Homeಮುಖಪುಟಮಧ್ಯಪ್ರದೇಶ: ಹಿಜಾಬ್ ವಿವಾದ; ಪ್ರಾಂಶುಪಾಲರು ಸೇರಿ ಮೂವರಿಗೆ ಜಾಮೀನು

ಮಧ್ಯಪ್ರದೇಶ: ಹಿಜಾಬ್ ವಿವಾದ; ಪ್ರಾಂಶುಪಾಲರು ಸೇರಿ ಮೂವರಿಗೆ ಜಾಮೀನು

- Advertisement -
- Advertisement -

ಮಧ್ಯಪ್ರದೇಶದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಬಂಧಿತ ಪ್ರಾಂಶುಪಾಲರು, ಶಿಕ್ಷಕ ಮತ್ತು ಸಿಬ್ಬಂದಿಗೆ  ಹೈಕೋರ್ಟ್ ಜಾಮೀನು ನೀಡಿದೆ.

ದಾಮೋಹ್‌ನ ಗಂಗಾ ಜಮ್ನಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಮೂವರಿಗೆ ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ವಿವಾದ ಭುಗಿಲೆದ್ದ ನಂತರ  ಪ್ರಾಂಶುಪಾಲರಾದ ಅಫ್ಶಾ ಶೇಖ್, ಗಣಿತ ಶಿಕ್ಷಕ ಅನಾಸ್ ಅಥರ್ ಮತ್ತು ಸಿಬ್ಬಂದಿ ರುಸ್ತಮ್ ಅಲಿ ಅವರನ್ನು ಬಂಧಿಸಲಾಗಿತ್ತು. ಎರಡು ತಿಂಗಳಿನಿಂದ ಇವರು ಜೈಲಿನಲ್ಲಿದ್ದರು.

ಪ್ರಮುಖ ಆರೋಪ ಶಾಲೆಯ ಆಡಳಿತ ಮಂಡಳಿ ವಿರುದ್ಧ ಇರುವ ಕಾರಣ ಪ್ರಕರಣದ ವಿಚಾರಣೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಗಮನಿಸಿ ನ್ಯಾಯಾಲಯವು ಜಾಮೀನು ನೀಡಿದೆ. ಆರೋಪಿಗಳಿಗೆ ತಲಾ 50,000ರೂ.ಗಳ ವೈಯಕ್ತಿಕ ಬಾಂಡ್‌ನ್ನು ನೀಡಲು ಸೂಚಿಸಲಾಗಿದೆ.

ಶಾಲೆಯಲ್ಲಿ ಮಧ್ಯಪ್ರದೇಶ ಶಿಕ್ಷಣ ಮಂಡಳಿ ಸೂಚಿಸದ ಅಥವಾ ಅನುಮೋದಿಸದ ಯಾವುದೇ ವಿಚಾರ ಅಥವಾ ಭಾಷೆಯನ್ನು ಓದಲು / ಅಧ್ಯಯನ ಮಾಡಲು ಇತರ ಧರ್ಮದ ವಿದ್ಯಾರ್ಥಿಗಳನ್ನು ಒತ್ತಾಯಿಸಬಾರದು ಎಂದು ಜಾಮೀನು ವೇಳೆ ನ್ಯಾಯಾಲಯ ಷರತ್ತು ವಿಧಿಸಿದೆ.

ಇದಲ್ಲದೆ ಇತರ ಧರ್ಮಗಳ ವಿದ್ಯಾರ್ಥಿಗಳಿಗೆ ಯಾವುದೇ ಧಾರ್ಮಿಕ ಶಿಕ್ಷಣ ಅಥವಾ ಇಸ್ಲಾಂ ಧರ್ಮಕ್ಕೆ ಸೇರಿದ ಯಾವುದೇ ಪುಸ್ತಕಗಳನ್ನು ನೀಡಬಾರದು, ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸಬಾರದು ಎಂದು ಕೋರ್ಟ್ ಇದೇ  ವೇಳೆ ಹೇಳಿದೆ.

ರಾಜ್ಯದ ಪರ ವಕೀಲ ಪ್ರದೀಪ್ ಗುಪ್ತಾ ಆರೋಪಿಗಳ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಆರೋಪಿಗಳ ಪರ ವಕೀಲ ಖಾಸಿಂ ಅಲಿ, ನನ್ನ ಕಕ್ಷಿದಾರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತಲೆಯ ಸ್ಕಾರ್ಪ್‌ನ್ನು ಶಾಲಾ ಆಡಳಿತ ಮಂಡಳಿ ಕಡ್ಡಾಯಗೊಳಿಸಿರುವುದು ಎಂದು ಹೇಳಿದ್ದಾರೆ.

ಮೇ.10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಸ್ಟರನ್ನು ಶಾಲಾ ಆವರಣದ ಹೊರಗೆ ಹಾಕಲಾಗಿತ್ತು. ಅದರಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು ಶಿರವಸ್ತ್ರವನ್ನು ಧರಿಸಿದ್ದರು. ಇದು ಬಲಪಂಥೀಯ ಗುಂಪುಗಳಿಂದ ಪ್ರತಿಭಟನೆಗೆ ಕಾರಣವಾಗಿದೆ. ಶಾಲೆಯಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಗೃಹ ಸಚಿವರು ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕೂಡ ಶಾಲೆಯನ್ನು ಟೀಕಿಸಿದ್ದರು.

ಇದನ್ನು ಓದಿ: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು...