Homeಮುಖಪುಟವಿಶ್ವ ಕುಸ್ತಿ ಸಂಸ್ಥೆಯಿಂದ ಭಾರತೀಯ ಕುಸ್ತಿ ಫೆಡರೇಶನ್‌ ಅಮಾನತು: ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ವಿಶ್ವ ಕುಸ್ತಿ ಸಂಸ್ಥೆಯಿಂದ ಭಾರತೀಯ ಕುಸ್ತಿ ಫೆಡರೇಶನ್‌ ಅಮಾನತು: ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

- Advertisement -
- Advertisement -

ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು)]ಯು ಗುರುವಾರ (ಆಗಸ್ಟ್ 24) ಯು ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.

”ಕೇಂದ್ರ ಸರ್ಕಾರವು ರಾಷ್ಟ್ರೀಯ ಕುಸ್ತಿಪಟುಗಳನ್ನು ಕಡೆಗಣಿಸಿದೆ. ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯವನ್ನು ಇರಿಸುತ್ತಿದೆಯೇ ”ಎಂಬ ಅನುಮಾನವನ್ನು ಹುಟ್ಟುಹಾಕಿದೆ ” ಎಂದು ಹೇಳಿದ್ದಾರೆ.

ಡಬ್ಲ್ಯುಎಫ್‌ಐ ಸಂಸ್ಥೆಯಲ್ಲಿ ಚುನಾವಣೆ ಸರಿಯಾದ ಸಮಯಕ್ಕೆ ನಡೆಯದ ಕಾರಣ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ. ಜೂನ್ 2023 ರಲ್ಲಿ ಚುನಾವಣೆಗಳು ನಡೆಯಬೇಕಿತ್ತು, ಆದರೆ ಅವುಗಳನ್ನು ಮುಂದೂಡಲಾಯಿತು ಹಾಗಾಗಿ ಯುಡಬ್ಲ್ಯೂಡಬ್ಲ್ಯೂ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದೆ.

ಈ ಬೆಳವಣಿಗೆಯು, ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಧ್ವಜದ ಅಡಿಯಲ್ಲಿ ಭಾರತೀಯ ಕುಸ್ತಿಪಟುಗಳು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಮತ್ತು ಬದಲಿಗೆ ‘ತಟಸ್ಥ ಕ್ರೀಡಾಪಟುಗಳು’ ಎಂದು ಭಾಗವಹಿಸಬೇಕಾಗುತ್ತದೆ. ಅಲ್ಲದೆ, ಭಾರತೀಯ ಅಥ್ಲೀಟ್ ವಿಜೇತರ ವೇದಿಕೆಗೆ ಬಂದರೆ, ರಾಷ್ಟ್ರಗೀತೆಯನ್ನು ನುಡಿಸಲಾಗುವುದಿಲ್ಲ.

ಇದನ್ನೂ ಓದಿ: ಬ್ರಿಜ್‌ಭೂಷಣ್ ವಿರುದ್ಧ ಸಾಕಷ್ಟು ಪುರಾವೆಗಳಿವೆ: ನ್ಯಾಯಾಲಯಕ್ಕೆ ದೆಹಲಿ ಪೊಲೀಸರ ಹೇಳಿಕೆ

ಈ ಬಗ್ಗೆ ಎಕ್ಸಾನಲ್ಲಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ”ಯುಡಬ್ಲ್ಯೂಡಬ್ಲ್ಯೂ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದೆ.ಎಂದು ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ.

ಇದು ಇಡೀ ರಾಷ್ಟ್ರಕ್ಕೆ ತೀವ್ರ ಮುಜುಗರ ತಂದಿದೆ ಎಂದು ಹೇಳಿರುವ ಅವರು, ”ಕೇಂದ್ರ ಸರಕಾರವು ನಮ್ಮ ಕುಸ್ತಿಪಟುಗಳನ್ನು ನಾಚಿಕೆಗೇಡಿನ ದುರಹಂಕಾರದಿಂದ ನಡೆಸಿಕೊಳ್ಳುತ್ತಿದೆ. ನಮ್ಮ ಕುಸ್ತಿಪಟು ಸಹೋದರಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅದನ್ನು ಧಿಕ್ಕರಿಸುವ ಮೂಲಕ ನಮ್ಮ ಕುಸ್ತಿಪಟುಗಳನ್ನು ನಿರಾಸೆಗೊಳಿಸಿದೆ” ಎಂದು ಬರೆದಿದ್ದಾರೆ.

”ಕೇಂದ್ರ ಮತ್ತು ಬಿಜೆಪಿ ನಮ್ಮ ಅದಮ್ಯ ಸಹೋದರಿಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ಕೋಮುವಾದದಿಂದ ಕಿರುಕುಳ ನೀಡುತ್ತಲೇ ಇವೆ” ಎಂದು ಅವರು ಹೇಳಿದ್ದಾರೆ.

”ಭಾರತದ ಹೆಣ್ಣುಮಕ್ಕಳ ಘನತೆಗಾಗಿ ನಿಲ್ಲಲು ಸಾಧ್ಯವಾಗದವರ ವಿರುದ್ಧ ನಿಲ್ಲಬೇಕು ಮತ್ತು ಅವರನ್ನು ಶಿಕ್ಷಿಸಬೇಕು. ಲೆಕ್ಕಚುಕ್ತಾ ಮಾಡುವ ದಿನವು ತುಂಬಾ ದೂರವಿಲ್ಲ” ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.

ಈ ಅಮಾನತ್ತಿಗೆ ಕಾರಣ ಬಿಜೆಪಿ ಒಬ್ಬ ಸಂಸದ ಮತ್ತು ಅವರನ್ನು ಕೇಸರಿ ಪಕ್ಷದ ವರಿಷ್ಠರು ಬೆಂಬಲಿಸಿದ್ದಾರೆ ಎಂದು ಟಿಎಂಸಿ ರಾಜ್ಯಸಭಾ ಪಕ್ಷದ ನಾಯಕ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ.

”ಒಂದೆಡೆ, ತುಂಬಾ ಸಂತೋಷವಿದೆ; ನಮ್ಮ ಹೃದಯವು ಸಂತೋಷದಿಂದ ತುಂಬಿದೆ. ನಮ್ಮ ಚಾಂಪಿಯನ್‌ಗಳಾದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಮತ್ತೊಂದೆಡೆ, ಬಿಜೆಪಿಯ ಸಂಸದರಿಂದ ನಮಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಮಾನವಾಗಿದೆ. ವಿಶ್ವ ಕುಸ್ತಿ ಸಂಸ್ಥೆಯು ಭಾರತೀಯ ಒಕ್ಕೂಟವನ್ನು ಹೊರಹಾಕಿದೆ. ಇದು ಎಂತಹ ನಾಚಿಕೆಗೇಡಿನ ಸಂಗತಿ! ನಮಗೆ ಅಸಹ್ಯವಾಗಿದೆ” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...