಿಕ ಭಾರತೀಯ ವೈದ್ಯಕೀಯ ಸಂಘದ ಮನವಿಯನ್ನು ಪರಿಗಣಿಸಿ ತಿದ್ದುಪಡಿ ತರಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹೊಸ ಭಾರತೀಯ ನ್ಯಾಯ ಸಂಹಿತೆಯ ಕಲಂ 106ರಲ್ಲಿ ‘ಹಿಟ್ ಅಂಡ್ ರನ್’ ಪ್ರಕರಣಗಳಿಗೂ ಕಠಿಣ ಶಿಕ್ಷೆಯನ್ನು ಸೂಚಿಸಲಾಗಿದೆ. ವಾಹನ ಚಾಲಕ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದರೆ ಮತ್ತು ಅದನ್ನು ಪೊಲೀಸ್ ಅಥವಾ ಮ್ಯಾಜಿಸ್ಟ್ರೇಟ್‌ಗೆ ವರದಿ ಮಾಡದೆ ಪರಾರಿಯಾದರೆ, ಅಂತವರು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗಲಿದ್ದಾರೆ.

ಮೂರು ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ- 1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್- 1898, ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಅನ್ನು ಬದಲಾಯಿಸುತ್ತದೆ. ಭಾರತೀಯ ನ್ಯಾಯ ಸಂಹಿತೆ ಜಾರಿಯಾದರೆ, ಭಾರತೀಯ ದಂಡ ಸಂಹಿತೆ(IPC) ರದ್ದಾಗಲಿದೆ.

ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನುಗಳಡಿ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆ: ಅಮಿತ್ ಶಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...